ಅಡಿಕೆ ದರ ಕ್ವಿಂಟಾಲ್​ಗೆ 20 ಸಾವಿರ ಕಡಿಮೆಯಾಗಲು ಬಿಜೆಪಿ ಕಾರಣ? | ಗುಟ್ಕಾ ವ್ಯಾಪಾರಸ್ಥರ ಪರ ನಿಂತ ಮೋದಿ ಸರ್ಕಾರ | ಕಾಂಗ್ರೆಸ್​ ಆರೋಪವೇನು

ಮಿಜರೋಂ ಬಾರ್ಡರ್​ ಮೂಲಕ ಮಯನ್ಮಾರ್ ಮೂಲಕ ಅಕ್ರಮವಾಗಿ ಗುಟ್ಕಾ ಸರಭರಾಜಾಗುತ್ತಿದೆ. ಇತ್ತ ಇಂಡೋನೇಷ್ಯಾದಿಂದ ಶ್ರೀಲಂಕಾ ಮೂಲಕ ಅಡಿಕೆ ಅಕ್ರಮವಾಗಿ ಭಾರತ ಪ್ರವೇಶಿಸುತ್ತಿದೆ. ಈ ಕಳ್ಳಸಾಗಾಣಿಕೆ ಬಗ್ಗೆ ಬಿಜೆಪಿ ಕ್ರಮಕೈಗೊಂಡಿಲ್ಲ

ಅಡಿಕೆ ದರ  ಕ್ವಿಂಟಾಲ್​ಗೆ 20 ಸಾವಿರ ಕಡಿಮೆಯಾಗಲು ಬಿಜೆಪಿ  ಕಾರಣ? | ಗುಟ್ಕಾ ವ್ಯಾಪಾರಸ್ಥರ ಪರ ನಿಂತ ಮೋದಿ ಸರ್ಕಾರ | ಕಾಂಗ್ರೆಸ್​ ಆರೋಪವೇನು

ಅಡಿಕೆ ಬೆಳೆಗಾರರ ಸಮಸ್ಯೆ ಇದೀಗ ಬಿಜೆಪಿಯ ಪಾಲಿಗೆ ಮತ ಸಂಕಟವನ್ನು ತಂದುಕೊಡುವ ಹಾಗೆ ಕಾಣುತ್ತಿದೆ. ಇದಕ್ಕೆ ಕಾರಣ ಅಡಿಕೆ ದರ ಕುಸಿಯುತ್ತಿರುವುದು. ಈ ಸಂಬಂಧ ಕಾಂಗ್ರೆಸ್​ ಪಕ್ಷ ಬೆಳೆಗಾರರ ಸಮಸ್ಯೆ ಹಾಗೂ ಅಡಿಕೆ ದರ ವಿಚಾರವನ್ನು ಗಂಭೀರವಾಗಿ ಕೈಗೆತ್ತಿಕೊಂಡಿದೆ. ಇದಕ್ಕೆ ಸಾಕ್ಷಿ ಎಂಬಂತೆ ಇವತ್ತು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್​ ಕಚೇರಿಯಲ್ಲಿ (District congress committee) ಸುದ್ದಿಗೋಷ್ಟಿ ನಡೆಸಿದ ಮುಖಂಡ ರಮೇಶ್​ ಹೆಗ್ಡೆಯವರು  ಭೂತಾನ್​ ಅಡಿಕೆ ಭಾರತಕ್ಕೆ ಬಂದ ಮೇಲೆ, ಅಡಿಕೆ ದರ ಕ್ವಿಂಟಾಲ್​ಗೆ 20 ಸಾವಿರ ಕಡಿಮೆಯಾಗಿದೆ ಎಂದು ಆರೋಪಿಸಿದ್ದಾರೆ. 

ಇದನ್ನು ಸಹ ಓದಿ : ತುಂಡಾಗಿ ಬಿದ್ದಿತ್ತು ಕರೆಂಟ್ ಲೈನ್​ | ಪತ್ನಿಯನ್ನ ರಕ್ಷಿಸುವ ವೇಳೆ, ವಿದ್ಯುತ್​ ಸ್ಪರ್ಶಿಸಿ ಪತಿ ಸಾವು/ ಹೊಸನಗರದಲ್ಲೊಂದು ದುರಂತ ಘಟನೆ

ರಮೇಶ್ ಹೆಗ್ಡೆ ಆರೋಪಗಳೇನು? 

  • 1) 13 ಸಾವಿರ ಮೆಟ್ರಿಕ್​ ಟನ್​ ಅಡಿಕೆಯನ್ನು ಭೂತಾನ್​ನಿಂದ ಪ್ರತಿವರ್ಷ ಆಮದು ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಇದರಿಂದಲೇ ಮುಖ್ಯವಾಗಿ ಅಡಿಕೆ ದರ ಕಡಿಮೆಯಾಗುತ್ತಿದೆ. 
  • 2) ಕ್ವಿಂಟಾಲ್​ಗೆ 59 ಸಾವಿರ ರೂಪಾಯಿನಷ್ಟಿದ್ದ ಅಡಿಕೆ ಬೆಲೆ ಇದೀಗ 39 ಸಾವಿರ ರೂಪಾಯಿಗೆ ಇಳಿದಿದೆ. ಹಾಗಿದ್ದರೂ ಬೆಳೆಗಾರರ ನೆರವಿಗೆ ಬಿಜೆಪಿ ಮುಂದಾಗುತ್ತಿಲ್ಲ
  • 3) ಮಿಜರೋಂ ಬಾರ್ಡರ್​  ಮೂಲಕ ಮಯನ್ಮಾರ್ ಮೂಲಕ ಅಕ್ರಮವಾಗಿ ಗುಟ್ಕಾ ಸರಭರಾಜಾಗುತ್ತಿದೆ. ಇತ್ತ ಇಂಡೋನೇಷ್ಯಾದಿಂದ ಶ್ರೀಲಂಕಾ ಮೂಲಕ ಅಡಿಕೆ ಅಕ್ರಮವಾಗಿ ಭಾರತ ಪ್ರವೇಶಿಸುತ್ತಿದೆ. ಈ ಕಳ್ಳಸಾಗಾಣಿಕೆ ಬಗ್ಗೆ ಬಿಜೆಪಿ ಕ್ರಮಕೈಗೊಂಡಿಲ್ಲ
  • 4) ಬಿಜೆಪಿ ಗುಜರಾತ್​, ರಾಜಸ್ತಾನ ಸೇರಿದಂತೆ ವಿವಿಧ ರಾಜ್ಯಗಳ ಗುಟ್ಕಾ ವಹಿವಾಟು ದಾರರ ಬೆಂಬಲಕ್ಕೆ ನಿಂತಿದೆ. ಹಾಗಾಗಿ ಅಡಿಕೆ ಕಳ್ಳ ಸಾಗಾಣಿಕಯ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ.
  • 5) ದೇಶದಲ್ಲಿ ಒಟ್ಟು ವರ್ಷ ವರ್ಷ 10 ಲಕ್ಷ ಮೆಟ್ರಿಕ್​ ಟನ್​ ಅಡಿಕೆ ಉತ್ಪಾದನೆಯಾಗುತ್ತದೆ. ಈ ಪೈಕಿ ಶೇಕಡಾ 80 ರಷ್ಟು ಕರ್ನಾಟಕದಲ್ಲಿ ಆಗುತ್ತದೆ. ರಾಜ್ಯ 23 ಜಿಲ್ಲೆಗಳಲ್ಲಿ ಅಡಿಕೆ ಬೆಳೆಯುತ್ತಿದ್ದರೇ, ಈ ಪೈಕಿ 10 ಜಿಲ್ಲೆಗಳು ಅಡಿಕೆ ಬೆಳೆಯನ್ನು ಅವಲಂಭಿಸಿದೆ.ಹಾಗಿದ್ದರೂ ಅಡಿಕೆ ಬೆಳೆ ಕುಸಿತ ಹಾಗೂ ಎಲೆಚುಕ್ಕಿ ರೋಗ ನಿರ್ವಹಣೆ ಬಗ್ಗೆ ಬಿಜೆಪಿ ಸಮರ್ಪಕ ಕ್ರಮಕೈಗೊಂಡಿಲ್ಲ

ಇದನ್ನು ಸಹ ಓದಿ : ಶಿರಾಳಕೊಪ್ಪ | ಆಸ್ತಿ ಕೊಡದ ಅಪ್ಪ ಮತ್ತೊಂದು ಮದುವೆಯಾದ, ಸಿಟ್ಗಿಗೆದ್ದ ಮಕ್ಕಳು ಸುಪಾರಿ ಕೊಟ್ಟು ತಂದೆಯನ್ನೆ ಕೊಂದರು

ಮತ್ತಷ್ಟು ಸುದ್ದಿಗಳಿಗಾಗಿ ನಮ್ಮ ವಾಟ್ಸ್ಯಾಪ್​ ಗ್ರೂಪ್​ನ ಲಿಂಕ್​ಗೆ ಕ್ಲಿಕ್ ಮಾಡಿ :  Whatsapp link