ಆನವಟ್ಟಿ ಪೊಲೀಸರ ಕಾರ್ಯಾಚರಣೆ | ಸಿಕ್ಕಿಬಿದ್ದ ಮನೆಗಳ್ಳ | ವಶಕ್ಕೆ ಸಿಕ್ಕಿದ್ದೇನು ಗೊತ್ತಾ?

Anavatti police station staff's operation, theft case solved

ಆನವಟ್ಟಿ ಪೊಲೀಸರ ಕಾರ್ಯಾಚರಣೆ | ಸಿಕ್ಕಿಬಿದ್ದ ಮನೆಗಳ್ಳ | ವಶಕ್ಕೆ ಸಿಕ್ಕಿದ್ದೇನು ಗೊತ್ತಾ?
Anavatti police station

SHIVAMOGGA | MALENADUTODAY NEWS | May 19, 2024  ಮಲೆನಾಡು ಟುಡೆ 

ಮನೆ ಕಳ್ಳತನ ಮಾಡಿದ ವ್ಯಕ್ತಿಯನ್ನ ಪೊಲೀಸರು ಬಂಧಿಸಿ ಆತನಿಂದ ಸುಮಾರು ಐದು ಲಕ್ಷ ಮೌಲ್ಯದ ಚಿನ್ನ ವಶಪಡಿಸಿಕೊಂಡಿದ್ದಾರೆ.  ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಜಡೆ ಗ್ರಾಮದ ಸದಾಶಿವಗೌಡ ಎಂಬುವವರ ಮನೆಯ ಬೀಗ ಮುರಿದು ಬಂಗಾರದ ಒಡವೆ ಮತ್ತು ನಗದು ಕಳ್ಳತನ ಮಾಡಲಾಗಿತ್ತು. ಈ ಸಂಬಂಧ  ಆನವಟ್ಟಿ ಠಾಣೆ ಪೊಲೀಸರು  ಪ್ರಕರಣ ದಾಖಲಿಸಿದ್ದರು. 

 

ಕಳೆದ ಫೆಬ್ರುವರಿ 2ರಂದು ಕಳ್ಳತನ ನಡೆದಿತ್ತು. ಈ ಬಗ್ಗೆ ಸದಾಶಿವಗೌಡ ಆನವಟ್ಟಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ನಡೆಸಿದ ಆನವಟ್ಟಿ ಠಾಣೆಯ ಪಿಎಸ್‌ಐಗಳಾದ ವೈ.ಕೆ.ಶಿವಾನಂದ, ವಿಠ್ಠಲ್ ಅಗಾಸಿ ನೇತೃತ್ವದ ತಂಡ ಶನಿವಾರ ಶಿವಮೊಗ್ಗ ತಾಲ್ಲೂಕಿನ ಹಸೂಡಿ ಫಾರಂ ಬಳಿಯ ಹಕ್ಕಿಪಿಕ್ಕಿ ಕ್ಯಾಂಪ್‌ನ ಬಸಣ್ಣ ಅಲಿಯಾಸ್ ಶರಫೀಯ (26) ಎಂಬುವನನ್ನು ಬಂಧಿಸಿದೆ. ಬಂಧಿತನಿಂದ ₹4.85 ಲಕ್ಷ ಮೌಲ್ಯದ ಒಟ್ಟು 87 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.