POCSO case filed against BSY | ಬಿಎಸ್​ವೈ ವಿರುದ್ಧ ಫೋಕ್ಸೋ ಕೇಸ್ ! ಮಾಜಿ ಡಿಸಿಎಂ ಕೆ.ಎಸ್​.ಈಶ್ವರಪ್ಪ ಹೇಳಿದ್ದೇನು ಓದಿ!

POCSO case filed against BSY Read what former Deputy CM KS Eshwarappa said

POCSO case filed against BSY  |  ಬಿಎಸ್​ವೈ ವಿರುದ್ಧ ಫೋಕ್ಸೋ ಕೇಸ್ ! ಮಾಜಿ ಡಿಸಿಎಂ ಕೆ.ಎಸ್​.ಈಶ್ವರಪ್ಪ ಹೇಳಿದ್ದೇನು ಓದಿ!
POCSO case filed against BSY

shivamogga Mar 15, 2024 :POCSO case filed against BSY  ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರ ವಿರುದ್ಧ ಬೆಂಗಳೂರು ಸದಾಶಿವ ನಗರ ಪೊಲೀಸ್ ಸ್ಟೇಷನ್​ನಲ್ಲಿ ಫೋಕ್ಸೋ ಕೇಸ್ ದಾಖಲಾಗಿದೆ. ಇದೇ ಗುರುವಾರ ಪ್ರಕರಣ ಸಂಬಂದ ಮಹಿಳೆಯೊಬ್ಬರು ದೂರು ನೀಡಿದ್ದಾರೆ. ಈ ಸಂಬಂಧ ಶಿವಮೊಗ್ಗದಲ್ಲಿ ಕೆ.ಎಸ್.ಈಶ್ವರಪ್ಪ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. 

ರಾಜಕೀಯ ಬಿನ್ನಾಭಿಪ್ರಾಯಗಳ ಹೊರತಾಗಿ ಕೆ.ಎಸ್​.ಈಶ್ವರಪ್ಪ  ಬಿಎಸ್​ ಯಡಿಯೂರಪ್ಪ  (B S Yediyurappa)  ರವರ ಪರವಾಗಿ ನಿಂತಿದ್ದು ಯಡಿಯೂರಪ್ಪನವರು ಎಂತಹವರು ಎಂಬುದು ನನಗೆ ಚೆನ್ನಾಗಿ ಗೊತ್ತಿದೆ. ಅವರನ್ನು ಇವತ್ತಿನಿಂದ ನೋಡುತ್ತಿಲ್ಲ ಬಹಳ ಹಿಂದಿನಿಂದಲೂ ನೋಡಿಕೊಂಡು ಬಂದಿದ್ದೇನೆ. ಅವರ ಸ್ವಭಾವದ ಬಗ್ಗೆ ನನಗೆ ಗೊತ್ತಿದೆ. ಫೋಕ್ಸೋ ಕೇಸ್ ದಾಖಲಾಗಿದೆ ಅವರ ವಿರುದ್ಧ ಎಂಬ ಸುದ್ದಿ ನನ್ನ ಕಿವಿಗೂ ಬಿದ್ದಿದೆ. ಆದರೆ ಇದೊಂದು ಷ್ಯಡ್ಯಂತ್ರ ಅಷ್ಟೆ ಹೊರತಾಗಿ ಮತ್ತೇನು ಅಲ್ಲ. ಯಡಿಯೂರಪ್ಪನವರನ್ನ ಹಣಿಯಲು ಯಾರೋ ಮಾಡಿರುವ ಷಡ್ಯಂತ್ರವಿದು ಎಂದು ಬಿಎಸ್​ವೈ ಪರವಾಗಿ ಮಾತನಾಡಿದ್ದಾರೆ. 

ಕೇಸ್​ ಕೊಟ್ಟಿರುವ ಮಹಿಳೆಯು ಇದುವರೆಗೂ 53 ಮಂದಿ ವಿರುದ್ಧ ಕೇಸ್ ದಾಖಲಿಸಿದ್ದಾರೆ ಎಂಬ ಮಾಹಿತಿ ಇದೆ. ಈ ಆರೋಪದಿಂದ ಬಿಎಸ್​ವೈ ಮುಕ್ತರಾಗಿ ಹೊರಕ್ಕೆ ಬರುತ್ತಾರೆ ಎಂಬ ವಿಶ್ವಾಸವಿದೆ ಎಂದಿದ್ದಾರೆ.