ಹಾವೇರಿ ಟಿಕೆಟ್ ಮಿಸ್ ಆದ ಬೆನ್ನಲ್ಲೆ ಕೆ.ಎಸ್​. ಈಶ್ವರಪ್ಪ ಪುತ್ರ ಕೆ.ಇ. ಕಾಂತೇಶ್​ರಿಗೆ ಮತ್ತೊಂದು ಆಫರ್​

Malenadu Today

shivamogga Mar 14, 2024  ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ಮಿಸ್ ಆದ ಬೆನ್ನಲ್ಲೆ ಮಾಜಿ ಡಿಸಿಎಂ ಕೆ.ಎಸ್​.ಈಶ್ವರಪ್ಪ ತಮ್ಮ ಮಾತಿನ ಬಾಣವನ್ನು ಮಾಜಿ ಸಿಎಂ ಯಡಿಯೂರಪ್ಪನವರ ವಿರುದ್ಧ ತಿರುಗಿಸಿದ್ದಾರೆ. ನಿನ್ನೆ ರಾತ್ರಿ ನಡೆದ ಸುದ್ದಿಗೋಷ್ಟಿಯಲ್ಲಿ ಬಿಎಸ್​ವೈ ಮೋಸ ಮಾಡಿದ್ರು ಎಂದಿರುವ ಅವರು, ಅದರ ಜೊತೆಯಲ್ಲಿ  ತಮ್ಮ ಮಗನಿಗೆ ಬಂದಿರುವ ಆಫರ್​ ಬಗ್ಗೆಯು ತಿಳಿಸಿದ್ದರು..

ಕೆಎಸ್ ಈಶ್ವರಪ್ಪ  ಬಂಡಾಯದ ಬಾವುಟಹಾರಿಸುತ್ತಿದ್ದಂತೆ ಈಶ್ವರಪ್ಪ ಅವರಪುತ್ರನ ಮನವೊಲಿಕೆಪ್ರಯತ್ನಗಳೂ ಆರಂಭವಾಗಿವೆ ಎಂಬುದಕ್ಕೆ ಅವರ ಮಾತುಗಳು ಸಾಕ್ಷಿಯಾಗಿತ್ತು. 

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಧಾ ಮೋಹನ್ ಅಗರ್‌ವಾಲ್ ಅವರು ಈಶ್ವರಪ್ಪ ಅವರಿಗೆ ಕರೆಮಾಡಿ ಪುತ್ರ ಕಾಂತೇಶ್‌ಗೆವಿಧಾನ ಪರಿಷತ್ ಪದವೀಧರ ಕ್ಷೇತ್ರದ ಟಿಕೆಟ್ ಕೊಡುವ ಸಂಬಂಧ ಕೇಂದ್ರದ ನಾಯಕರ ಜೊತೆ ಮಾತನಾಡುವುದಾಗಿ ತಿಳಿಸಿದ್ದಾರೆ. 

ಈ ವಿಚಾರವನ್ನು ಸ್ವತಃ ಈಶ್ವರಪ್ಪ ಅವರೇ ತಿಳಿಸಿದ್ದಾರೆ. ಆದರೆ ನಾನು ಯಾರೊಂದಿಗೂ ಮಾತನಾಡುವುದಿಲ್ಲ ಎಂದಿರುವ ಈಶ್ವರಪ್ಪ ಅಲ್ಲದೆ ಯಾವುದರ ಕುರಿತು ಇನ್ನೂ ತೀರ್ಮಾನವನ್ನೂ ತಿಳಿಸಿಲ್ಲ.  

Share This Article