Shivamogga Mar 9, 2024 ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದಂತೆ ಬಿಜೆಪಿ ಇನ್ನೂ ಕೂಡ ಅಭ್ಯರ್ಥಿಗಳನ್ನ ಫೈನಲ್ ಮಾಡಿಲ್ಲ. ಅದರಲ್ಲಿಯು ವಿಶೇಷವಾಗಿ ಹಾವೇರಿ ಲೋಕಸಭಾ ಚುನಾವಣಾ ಕ್ಷೇತ್ರದಲ್ಲಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ರವರ ಪುತ್ರ ಕೆ.ಇ.ಕಾಂತೇಶ್ ಗೆ ಟಿಕೆಟ್ ಸಿಗೋದು ಅನುಮಾನ ಎಂಬ ಮಾತುಗಳು ಬಲುಜೋರಾಗಿ ಕೇಳಿಬರುತ್ತಿದೆ. ಈ ನಿಟ್ಟಿನಲ್ಲಿ ಮಾಧ್ಯಮಗಳು ಈಶ್ವರಪ್ಪನವರ ಪುತ್ರನ ರಿಯಾಕ್ಷನ್ ಕೇಳಿತ್ತು. ಈ ವೇಳೆ ಮಾತನಾಡಿದ ಅವರು, ನನಗೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಆಶೀರ್ವಾದ ಇದೆ ಎಂದು ಹೇಳಿದ್ದಾರೆ.
ಮಾಜಿ ಸಿಎಂರನ್ನ 10 ತಿಂಗಳ ಕೆಳಗೆ ನಾನು ಮತ್ತು ತಮ್ಮ ತಂದೆ ರಾಷ್ಟ್ರೀಯ ನಾಯಕ ಬಿಎಸ್ ಯಡಿಯೂರಪ್ಪನವರ ನಿವಾಸಕ್ಕೆ ಹೋಗಿದ್ದೆ ಆ ಸಂದರ್ಭದಲ್ಲಿ ಅವರು ನನಗೆ ಪೂರ್ಣ ಪ್ರಮಾಣದಲ್ಲಿ ಆಶೀರ್ವಾದ ಮಾಡಿದ್ದಾರೆ. ಅಲ್ಲದೆ ನಾನು ಖುದ್ದು ಬಂದು ಪ್ರಚಾರ ಮಾಡುತ್ತೇನೆ ಎಂದಿದ್ದರು. ಅವರಷ್ಟೆ ಅಲ್ಲದೆ ಸಂಸದ ಬಿ.ವೈ.ರಾಘವೇಂದ್ರ ಹಾಗೂ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ರವರು ನನಗೆ ಟಿಕೆಟ್ ಕೊಡಿಸುತ್ತಾರೆ ಎಂಬ ನಂಬಿಕೆ ನನಗಿದೆ ಎಂದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಈಶ್ವರಪ್ಪರಿಗೆ ಟಿಕೆಟ್ ಇಲ್ಲವಾದಾಗ, ಅವರು ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗಬೇಕು ಎಂದಾಗ ಅವರು ತಕ್ಷಣವೇ ಅದಕ್ಕೆ ಸಂಬಂಧಿಸಿದ ಪತ್ರವನ್ನು ಕೇಂದ್ರಕ್ಕೆ ಕಳುಹಿಸಿದ್ದಾರೆ. ಆ ನಿಟ್ಟಿನಲ್ಲಿ ಪಕ್ಷದ ಒಂದು ಕಣ್ಣಿಗೆ ಸುಣ್ಣ ಒಂದು ಕಣ್ಣಿಗೆ ಬೆಣ್ಣೆ ಎಂದು ವ್ಯತ್ಯಾಸ ಮಾಡುವುದಿಲ್ಲ. ಪಕ್ಷ ತಮಗೆ ತಾಯಿ ಇದ್ದಂತೆ. ಪಕ್ಷ ಓಡಾಡು ಎಂದ ನಿಟ್ಟಿನಲ್ಲಿ ಅಲ್ಲಿ ಓಡಾಡಿದ್ದೇನೆ. ಭಾರತೀಯ ಜನತಾ ಪಕ್ಷ ಈಶ್ವರಪ್ಪನವರ ಕುಟುಂಬಕ್ಕೆ ಒಳ್ಳೆಯದು ಮಾಡುತ್ತದೆ. ಪಕ್ಷದ ಚೌಕಟ್ಟಿನಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದಿದ್ದಾರೆ.