ಬಿವೈ ರಾಘವೇಂದ್ರನ ವಿರುದ್ಧದ ಕೇಸ್ ಗೆ ತಡೆಯಾಜ್ಞೆ! ಏನಿದು ಪ್ರಕರಣ
Injunction against the case against BY Raghavendra! What is the case

Shivamogga Apr 17, 2024 | BY Raghavendra | ಲೋಕಸಭಾ ಚುನಾವಣೆ 2024 ರ ಬಿಸಿ ಜೋರಾಗುತ್ತಲೇ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಹೆಚ್ಚಾಗುತ್ತಿದೆ. ಇದಕ್ಕೆ ಪೂರಕ ಎಂಬಂತೆ, ಶಿವಮೊಗ್ಗ ಸಂಸದ ಹಾಗೂ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರರವರ ವಿರುದ್ಧ ಚಿತ್ರದುರ್ಗ ಜಿಲ್ಲೆಯಲ್ಲಿ ಎಲೆಕ್ಷನ್ ಕೋಡ್ ಆಫ್ ಕಂಡೆಕ್ಟ್ ಉಲ್ಲಂಘನೆ ಸಂಬಂಧ ಎಫ್‌ಐಆರ್ ದಾಖಲಾಗಿತ್ತು.. ಚುನಾವಣೆ ಕರ್ತವ್ಯದಲ್ಲಿರುವ ಅಧಿಕಾರಿ ಅವಿನಾಶ್ ಎಂಬವರು ನೀಡಿದ ದೂರಿನನ್ವಯ ಈ ಎಫ್‌ಐಆರ್ ದಾಖಲಿಸಿದ್ದರು.
ಪೂರ್ತಿ ಮಾಹಿತಿ : ಲೋಕಸಭಾ ಚುನಾವಣೆ -2024 ಬಿ.ವೈ.ರಾಘವೇಂದ್ರ ವಿರುದ್ದ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ FIR
ಸದ್ಯ ಈ ವಿಚಾರದಲ್ಲಿ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಚಿತ್ರದುರ್ಗದ ಭೋವಿ ಮಠದಲ್ಲಿರಾಜಕೀಯ ಭಾಷಣ ಮಾಡುವ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಮೇರೆಗೆ ಶಿವಮೊಗ್ಗ ಸಂಸದ ಬಿ. ವೈ.ರಾಘವೇಂದ್ರ ವಿರುದ್ದ ಚಿತ್ರದುರ್ಗ ಗ್ರಾಮಾಂತರ ಪೊಲೀಸರು ದಾಖಲಿಸಿದ್ದ ಎಫ್ ಐಆರ್ ಗೆ ಹೈಕೋರ್ಟ್ ಮಂಗಳವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ. ಎಫ್‌ಐಆರ್ ರದ್ದು ಕೋರಿ ಬಿ.ವೈ. ರಾಘವೇಂದ್ರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ಅರ್ಜಿದಾರರ ಪರ ವಕೀಲ ಸಂದೀಪ್ ಎಸ್.. ಪಾಟೀಲ್, ಅರ್ಜಿದಾರರು ಎಸಗಿದ್ದಾರೆನ್ನಲಾದ ಅಪರಾಧಗಳ ಕುರಿತು ಎಫ್‌ಐಆರ್ ನಲ್ಲಿ ಮಾಹಿತಿ ನೀಡಿಲ್ಲ. ಕ್ರಿಮಿನಲ್ ಪ್ರಕ್ರಿಯೆ ಮುಂದು ವರಿಸಿದರೆ ಕಾನೂನಿಗೆ ವಿರುದ್ಧವಾಗಿ ನಡೆದಂತಾ ಗುತ್ತದೆ. ಈ ಕಾರಣದಿಂದ ಎಫ್ ಐಆರ್ ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಪ್ರಕ್ರಿಯೆಗಳನ್ನು ರದ್ದುಗೊಳಿಸಬೇಕು.