ಚಿನ್ನದ ಅಂಗಡಿಯಲ್ಲಿ ಮೂಗುತಿ ಖರೀದಿಸಿದ ಜೋಡಿ ಲೇಡಿ | ಸಿಸಿ ಕ್ಯಾಮರಾ ನೋಡಿದಾಗ ಮಾಲೀಕನಿಗೆ ಶಾಕ್

A gold chain was stolen by women who bought nose rings in Shimoga's Gandhi Bazaar

ಚಿನ್ನದ ಅಂಗಡಿಯಲ್ಲಿ  ಮೂಗುತಿ ಖರೀದಿಸಿದ ಜೋಡಿ ಲೇಡಿ | ಸಿಸಿ ಕ್ಯಾಮರಾ ನೋಡಿದಾಗ ಮಾಲೀಕನಿಗೆ ಶಾಕ್
Shimoga Gandhi Bazaar

SHIVAMOGGA | MALENADUTODAY NEWS | Apr 25, 2024 | Shimoga Gandhi Bazaar   

ಶಿವಮೊಗ್ಗ ನಗರದ ಗಾಂಧಿ ಬಜಾರ್‌ನಲ್ಲಿ ಮೂಗುತಿ ಖರೀದಿಸಿದ ಮಹಿಳೆಯರು ಒಂದುವರೆ ಲಕ್ಷ ಮೌಲ್ಯದ ಸರ ಕದ್ದೊಯ್ದ ಘಟನೆ ಬಗ್ಗೆ ವರದಿಯಾಗಿದೆ. ಇಲ್ಲಿನ ಚಿನ್ನದಂಗಡಿಯೊಂದರಲ್ಲಿ ಈ ಘಟನೆ ನಡೆದಿದ್ದು, ಕೋಟೆ ಪೊಲೀಸ್‌ ಸ್ಟೇಷನ್‌ ನಲ್ಲಿ ಕೇಸ್‌ ದಾಖಲಾಗಿದೆ. 

ಪ್ರಕರಣ ನಡೆದಿದ್ದೇಗೆ? 

ಗಾಂಧಿ ಬಜಾರ್‌ನಲ್ಲಿರುವ ಚಿನ್ನಾಭರಣ ಅಂಗಡಿಯಲ್ಲಿ ಇಬ್ಬರು ಮಹಿಳೆಯರು ಆಗಮಿಸಿದ್ದಾರೆ. ಅಂಗಡಿ ಮಾಲೀಕರಿಗೆ ಚಿನ್ನದ ಸರದ ಡಿಸೈನ್‌ ತೋರಿಸುವಂತೆ ತಿಳಿಸಿದ್ದಾರೆ. ಅದರಂತೆ ಮಾಲೀಕರು ಚಿನ್ನದ ಸರವಿದ್ದ ಟ್ರೇ ತೆಗೆದು ತೋರಿಸಿದ್ದಾರೆ. ಅದೇ ವೇಳೆ ಇನ್ನೊಬ್ಬ ಗ್ರಾಹಕರು ಅಲ್ಲಿಗೆ ಬಂದಿದ್ದಾರೆ. ಮಾಲೀಕರು ಅವರತ್ತ ಗಮನ ಹರಿಸಿದ ಬೆನ್ನಲ್ಲೆ ಮಹಿಳೆಯರು ಟ್ರೇನಲ್ಲಿದ್ದ ಚಿನ್ನದ ಸರವನ್ನ ಕದ್ದಿದ್ದಾರೆ. ಅಲ್ಲದೆ ಶಾಸ್ತ್ರಕ್ಕೆ ಚಿನ್ನದ ಮೂಗುತಿಯೊಂದನ್ನ ಖರೀದಿಸಿ ಅಲ್ಲಿಂದ ವಾಪಸ್‌ ಆಗಿದ್ದಾರೆ. 

ಅಂಗಡಿ ಮಾಲೀಕನಿಗೆ ಆ ಸಂದರ್ಭದಲ್ಲಿ ಅನುಮಾನ ಬಂದಿರಲಿಲ್ಲ. ಆನಂತರ  ಅಂಗಡಿಯಲ್ಲಿ ಸ್ಟಾಕ್ ಪರಿಶೀಲಿಸುತ್ತಿದ್ದಾಗ ಚಿನ್ನದ ಸರ ಕಳುವಾಗಿರುವ ಅಂಶ ಬೆಳಕಿಗೆ ಬಂದಿದೆ. ಸದ್ಯ ಪ್ರಕರಣವನ್ನ ದಾಖಲಿಸಿರುವ ಪೊಲೀಸರು ತನಿಖೆ ನಡೆಸ್ತಿದ್ದಾರೆ.