MALENADU TODAY SUNDAY STORY: ಎಲ್ಲೋ ಕುಳಿತು ಪೆಡ್ಲರ್ಗಳು ಶಿವಮೊಗ್ಗದಲ್ಲಿ ಗಾಂಜಾ ಡೀಲ್ ಹೇಗೆ ಕುದುರಿಸ್ತಾರೆ ಗೊತ್ತಾ? ವಾಟ್ಸ್ಯಾಪ್ ಮಾಲಾಮಾಲ್ ಇದು ಮತ್ತಿನ ಲೋಕದ ರೋಚ‘ಕತೆ!’ story-drug-world-malnad Malenadu today story / SHIVAMOGGA
ಕ್ಲೀನ್ ಇಂಡಿಯಾದ ಮಾದರಿಯಲ್ಲಿ ಶಿವಮೊಗ್ಗವೂ ಸಹ ಗಾಂಜಾದಿಂದ ಮುಕ್ತಗೊಳ್ಳಬೇಕಿದೆ. ನಶೆಯ ಮತ್ತಿನಲ್ಲಿ ನಡೆಯುತ್ತಿರುವ ಸೋಕಾಲ್ಡ್ ಅಕ್ರಮ ವ್ಯವಹಾರಗಳು ನಿಲ್ಲಬೇಕಿದೆ. ಈ ನಿಟ್ಟಿನಲ್ಲಿ ಶಿವಮೊಗ್ಗ ಎಸ್ಪಿ ಲಕ್ಷ್ಮೀಪ್ರಸಾದ್ ಉತ್ತಮ ಹೆಜ್ಜೆಯನ್ನೆ ಇರಿಸಿದ್ದಾರೆ. ಇದಕ್ಕೆ ಬೆಂಬಲವಾಗಿ ಮಲೆನಾಡು ಟುಡೇ ಕೂಡ ನಿಂತಿದೆ. ಮಲೆನಾಡು ಟುಡೆ ಗಾಂಜಾ ರಾಕೇಟ್ ಜಾಲದ ಬಗ್ಗೆ ಎಳೆ ಎಳೆಯಾಗಿ ಸುದ್ದಿ ಪ್ರಕಟಿಸುತ್ತಲೇ ಇದೆ. ಗಾಂಜಾ ಮೀನಿನ ಲಾರಿಯಲ್ಲಿ ಹೇಗೆ ಸಾಕಾಣಿಕೆಯಾಗುತ್ತೆ ಎಂಬ ವರದಿ ಪ್ರಕಟಿಸಲಾಗಿತ್ತು.
ಇಂದು ಗಾಂಜಾ ವ್ಯವಹಾರ ಹೇಗೆ ನಡೆಯುತ್ತದೆ ಎಂಬ ಬಗ್ಗೆ ಜಾಡು ಹಿಡಿದು ಹೊರಟಾಗ ಅಚ್ಚರಿಯ ವಿಚಾರಗಳು ಗಾಂಜಾ ವ್ಯವಹಾರದಲ್ಲಿ ಅಡಗಿರುವುದು ಬೆಳಕಿಗೆ ಬಂತು. ಆಂದ್ರ ಪ್ರದೇಶ ತಮಿಳುನಾಡು ಕೇರಳ ಕರ್ನಾಟಕ ರಾಜ್ಯಗಳು ಸೇರಿದಂತೆ ದೇಶದ ಯಾವುದೇ ಭಾಗದಲ್ಲಿ ಗಾಂಜಾ ವ್ಯವಹಾರವಾಗುವುದೇ ವಿಡಿಯೋ ಕಾಲ್ ನಲ್ಲಿ. ವಾಟ್ಸಾಪ್ ವಿಡಿಯೋ ಕಾಲ್ ಮಾಡಿದ್ರೆ..ಯಾವ ಪೊಲೀಸ್ರು ಟ್ರೆಸ್ ಮಾಡೋದಕ್ಕೆ ಸಾಧ್ಯವಿಲ್ಲ. ಎಂಡ್ ಟು ಎಂಡ್ ಎನ್ ಕ್ರಿಪ್ಟೆಡ್ ವ್ಯವಸ್ಥೆಯನ್ನೇ ದಂಧೆಕೋರರು ಲಾಭವನ್ನಾಗಿ ಮಾಡಿಕೊಂಡಿದ್ದಾರೆ.
ಉದಾಹರಣೆಗೆ ಶಿವಮೊಗ್ಗದ ಪೆಡ್ಲರ್ ಗೆ ಆಂದ್ರಪ್ರದೇಶದಿಂದ ಗಾಂಜಾ ವ್ಯವಹಾರ ಮಾಡಿ ತರಿಸಿಕೊಳ್ಳಬೇಕು ಎಂದರೆ ಇಬ್ಬರು ವಿಡಿಯೋ ಕಾಲ್ ನಲ್ಲಿಯೇ ಸಂಭಾಷಣೆ ಮಾಡುತ್ತಾರೆ. ಆಂದ್ರದ ವ್ಯಕ್ತಿ ತನ್ನಲ್ಲಿರುವ ಗಾಂಜಾ ವೆರೈಟಿಯನ್ನು ವಿಡಿಯೋ ಕಾಲ್ ನಲ್ಲಿಯೇ ತೋರಿಸ್ತಾನೆ. ತನಗಿಷ್ಟವಾದ ಮಾಲನ್ನು ಶಿವಮೊಗ್ಗದ ವ್ಯಕ್ತಿ ಆಯ್ಕೆ ಮಾಡಿಕೊಳ್ಳುತ್ತಾನೆ. ನಿಗದಿಯಾದ ಗಾಂಜಾವನ್ನೇ ವಿಡಿಯೋ ಕಾಲ್ ನಲ್ಲಿಯೇ ಪ್ಯಾಕ್ ಮಾಡಿ..ಅದನ್ನು ಮೀನಿನ ಲಾರಿಗೆ ಹಾಕುತ್ತಾನೆ.ಯಾವಾಗ ತನ್ನ ಮಟೀರಿಯಲ್ ಲಾರಿಯಲ್ಲಿ ಸುರಕ್ಷಿತವಾಗಿದೆ ಅಂತಾ ಶಿವಮೊಗ್ಗದ ವ್ಯಕ್ತಿಗೆ ಗೊತ್ತಾಗುತ್ತೋ..ತಕ್ಷಣ ಆತ ಆಂದ್ರದ ವ್ಯಕ್ತಿಗೆ ಆನ್ ಲೈನ್ ನಲ್ಲಿ ಪೇಮೆಂಟ್ ಮಾಡ್ತಾನೆ. ಮೀನಿನ ಲಾರಿಯಲ್ಲಿ ಬಂದ ಗಾಂಜಾ ಶಿವಮೊಗ್ಗದ ವ್ಯಕ್ತಿಯನ್ನು ಸೇರುತ್ತೆ.
ಅಂದ್ರೆ ಇಲ್ಲಿ ವಾಟ್ಸಾಫ್ ವಿಡಿಯೋ ಕಾಲ್ ಕ್ರೈಂ ಲೋಕಕ್ಕೆ ಎಷ್ಟು ವರದಾನವಾಗಿದೆ ಅಂದ್ರೆ..ಅದನ್ನು ಊಹಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಆನ್ ಲೈನ್ ನಲ್ಲಿ ಓಸಿ ಇಸ್ಪೀಟ್, ಐಪಿಎಲ್ ಕ್ರಿಕೇಟ್ ಬೆಟ್ಟಿಂಗ್, ಪ್ರಾಸ್ಟಿಟ್ಯೂಷನ್ ನಂತ ದಂಧೆಗಳು ನಡೆಯುವಾಗ ಡ್ರಗ್ಸ್ ಪೆಡ್ಲಿಂಗ್ ಕೂಡ ಇದೆ ರಹದಾರಿಯನ್ನು ಬಹಳ ವ್ಯವಸ್ಥಿತವಾಗಿ ಬಳಸಿಕೊಂಡಿದೆ.