ಕೋಟೆ ಮಾರಿಕಾಂಬಾ ಜಾತ್ರೆ ಸ್ಟಾಲ್‌ಗಳ ನಡುವೆ ಗುಳಿ ಗುಳಿ ಆಟ! ದಾಖಲಾಯ್ತು ಸುಮುಟೋ ಕೇಸ್‌

Guliguli game between Kote Marikamba jatre stalls! Sumuto case registered

ಕೋಟೆ ಮಾರಿಕಾಂಬಾ ಜಾತ್ರೆ ಸ್ಟಾಲ್‌ಗಳ ನಡುವೆ ಗುಳಿ ಗುಳಿ ಆಟ!  ದಾಖಲಾಯ್ತು ಸುಮುಟೋ ಕೇಸ್‌
Kote Marikamba jatre stalls,Sumuto case registered

shivamogga Mar 16, 2024 ಶಿವಮೊಗ್ಗದಲ್ಲಿ ಕೋಟೆ ಮಾರಿಕಾಂಬಾ ಜಾತ್ರೆ ಯಶಸ್ವಿಯಾಗಿ ನಡೆಯುತ್ತಿದೆ. ಇವತ್ತು ಜಾತ್ರೆಯ ಅಂತಿಮ ದಿನ. ಇದರ ನಡುವೆ ಮಾರಿಜಾತ್ರೆಯ ಸಂದರ್ಭದಲ್ಲಿ ಗುಳಿ ಗುಳಿ ಆಟ ಆಡಿಸ್ತಿದ್ದವರ ವಿರುದ್ಧ ಕೋಟೆ ಪೊಲೀಸ್‌ ಸ್ಟೇಷನ್‌ ಪೊಲೀಸರು : KARNATAKA POLICE (AMENDMENT) ACT, 2021 (U/s-78(1) (a)(vi)) ಅಡಿಯಲ್ಲಿ ಕೇಸ್‌ ದಾಖಲಿಸಿದ್ದಾರೆ. 

ಏನಿದು ಗುಳಿಗುಳಿ ಆಟ 

ಕೋಟೆ ಸ್ಟೇಷನ್‌ ಪೊಲೀಸರು ಮಾರಿಕಾಂಬ ದೇವಸ್ಥಾನದ ಹತ್ತಿರ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದಾಗ  ಸಿ.ಎಲ್ ರಾಮಣ್ಣ ಸರ್ಕಲ್ ಹತ್ತಿರ ಇಬ್ಬರು  ಗುಳಿ ಗುಳಿ ಎಂಬ ಅದೃಷ್ಟದ ಜೂಜಾಟವನ್ನು ನಡೆಸುವುದು ಪೊಲೀಸರ ಗಮನಕ್ಕೆ ಬಂದಿದೆ. 

ಜನರಿಂದ ದುಡ್ಡು ತೆಗೆದುಕೊಂಡು   ಬಾಕ್ಸ್ ಗಳನ್ನ ಇಟ್ಟು  ಬಿಳಿ ಬಾಕ್ಸಿಗೆ ಬಾಲ್ ಹಾಕಿದರೆ 50 ರೂಪಾಯಿಗೆ 150 ರೂಪಾಯಿ ಕೊಡಲಾಗುವುದು ಹಾಗೂ ಕೆಂಪು ಮತ್ತು ಹಳದಿ ಬಾಕ್ಸ್‌ಗೆ ಬಾಲ್ ಹಾಕಿದರೆ 50 ರೂಪಾಯಿಗೆ 50 ರೂಪಾಯಿ ಆಡುವ ಆಟ ಇದಾಗಿತ್ತು. ಇದನ್ನ ಗುಳಿಗುಳಿ ಆಟ ಎನ್ನಲಾಗುತ್ತದೆ. ಆದರೆ ಇದು ಸಹ ಒಂದು ರೀತಿಯಲ್ಲಿ ಜೂಜಾಟವಾಗಿದೆ. ಹೀಗಾಗಿ ಪೊಲೀಸರು ಆರೋಪಿಗಳ ವಿರುದ್ಧ ಕೇಸ್‌ ದಾಖಲಿಸಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.