shivamogga Mar 15, 2024 Soraba taluk ಗಂಡ ಹೆಂಡತಿಯ ನಡುವೆ ಜಗಳ ನಡೆದು ಪತಿಯು ಹಲ್ಲೆ ಮಾಡಿದ ಪರಿಣಾಮ ಪತ್ನಿ ಸಾವನ್ನಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕು ನಲ್ಲಿ ಸಂಭವಿಸಿದೆ.
ಹಣದ ವಿಚಾರಕ್ಕೆ ನಡೆದ ಗಲಾಟೆ ಹಿನ್ನೆಲೆಯಲ್ಲಿ ಮಳಲಿಕೊಪ್ಪದಲ್ಲಿ ಈ ಘಟನೆ ಸಂಭವಿಸಿದ್ದು, ಚಂದ್ರನಾಯಕ್ ಹಾಗೂ ಕವಿತಾ, ಬಾಯಿ ದಂಪತಿ ನಡುವೆ ಮಾರ್ಚ್ 9 ರಂದು ಹಣದ ವಿಚಾರಕ್ಕೆ ಗಲಾಟೆಯಾಗಿತ್ತು. ಈ ವೇಳೆ ಚಂದ್ರನಾಯಕ್ ಪತ್ನಿ ಕವಿತಾ ಬಾಯಿ ಕುತ್ತಿಗೆಗೆ ದೊಣ್ಣೆಯಿಂದ ಹೊಡೆದಿದ್ದರು. ಪರಿಣಾಮ ಅವರ ಪತ್ನಿ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನ ಸ್ತಳೀಯ ಆಸ್ಪತ್ರೆಗೆ ಅಲ್ಲಿಂದ ಮಂಗಳೂರಿನ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಇವತ್ತು ಅವರು ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ಪತಿ ಚಂದ್ರನಾಯಕ್‌ನನ್ನು ಪೊಲೀಸರು ಬಂಧಿಸಿದ್ದಾರೆ.