ಮತ್ತೆ ನಡೆಯಲಿದೆ ಶಿವಮೊಗ್ಗದ ಹುಣಸೋಡು ಸ್ಫೋಟದ ತನಿಖೆ? ಕಾರಣವೇನು ಗೊತ್ತಾ? JP EXCLUSIVE

Shivamogga blast victims names

ಮತ್ತೆ ನಡೆಯಲಿದೆ ಶಿವಮೊಗ್ಗದ ಹುಣಸೋಡು ಸ್ಫೋಟದ ತನಿಖೆ? ಕಾರಣವೇನು ಗೊತ್ತಾ? JP EXCLUSIVE
Shivamogga blast victims names

KARNATAKA NEWS/ ONLINE / Malenadu today/ Nov 12, 2023Shivamogga blast victims names

Soraba/chikkamagaluru  |  ದೇಶವನ್ನೇ ಬೆಚ್ಚಿ ಬೀಳಿಸಿದ ಹುಣಸೋಡು ಸ್ಪೋಟ ಪ್ರಕರಣದ ಮರು ತನಿಖೆಗೆ ಹೈಕೋರ್ಟ್ ಆದೇಶ ! ಪ್ರಕರಣದ ತನಿಖೆಯ ಜವಬ್ದಾರಿಯನ್ನು ರೇಂಜ್ ಐಜಿ ಸಿಇಎನ್ ಠಾಣೆಗೆ ವರ್ಗಾಯಿಸಿದ್ದು ತಪ್ಪಾಯ್ತಾ..? ಹೈಕೋರ್ಟ್ ತೀರ್ಪಿನಲ್ಲಿ ಏನಿದೆ ಗೊತ್ತಾ? ಜೆಪಿ ಬರೆಯುತ್ತಾರೆ. 



ದೇಶವನ್ನೇ ಬೆಚ್ಚಿಬೀಳಿಸಿದ ಹುಣಸೋಡು ಸ್ಪೋಟ ಪ್ರಕರಣದ ಮರು ತನಿಖೆಗೆ ಹೈಕೋರ್ಟ್ ಆದೇಶ ಮಾಡಿದೆ. ಸಿಇಎನ್ ಠಾಣೆಯ ಬದಲು ಶಿವಮೊಗ್ಗ ಗ್ರಾಮಾಂತರ ಠಾಣೆಗೆ ತನಿಖೆಗೆ ಆದೇಶ ಮಾಡಿ ಚಾರ್ಚ್ ಶೀಟ್ ಸಲ್ಲಿಸಲು ಕೋರ್ಟ್ ಆದೇಶಿಸಿದೆ.

READ : ಹುಣಸೋಡು ಸ್ಫೋಟದಲ್ಲಿ ಮಾಯವಾದರೆ ಈ ಮೂವರು? 2 ವರ್ಷದಲ್ಲಿ ಕುಟುಂಬಸ್ಥರಿಗೆ ಮಕ್ಕಳ ಬಗ್ಗೆ ಸಿಕ್ಕ ಸುಳಿವೇನು?

ಘಟನೆ ಹಿನ್ನೋಟ !

21-01-2021 ರ ಜನವರಿ ರಾತ್ರಿ 10.20 ಕ್ಕೆ ಶಿವಮೊಗ್ಗ ನಗರದ ಹೊರವಲಯದಲ್ಲಿ ಸಂಭವಿಸಿದ ಹುಣಸೋಡು ಸ್ಪೋಟ ಪ್ರಕರಣ ನೆನೆದರೆ..ಈಗಲೂ ಜನರು ಬೆಚ್ಚಿಬೀಳುತ್ತಾರೆ. ಎಸ್.ಎಸ್ ಕ್ರಷರ್ ಕ್ವಾರಿಯಲ್ಲಿ ಸ್ಪೋಟಕ ತುಂಬಿದ ಕ್ಯಾಂಟರ್ ಲಾರಿಯಿಂದ ಬೊಲೊರೊ ವಾಹನಕ್ಕೆ ಸ್ಪೋಟಕ ಸರಬರಾಜು ಮಾಡುವಾಗ ಉಂಟಾದ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. 

ಸ್ಪೋಟದ ತೀವೃತೆ ಆಗಸದೆತ್ತರಕ್ಕೇರಿ ಮಷ್ರೂಮ್ ಸ್ಪೋಟದ ಮಾದರಿಯಲ್ಲಿ ಸುಮಾರು 150 ಕಿಲೋಮೀಟರ್ ಸುತ್ತಮುತ್ತಲ ಜಿಲ್ಲೆಗಳಿಗೆ ಸ್ಪೋಟದ ಸದ್ದು ಅಪ್ಪಳಿಸಿತ್ತು. ಹುಣಸೋಡು ಸನಿಹದ ಮನೆಗಳ ಕಿಡಕಿ ಗಾಜುಗಳು ಪುಡಿಪುಡಿಯಾಗಿದ್ವು..ಸ್ಪೋಟದ ತೀವೃತೆಗೆ ಆರು ಮಂದಿ ಕಾರ್ಮಿಕರು ಸಾವನ್ನಪ್ಪಿದ್ರು..ಹುಣಸೋಡು ಗ್ರಾಮದಲ್ಲಿ ಹಲವರಿಗೆ ಗಂಭೀರ ಗಾಯಗಳಾದವು. ಹುಣಸೋಡು ಸ್ಟೋಟ ಘಟನೆಗೆ ಪ್ರಧಾನಿ ನರೇಂದ್ರ ಮೋದಿಯವರು ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ರು.

READ : ಹುಣಸೋಡು ಸ್ಫೋಟದ ಪ್ರಕರಣದ ತನಿಖೆಯ ಜವಬ್ದಾರಿಯನ್ನು ಸಿಇಎನ್ ಠಾಣಾಧಿಕಾರಿಗೆ ನೀಡಲು ಅವಕಾಶ ಇಲ್ಲವೇ? ಹಾಗಿದ್ರೆ ಸಿಆರ್​ಪಿಸಿ ಸೆಕ್ಷನ್​ 36 ಹೇಳೋದೇನು? ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿರುವ ಎ2 ಆರೋಪಿ ವಾದವೇನು? ಜೆಪಿ ಎಕ್ಸ್​ಕ್ಲ್ಯೂಸಿವ್​

ಪುಲ್ವಾಮ ದಾಳಿಯ ಸ್ಪೋಟಕ್ಕಿಂತಲೂ  ಹತ್ತು ಪಟ್ಟು ಹೆಚ್ಚು ಸ್ಪೋಟಕ

ಕ್ವಾರಿ ಸ್ಪೋಟದ ಸ್ಥಳದಲ್ಲಿದ್ದುದು ಪುಲ್ಬಾಮ ಧಾಳಿಗೆ ಉಗ್ರರು ಬಳಸಿದ್ದ ಸ್ಫೋಟಕಕ್ಕಿಂತ ಹತ್ತು ಪಟ್ಟು ಸ್ಪೋಟಕ ಸಾಮಗ್ರಿ ಎಂಬ ಆತಂಕದ ಸಂಗತಿ ಕೇಳಿದಾಗ ಜನರು ಬೆಚ್ಚಿಬಿದ್ರು. ಸ್ಪೋಟಗೊಂಡ ವಾಹನದಲ್ಲಿ ಸುಮಾರು ಮೂರು ಸಾವಿರ ಕೆ.ಜಿ. ಜಿಲೆಟಿನ್ ಮತ್ತು ಡಿಟೋನೇಟರ್ ಅಮೋನಿಯಂ ನೈಟ್ರೇಟ್ ಜೆಲ್ ಗಳಿತ್ತು. ಪುಲ್ವಾಮ ಧಾಳಿ ವೇಳೆ ಮುನ್ನೂರು ಕೆ.ಜಿ. ಸ್ಪೋಟಕವನ್ನು ಉಗ್ರರು ಬಳಸಿದ್ದರು.ಭಾರೀ ಪ್ರಮಾಣದ ಸ್ಪೋಟಕದ ವಾಹನ ಸ್ಪೋಟಿಸಿದ್ದರಿಂದಲೇ ಭಾರೀ ಪ್ರಮಾಣದ ಸ್ಪೋಟದ ಸದ್ದು ಘಟನಾ ಸ್ಥಳದಿಂದ 150 ಕಿ.ಮಿ. ದೂರದವರೆಗೆ ಕೇಳಿಬರಲು ಕಾರಣವಾಯಿತು.

ಸ್ಪೋಟದ ತೀವ್ರತೆ ಸ್ಯಾಟಲೈಟ್ ನಲ್ಲಿ ದಾಖಲು 

ಹುಣಸೋಡು ಗ್ರಾಮದ ಎಸ್.ಎಸ್ ಕ್ರಷರ್ ನಲ್ಲಿ ಸಂಭವಿಸಿದ ಸ್ಟೋಟ ಸೆಟಲೈಟ್ ರೆಡಾರ್ ನಲ್ಲಿ ದಾಖಲಾಗಿತ್ತು..ಸೀಸ್ಮಾಲಜಿ ಮಿನಿಸ್ಟ್ರಿ ಆಫ್ ಅರ್ಥ್ ಸೈನ್ಸ್ ಗವರ್ನ್ ಮೆಂಚ್ (Seismology earth sciences govt of India) ಇದರ ಅಡಿಯಲ್ಲಿ ಬರುವ ನ್ಯಾಷನಲ್ ಸೆಂಟರ್ ಆಪ್ ಸೀಸ್ಮಾಲಜಿ(National centre of seismology) ವಿಭಾಗವು ಹುಣಸೋಡಿನಲ್ಲಿ ಸಂಭವಿಸಿದ ಸ್ಪೋಟಕ್ಕೆ Man made explosion detected ಎಂದು ದಾಖಲಿಸಿತು. 

ನ್ಯಾಷನಲ್ ಸೆಂಟರ್ ಫಾರ್ ಸೀಸ್ಮಾಲಜಿಯು ಭೂಕಂಪನ,ಪ್ರಕೃತಿ ವಿಕೋಪ,ವಾಲ್ಕೆನೋ,ಮಾಗ್ಮಾ ಮೂಮೆಂಟ್,ಲಾರ್ಜ್ ಲ್ಯಾಂಡ್ ಸ್ನೈಡ್ ,ಮ್ಯಾನ್ ಮೇಡ್ ಎಕ್ಸ್ ಪ್ಲೋಷನ್ ಗಳಾದಾಗ ಅಥವಾ ಆಗುವ ಮುನ್ನ ಮುನ್ನೆಚ್ಚರಿಕೆ ನೀಡಲು ದಿನದ 24 ಗಂಟೆ ಸೆಟಲೈಟ್ ರೆಡಾರ್ ಮೂಲಕ ಹದ್ದಿನ ಕಣ್ಣಿಟ್ಟಿರುತ್ತದೆ 

READ : Hunasodu blast story ಆರು ಮಂದಿ ಬಲಿ ಪಡೆದ ಆ ಸ್ಟೋಟದ ಸ್ಥಳಕ್ಕೆ ಇಂದಿಗೂ ಯಾರು ಹೋಗುತ್ತಿಲ್ಲವೇಕೆ? ದೇಶವನ್ನೇ ಬೆಚ್ಚಿ ಬೀಳಿಸಿದ ಹುಣಸೋಡು ಸ್ಪೋಟ ಪ್ರಕರಣದ ಆ ಪ್ರದೇಶದಲ್ಲಿ ಪ್ಯಾರಲಲ್ ಎನೆರ್ಜಿ ಕೆಲಸ ಮಾಡುತ್ತಿದ್ದಿಯಾ..?  ಸುದ್ದಿಯ ಬೆನ್ನತ್ತಿ ಹೋದ ಟುಡೆಗೆ ಸಿಕ್ಕ ಮಾಹಿತಿ ರೋಚಕ..!JP Story

ಸಾಮಾನ್ಯ ಅವಘಡಗಳಾದಾಗ ಸೀಸ್ಮಾಲಜಿ ಮಿನಿಸ್ಟ್ರಿ ಮದ್ಯ ಪ್ರವೇಶಿಸುವುದಿಲ್ಲ.ರಾಷ್ಟ್ರೀಯ ವಿಪತ್ತಿಗೆ ಸರಿಸಮಾನವಾದಂತ ಅವಘಡಗಳಾದ ರೆಡಾರ್ ಇಂತಹ ಘಟನಾವಳಿಗಳನ್ನು ತಕ್ಷಣ ದಾಖಲಿಸಿಕೊಂಡು,ಘಟನೆಗೆ ಕಾರಣವನ್ನು ಪತ್ತೆ ಮಾಡುವ ಕಾರ್ಯ ಮಾಡುತ್ತೆ.ಹುಣಸೋಡು ಘಟನೆಯನ್ನು ಭೂಕಂಪ ಎಂದು ಬಣ್ಣಿಸದೆ..ಅದೊಂದು ಮ್ಯಾನ್ ಮೇಡ್ ಎಕ್ಸ್ ಪ್ಲೋಷನ್ ಡಿಟೆಕ್ಟ್​ಡ್ ಎಂದು ದಾಖಲಿಸಿತು

ಪ್ರಕರಣದ ಸಮಗ್ರ ತನಿಖೆಯಲ್ಲಿ 15 ಮಂದಿಯ ವಿರುದ್ಧ ಎಫ್.ಐ.ಆರ್ 

ಪ್ರಕರಣದ ಎರಡನೇ ಆರೋಪಿಯಿಂದ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಕೆ

ಹುಣಸೋಡು ಪ್ರಕರಣದಲ್ಲಿ ಎ2 ಆರೋಪಿಯಾಗಿರುವ ಆಂದ್ರದ ಮಂಜುನಾಥ್ ಸಾಯಿ ತನಿಖೆಯ ವಿಧಾನವನ್ನೇ ಪ್ರಶ್ನಿಸಿ ಹೈಕೋರ್ಟ್ ನಲ್ಲಿ ನವಂಬರ್ 2022 ಅರ್ಜಿ ಸಲ್ಲಿಸಿ ಕೇಸ್ ವಜಾಗೊಳಿಸುವಂತೆ ಕೋರಿದ್ದ. ಪ್ರಕರಣದ ತನಿಖೆಯನ್ನು ಸಿಐಡಿ ಅಥವಾ ಸಿಓಡಿಗೆ ನೀಡದೆ ಸ್ಥಳೀಯ ಮಟ್ಟದಲ್ಲಿ ತನಿಖೆ ನಡೆಸಿ ಯಾವ ಪ್ರಭಾವಿಗಳನ್ನು ಉಳಿಸಲು ಹೊರಟಿದ್ದೀರಿ ಪ್ರಕರಣವನ್ನು ವ್ಯವಸ್ಥಿತವಾಗಿ ಮುಚ್ಚಿಹಾಕಲು ಪ್ರಯತ್ನ ನಡೆದಿದೆ ಎಂದು ಕೋರ್ಟ್ ನಲ್ಲಿ ಪ್ರಶ್ನಿಸಿದ್ದ. 

READ : ಹುಣಸೋಡು ಸ್ಟೋಟ ಸೆಟೆಲೈಟ್ ರೆಡಾರ್ ನಲ್ಲಿ ಸೆರೆ.ಹೇಗೆ ಗೊತ್ತಾ?

ಸಿಇಎನ್ ಠಾಣೆಗೆ ತನಿಖೆ ನಡೆಸಲು ಅಧಿಕಾರವಿಲ್ಲ ಏನಿದು ಹೊಸ ವರಸೆ

ಅಷ್ಟಕ್ಕೂ ದೇಶದ ಗಮನ ಸೆಳೆದ ಹುಸೋಡು ಸ್ಪೋಟ ಪ್ರಕರಣದ ಕೇಸ್ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿತ್ತು. ಆದರೆ ಪ್ರಕರಣ  ಸಿಇಎನ್ ಠಾಣೆಗೆ ವರ್ಗಾಯಿಸಲಾಗಿತ್ತು. ಇದರಲ್ಲಿ ಕಾನೂನಿನ ಉಲ್ಲಂಘನೆಯಾಗಿದೆ  ಎಂದು ಆರೋಪಿಸಿ ಮಂಜುನಾಥ್ ಸಾಯಿ ಹಾಗು ಪೃಥ್ವಿನಾಥ್​ ಸಾಯಿ ಸಹೋದರರು ಹೈಕೋರ್ಟ್ ನಲ್ಲಿ ರಿಟ್ ಸಲ್ಲಿಸಿದ್ದರು.  ಸಿಇಎನ್ ಠಾಣೆಯ ಜವಬ್ದಾರಿಗಳೇನು ಎಂಬುದನ್ನು ಇಲಾಖೆಯ ಸ್ಟ್ಯಾಂಡಿಂಗ್ ಆರ್ಡರ್ ನಲ್ಲಿ ಉಲ್ಲೇಖಿಸಲಾಗಿದೆ. ಹುಣಸೋಡು ಸ್ಪೋಟ ಪ್ರಕರಣದ ತನಿಖೆಯನ್ನು ಮೊದಲು ಠಾಣಾ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ಎಪ್.ಐ.ಆರ್ ದಾಖಲಾಗಬೇಕಿತ್ತು. ಆದರೆ ಗಂಭೀರ ಪ್ರಕರಣವನ್ನು ವ್ಯಾಪ್ತಿಗೆ ಒಳಪಡದ ಸಿಇಎನ್ ಠಾಣೆಯ ತನಿಖಾಧಿಕಾರಿಯಿಂದ ನಡೆಸಲು ಅಂದಿನ ಐಜಿ ರವಿಯವರು ಸ್ಟ್ಯಾಂಡಿಂಗ್ ಆರ್ಡರ್ ಮಾಡಿದ್ದರು. ಅದರಂತೆ ಸಿಇಎನ್ ಠಾಣೆಗೆ ಕೇಸ್ ವರ್ಗಾಯಿಸಲ್ಪಟ್ಟಿದ್ದು, ಪೊಲೀಸರು ತನಿಖೆ ನಡೆಸಿ ಚಾರ್ಚ್ ಶೀಟ್ ಸಲ್ಲಿಸಿದ್ದರು. 

ಸೈಬರ್ ಎಕನಾಮಿಕ್ಸ್ ನಾರ್ಕೊಟಿಕ್ ಎಕ್ಸೈಸ್ ಗೆ ಸಂಬಂಧಿಸಿದ ಕೇಸ್ ಗಳಿಗೆ ಸಂಬಂಧಿಸಿದಂತೆ ಸಿಎಎನ್ ಠಾಣೆ ಕರ್ತವ್ಯ ನಿರ್ವಹಿಸಬೇಕು. ಗಂಭೀರ ಪ್ರಕರಣಗಳಾದ ಸಂದರ್ಭದಲ್ಲಿ ಹೈಕೋರ್ಟ್ ಇಲ್ಲವೇ ಸುಪ್ರಿಂ ಕೋರ್ಟ್ ಆದೇಶ ನೀಡಿದಾಗ, ಡಿಜಿ ಐಜಿಯವರ ಸ್ಟ್ಯಾಡಿಂಗ್ ಆರ್ಡರ್ ನಂತೆ  ಬೆಂಗಳೂರಿನ ಸಿಐಡಿಯ ಸೈಬರ್ ಪೊಲೀಸರು ಪ್ರಕರಣದ ತನಿಖೆ ಕೈಗೊಳ್ಳಬೇಕು. 

READ : ಶಿವಮೊಗ್ಗ ಮುಖ್ಯರಸ್ತೆಯಲ್ಲಿಯೇ ಪಂಕ್ಚರ್​ ಆದ 10 ಟನ್​ ವಿಸ್ಫೋಟಕ ತುಂಬಿದ ಲಾರಿ! ಹುಣಸೋಡು ನೆನಪಿಸ್ತಿದೆ ಘಟನೆ! ಅಪಾಯಕ್ಕೆ ದಾರಿ ತೋರಿಸ್ತಿದೆ ನಿರ್ಲಕ್ಷ್ಯ? | Malenadu today Exclusive

ಆದರೆ ತನಿಖೆಯ ವ್ಯಾಪ್ತಿಗೊಳಪಡದ ಪ್ರಕರಣವನ್ನು ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣಾಧಿಕಾರಿಯಿಂದ ತನಿಖೆ ನಡೆಸಿ ಚಾರ್ಚ್ ಶೀಟ್ ಸಲ್ಲಿಸಲಾಗಿದೆ. ಪ್ರಕರಣವನ್ನು ಸಿಓಡಿ ಅಥವಾ ಸಿಐಡಿಗೆ ವಹಿಸುವ ಸಾಧ್ಯತೆಗಳು ಹೆಚ್ಚಿದ್ದರೂ, ಪ್ರಭಾವಿಗಳನ್ನು ರಕ್ಷಿಸಲು ಸಿಇಎನ್ ಠಾಣೆಗೆ ಕೇಸ್ ವರ್ಗಾಯಿಸಲಾಗಿದೆ ಎಂದು ಮಂಜುನಾಥ್ ಸಾಯಿ ಆರೋಪಿಸಿ ಕೇಸ್ ವಜಾಗೊಳಿಸುವಂತೆ ಕೋರಿದ್ದರು.

READ : ಹುಣಸೋಡು ಸ್ಫೋಟದ ವಿಚಾರಕ್ಕೆ ಕೈ ಹಾಕಿದ ಮಧು ಬಂಗಾರಪ್ಪ! ಯಾರ ವಿರುದ್ಧ ತನಿಖಾಸ್ತ್ರ?

ಹುಣಸೋಡು ಸ್ಪೋಟ ಪ್ರಕರಣ ಗ್ರಾಮಾಂತರ ಠಾಣೆಗೆ ಶಿಫ್ಟ್

ಮಂಜುನಾಥ್ ಸಾಯಿ ಹೈಕೋರ್ಟ್ ನಲ್ಲಿ ಎತ್ತಿರುವ ಪ್ರಶ್ನೆಗ ಕಾಕತಾಳೀಯ ಎಂಬಂತೆ ನವಂಬರ್ 8 ರಂದು ಹುಣಸೋಡು ಪ್ರಕರಣದ ಕೇಸ್ ಶಿವಮೊಗ್ಗದ ಸಿಇಎನ್ ಠಾಣೆಯಿಂದ ಗ್ರಾಮಾಂತರ ಪೊಲೀಸ್ ಠಾಣೆಗೆ ಶಿಫ್ಟ್ ಆಗಿತ್ತು. ತನಿಖೆ ಪರ್ಯಯವಾಗಿ ನಡೆಯುತ್ತಿದೆ. 

ಸಿಇಎನ್​  ಠಾಣೆಯ ಬಗ್ಗೆ ಸಲ್ಲಿಸಿದ ರಿಟ್ ಅರ್ಜಿಯನ್ನು ಕುಲಂಕುಶವಾಗಿ ಪರಿಶೀಲಿಸಿದ ನ್ಯಾಯದೀಶರು ಸರ್ಕಾರಕ್ಕೆ ನೋಟಿಸ್ ಮಾಡಿ, ಸಂಬಂಧಿಸಿದ ದಾಖಲೆ ಕೇಳಿದ್ರು ಆದರೆ ಸರ್ಕಾರದ ಬಳಿ ಸಿಇಎನ್​ ಠಾಣೆಗೆ ಆದೇಶ ಮಾಡಿರುವ ದಾಖಲೆಗಳು ಪೂರಕವಾಗಿರಲಿಲ್ಲ. ಆದ್ದರಿಂದ ಸೆನ್ ಠಾಣೆಯ ಚಾರ್ಚ್ ಶೀಟ್ ವಜಾಗೊಳಿಸಿದ ಹೈಕೋರ್ಟ್  ನ್ಯಾಯಾಧೀಶರು, ಶಿವಮೊಗ್ಗ ಗ್ರಾಮಾಂತರ ಠಾಣೆಯಿಂದ ಮರು ತನಿಖೆ ನಡೆಸಿ, ಚಾರ್ಚ್ ಶೀಟ್ ಸಲ್ಲಿಸುವಂತೆ ಆದೇಶಿಸಿದ್ದಾರೆ