ಹೊಸನಗರ | ಗಾಳಿ ಮಳೆಗೆ ಮನೆಯಲ್ಲಿ ಮಲಗಿದ್ದ ವೇಳೆ ಕುಸಿದ ಗೋಡೆ | ಸ್ವಲ್ವದರಲ್ಲಿಯೇ ಜೀವ ಬಚಾವ್

Hosnagar | Wall collapsed while sleeping at home due to wind and rain

ಹೊಸನಗರ | ಗಾಳಿ ಮಳೆಗೆ  ಮನೆಯಲ್ಲಿ ಮಲಗಿದ್ದ ವೇಳೆ ಕುಸಿದ ಗೋಡೆ | ಸ್ವಲ್ವದರಲ್ಲಿಯೇ  ಜೀವ ಬಚಾವ್
Hosnagara

SHIVAMOGGA | MALENADUTODAY NEWS |  Apr 20, 2024  

ಶಿವಮೊಗ್ಗ ಜಿಲ್ಲೆಯಲ್ಲಿ ಹಲವಡೆ ಮಳೆಯಾಗುತ್ತಿದ್ದು ವರ್ಷಧಾರೆಯ ಆರಂಭಿಕ ಆರ್ಭಟದಿಂದ ವ್ಯಾಪಕ ಹಾನಿಯಾದ ಬಗ್ಗೆ ವರದಿಯಾಗಿದೆ. ಇನ್ನೂ ನಿನ್ನೆ ರಾತ್ರಿ ಸುರಿದ ಮಳೆಯಿಂದಾಗಿ ಮನೆಯೊಂದ ಗೋಡೆ ಕುಸಿದಿದ್ದು, ಅದೃಷ್ಟವಶಾತ್‌ ಮನೆಯವರು ಸುರಕ್ಷಿತವಾಗಿ ಪಾರಾಗಿದ್ದಾರೆ. 

ಹೊಸನಗರ ತಾಲ್ಲೂಕು ರಿಪ್ಪನ್‌ಪೇಟೆ ಸಮೀಪ ಶಬರೀಶ ನಗರದಲ್ಲಿ  ಪುಟ್ಟಮ್ಮ  ಎಂಬವರ ಮನೆಯ ಛಾವಣಿ ಹಾಗೂ ಅಡುಗೆ ಮನೆಯ ಗೋಡೆ ಮಳೆಯಿಂದಾಗಿ ಕುಸಿದಿದೆ. ಶಬ್ಧವಾಗುತ್ತಿರುವುದನ್ನು ಕಂಡು ನಿದ್ರಿಸುತ್ತಿದ್ದ ಮನೆಯವರು ಎಚ್ಚರಗೊಂಡು, ಮನೆಯಿಂದ ಹೊರಕ್ಕೆ ಓಡಿ ಬಂದಿದ್ದಾರೆ. ಹೀಗಾಗಿ ಯಾರಿಗೂ ಅಪಾಯ ಸಂಭವಿಸಲಿಲ್ಲ. ಇನ್ನೂ ಮನೆ ಪೂರ್ಣ ಪ್ರಮಾಣದಲ್ಲಿ ಕುಸಿಯುವ ಸಾಧ್ಯತೆ ಇದ್ದು ಸ್ಥಳಕ್ಕೆ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿದ್ದಾರೆ.