ಹೊಸನಗರದಲ್ಲಿ ನಡೀತಾ ಕಾಡುಕೋಣದ ಬೇಟೆ! ಕಳೇಬರ ರಸ್ತೆಗೆ ಎಸೆಯಲಾಯ್ತಾ? ಕುತೂಹಲ ಮೂಡಿಸಿದ ಕಾಡಿನ ಶಿಕಾರಿ

Malenadu Today

KARNATAKA NEWS/ ONLINE / Malenadu today/ Oct 2, 2023 SHIVAMOGGA NEWS

ಮಲ್ನಾಡ್​ನ ಕಾಡಿನ ಶಿಕಾರಿಯ ಬಗ್ಗೆ ಈ ಹಿಂದೆಯೇ ಮಲೆನಾಡು ಟುಡೆ ಬಹುದೊಡ್ಡ ವರದಿಯನ್ನು ಮಾಡಿತ್ತು. ಆನಂತರ ಆ ವರದಿಯು ಅರಣ್ಯ ಇಲಾಖೆಯ ಗಮನ ಸೆಳೆದಿತ್ತು. ಸದ್ಯ ಈ ವಿಚಾರ ಮತ್ತೆ ಪ್ರಸ್ತಾಪಿಸಲು ಕಾರಣ, ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ಸಂಪೆಕಟ್ಟೆಯಲ್ಲಿ ಕಾಡುಕೋಣುವೊಂದನ್ನು ಬೇಟೆಯಾಡಿರುವ ಬಗ್ಗೆ ವರದಿಯಾಗಿದೆ. 

ಎಲ್ಲಿಯೋ ಕಾಡುಕೋಣವನ್ನು ಶಿಕಾರಿ ಮಾಡಿ, ಅದರ ಮಾಂಸ ತೆಗೆದುಕೊಂಡು ಕಳೆಬರವನ್ನು ಸಂಪೆಕಟ್ಟೆಯ ಸಮೀಪದ ಬಿಸಾಡಿ ಹೋಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.  ಕಾಡುಕೋಣದ ಲೆ ಭಾಗ ಮತ್ತು ಮೂಳೆಯನ್ನ ರಸ್ತೆಯ ಪಕ್ಕ ಎಸೆದು ಹೋಗಲಾಗಿದ್ದು, ಸ್ಥಳಿಯರು ಇದನ್ನ ಗಮನಿಸಿ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. 

ಇನ್ನೂ ಸ್ಥಳೀಯರು ಹೇಳುವ ಪ್ರಕಾರ, ಇದು ಯಾರೋ ಹೊರಗಡೆಯವರು ನಡೆಸಿರುವ ಕೃತ್ಯವಿರಬಹುದು ಎಂದು ಅಂದಾಜಿಸಲಾಗಿದೆ. ಇನ್ನೂ ವಿಷಯ ತಿಳಿದು ಸ್ಥಳಕ್ಕೆ ಅರಣ್ಯಾಧಿಕಾರಿಗಳು ಹಾಗೂ ವೈಲ್ಡ್​ ಲೈಫ್​  ವೈದ್ಯರು ಆಗಮಿಸಿ ಪರಿಶೀಲಿಸಿದ್ದಾರೆ. ಘಟನೆ ಸಂಬಂಧ  ನಗರ ವಲಯ ಅರಣ್ಯಾಧಿಕಾರಿಗಳ ಕಚೇರಿಯಲ್ಲಿ  ವನ್ಯಜೀವಿ ಸಂರಕ್ಷಣಾ ಕಾಯ್ದೆ 9 ರ ಅಡಿ ಪ್ರಕರಣ ದಾಖಲಿಸಲಾಗಿದೆ.  


ಇನ್ನಷ್ಟು ಸುದ್ದಿಗಳು 

  1.  ರಾಗಿಗುಡ್ಡದಲ್ಲಿ ಪರಿಸ್ಥಿತಿ ತಿಳಿಗೊಳಿಸಲು ತೆರಳಿದ್ದ ಎಸ್​ಪಿ ಮತ್ತು ಪೊಲೀಸರ ಮೇಲೆ ಕಲ್ಲು ! ಸ್ಥಳದಲ್ಲಿ 144 ಸೆಕ್ಷನ್​ ಜಾರಿ! ಲಾಠಿ ಪ್ರಹಾರ

  2. ನಮಗೆ ಬೆಲೆ ಇರುತ್ತಲ್ಲ ಎಂದು ಪ್ರಶ್ನಿಸಿದ ಬಾಲಕಿ! ಶಿಕ್ಷಕರ ಹಾಗೆ ವಿದ್ಯಾರ್ಥಿನಿಗೆ ಅರ್ಥ ಮಾಡಿಸಿದ ಸಚಿವ! ವೈರಲ್​ ಆಯ್ತು ವಿಡಿಯೋ!


 

Share This Article