ಕಲ್ಲು ಕಂಬಕ್ಕೆ ಕಟ್ಟಿ ಮಹಿಳೆಯನ್ನು ಕೆರೆಗೆ ಎಸೆದು ಕೊಲೆ! ನಾಲ್ಕು ದಿನಗಳ ನಂತರ ನೀರಿನಿಂದ ಹೊರಬಿತ್ತು ಸತ್ಯ!

Woman tied to a stone pole, thrown into lake, killed Four days later, the truth came out of the water!

ಕಲ್ಲು ಕಂಬಕ್ಕೆ ಕಟ್ಟಿ ಮಹಿಳೆಯನ್ನು ಕೆರೆಗೆ ಎಸೆದು ಕೊಲೆ! ನಾಲ್ಕು ದಿನಗಳ ನಂತರ ನೀರಿನಿಂದ ಹೊರಬಿತ್ತು ಸತ್ಯ!
Woman tied to a stone pole

Shivamogga Mar 19, 2024  ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ಹುಂಚದ ಮುತ್ತಿನ ಕೆರೆಯಲ್ಲಿ ಪತ್ತೆಯಾಗಿರುವ ಮಹಿಳೆಯ ಶವದ ವಿಚಾರದ ಇದೀಗ ತೀವ್ರ ಕುತೂಹಲ ಮೂಡಿಸಿದೆ. ಪೊಲೀಸ್‌ ಮೂಲಗಳ ಪ್ರಕಾರ ಇದೊಂದು ಕೊಲೆ ಎಂಬ ಶಂಕೆ ವ್ಯಕ್ತವಾಗಿದೆ. 

ನಿನ್ನೆಯಷ್ಟೆ ಮುತ್ತಿನಕೆರೆಯಲ್ಲಿ ಮಹಿಳೆಯ ಶವವೊಂದು ಪತ್ತೆಯಾಗಿತ್ತು. ಕೊಳೆತ ಸ್ಥಿತಿಯಲ್ಲಿದ್ದ ಶವವನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ಹೊರತೆಗೆದು ಮಹಜರ್‌ ನಡೆಸಿದ್ದಾರೆ.ಅಲ್ಲದೆ ಈ ಸಂಬಂಧ ಪ್ರಕರಣದ ದಾಖಲಿಸಿಕೊಂಡಿದ್ದರು. 

ಇವತ್ತು ಇದೇ ವಿಚಾರದಲ್ಲಿ ಪೊಲೀಸ್‌ ಪ್ರಕಟಣೆಯೊಂದು ಹೊರಬಿದ್ದಿದೆ. ಅದರಲ್ಲಿ ಮೃತ ಮಹಿಳೆ ಸುಮಾರು 45 ರಿಂದ 50 ವರ್ಷದ ವಯಸ್ಸಿನವರು. ಅವರ ಗುರುತು ಪತ್ತೆಯಾಗಿಲ್ಲ. ಈ ಸಂಬಂಧ ಐಪಿಸಿ  302,201 ಕೇಸ್‌ ದಾಖಲಿಸಲಾಗಿದೆ. 

ಈ ಮಧ್ಯೆ ಶವದ ಮಹಜರ್‌ ನಡೆಸಿದ ಪೊಲೀಸರಿಗೆ ಮಹಿಳೆಯನ್ನು ಎಲ್ಲಿಯೋ ಕೊಲೆ ಮಾಡಿ ಆಕೆಯ ಶವವನ್ನು ಬೇಲಿಗೆ ಬಳಸುವ ಕಲ್ಲು ಕಂಬಕ್ಕೆ ಪ್ಲಾಸ್ಟಿಕ್‌ ಹಗ್ಗದಿಂದ ಕಟ್ಟಿದ್ದಾರೆ. ಆ ಬಳಿಕ ಕೆರೆಗೆ ಎಸೆದಿದ್ದಾರೆ. ಇದಕ್ಕೆ ಪೂರಕವಾಗಿ ಕುತ್ತಿಗೆ ಬಳಿ ಮತ್ತು ತೊಡೆಯ ಬಳಿ ಹಾಗೂ ಎರಡು ಕಾಲಿಗೆ ಹಗ್ಗ ಕಟ್ಟಿರುವುದು ಕಂಡು ಬಂದಿದೆ. 

ಪ್ರಕರಣದ ಮಹಜರ್‌ ನಡೆಸಿದ ಪೊಲೀಸರು ಇದೊಂದು ಕೊಲೆ ಎಂದು ಶಂಕಿಸಿದ್ದಾರೆ. ಅಲ್ಲದೆ ನಾಪತ್ತೆ ಪ್ರಕರಣಗಳ ಲಿಸ್ಟ್‌ನಲ್ಲಿ ತಲಾಶ್‌ ನಡೆಸ್ತಿದ್ದು, ಆರೋಪಿಗಳ ಸುಳಿವಿಗಾಗಿ ತಡಕಾಡುತ್ತಿದ್ದಾರೆ. ಕೇಸ್‌ ಶೀ‍ಘ್ರದಲ್ಲಿಯೇ ಮಲ್ನಾಡ್‌ನ ಸೈಲೆಂಟ್‌ ಕ್ರೈಂಗಳ ಪಟ್ಟಿಗೆ ಮತ್ತೊಂದು ಅಧ್ಯಾಯವಾಗುವ ಲಕ್ಷಣ ಕಾಣುತ್ತಿದೆ.