Shivamogga Mar 19, 2024 ಯವತಿಯನ್ನ ಪ್ರೀತಿಸಿ, ಆಕೆಯನ್ನು ದೇವಸ್ಥಾನವೊಂದಕ್ಕೆ ಕರೆದೊಯ್ದು ಅರಶಿನ ಕೊಂಬು ಕಟ್ಟಿ ಮದುವೆ ಮಾಡಿಕೊಂಡ ಯುವಕನ ವಿರುದ್ಧ ಬಾಲ್ಯವಿವಾಹ ತಡೆ ಕಾಯ್ದೆಯಡಿ ಕೇಸ್ ದಾಖಲಾಗಿದೆ. ಶಿವಮೊಗ್ಗ ಜಿಲ್ಲೆಯ ಪೊಲೀಸ್ ಸ್ಟೇಷನ್ ಒಂದರಲ್ಲಿ ಈ ಸಂಬಂಧ ಎಫ್‌ಐಆರ್ ದಾಖಲಾಗಿದ್ದು, ಅಪ್ರಾಪ್ತೆಯ ವಿವರಗಳನ್ನ ಗೌಪ್ಯವಾಗಿ ಇಡಲಾಗಿದೆ.
ಪ್ರಕರಣದಲ್ಲಿ ಯುವಕ ಸ್ಥಳೀಯ ಗ್ರಾಮದ ಬಾಲಕಿಯೊಬ್ಬಳನನ್ನ ಪ್ರೀತಿಸಿದ್ದನಂತೆ. ಆಕೆಯನ್ನು ಎಲ್ಲಿಯಾದರೂ ಹೋಗಿ ಮದುವೆಯಾಗೋಣ ಎಂದು ದೇವಸ್ಥಾನವೊಂದಕ್ಕೆ ಕರೆದೊಯ್ದು ಅರಿಶಿನ ಕೊಂಬು ಇರುವ ಅರಶಿನ ದಾರವನ್ನ ಕಟ್ಟಿದ್ದಾನೆ ಈ ವೇಳೆ ಬಾಲಕಿ ಸಹ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಾಳೆ ಎನ್ನಲಾಗಿದೆ. . ಆ ಬಳಿಕ ವಿಚಾರ ಊರಿನವರಿಗೆ ಗೊತ್ತಾಗಿದೆ. ಪಂಚಾಯ್ತಿ ಮಾಡಿದ್ದಾರೆ. ಆಕೆಗೆ ಪ್ರಾಪ್ರ ವಯಸ್ಸಾದ ಮೇಲೆ ಮದುವೆ ಮಾಡಿಸಿಕೊಡುವುದಾಗಿ ಹೇಳಿ ಇಬ್ಬರನ್ನು ದೂರದೂರ ಇರಿಸಿದ್ದಾರೆ.
ಈ ನಡುವೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿವೆ ಈ ವಿಚಾರ ದೂರಿನ ಸ್ವರೂಪದಲ್ಲಿ ಕೇಳಿಬಂದಿದೆ. ತಕ್ಷಣ ಅಲರ್ಟ್ ಆದ ಅಧಿಕಾರಿ ಅಪ್ರಾಪ್ತೆಯ ಊರಿಗೆ ತೆರಳಿ ಆಕೆಯನ್ನು ರಕ್ಷಣೆ ಮಾಡಿ, ಪ್ರಕರಣದ ಸಂಬಂಧ ಕೇಸ್ ದಾಖಲಾಗುವಂತೆ ಶ್ರಮವಹಿಸಿದ್ದಾರೆ