ತೀರ್ಥಹಳ್ಳಿ ಬೆಂಕಿ ಕೇಸ್ | PART 4| ಎಫ್ಐಆರ್​ನಲ್ಲಿ ಏನಿದೆ ಗೊತ್ತಾ? | ಪ್ರಕರಣದಲ್ಲಿ ಮೂವರ ವಿರುದ್ಧ ದಾಖಲಾಗಿದ್ದೇಕೆ IPC 306 ?

Here is the detail in the FIR of the suicide case registered in Aralasurali, Theerthahalliತೀರ್ಥಹಳ್ಳಿಯ ಅರಳಸುರಳಿಯಲ್ಲಿ ದಾಖಲಾದ ಆತ್ಮಹತ್ಯೆ ಪ್ರಕರಣದ ಎಫ್ಐಆರ್​ನಲ್ಲಿರುವ ವಿವರ ಇಲ್ಲಿದೆ

ತೀರ್ಥಹಳ್ಳಿ ಬೆಂಕಿ ಕೇಸ್ | PART 4|  ಎಫ್ಐಆರ್​ನಲ್ಲಿ ಏನಿದೆ ಗೊತ್ತಾ? |  ಪ್ರಕರಣದಲ್ಲಿ  ಮೂವರ ವಿರುದ್ಧ ದಾಖಲಾಗಿದ್ದೇಕೆ IPC 306 ?

KARNATAKA NEWS/ ONLINE / Malenadu today/ Oct 13, 2023 SHIVAMOGGA NEWS

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಅರಳಸುರಳಿಯಲ್ಲಿ ನಡೆದ ಸಜೀವ ದಹನ ಪ್ರಕರಣ ಸಂಬಂಧ ದಾಖಲಾದ ಎಫ್​ಐಆರ್ ಇದೀಗ ಮಲೆನಾಡು ಟುಡೆಗೆ ಲಭ್ಯವಾಗಿದೆ.  ನಿಗೂಢತೆ ಮತ್ತು ತೀವ್ರ ಕುತೂಹಲವನ್ನು ಹೊಂದಿದ್ದ ಪ್ರಕರಣದ ಸಂಬಂದ ತೀರ್ಥಹಳ್ಳಿ ಪೊಲೀಸರು IPC 1860 (U/s-306,34) ಅಡಿಯಲ್ಲಿ ಕೇಸ್ ದಾಖಲಿಸಿದ್ದಾರೆ. 

ಸೆಕ್ಷನ್​ 306 ಹಾಗೂ ಅದಕ್ಕೆ ಸಂಬಂಧಿಸಿದ  34 ಅಂದರೆ ಆತ್ಮಹತ್ಯೆಗೆ ಪ್ರೇರೇಪಿಸುವವರಿಗೆ ಸೆಕ್ಷನ್ 306 ವಿಧಿಸಲಾಗುತ್ತದೆ ಮತ್ತು 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಬಹುದು. ಇನ್ನೂ ಒಂದೇ ಉದ್ದೇಶವನ್ನು ಆರೋಪಿಗಳೆಲ್ಲರೂ ಹೊಂದಿದ್ದಾರೆ ಎಂಬ ಆರೋಪಕ್ಕೆ ಪೂರಕವಾಗಿ 34 ವಿಧಿಸಲಾಗುತ್ತದೆ.   ಉದಾಹರಣೆಗೆ, ಒಬ್ಬ ವ್ಯಕ್ತಿಯನ್ನು ನಿಂದಿಸಿದರೆ ಅದು ಅವನಿಗೆ ತುಂಬಾ ಮಾನಸಿಕ ನೋವನ್ನುಂಟುಮಾಡುತ್ತದೆ, ಅದು ಅವನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಒತ್ತಾಯಿಸಿದರೆ, ಅಂತಹ ವ್ಯಕ್ತಿಯನ್ನು ಸೆಕ್ಷನ್ 306 ರ ಅಡಿಯಲ್ಲಿ ಆತ್ಮಹತ್ಯೆಗೆ ಪ್ರಚೋದನೆಯ ಆರೋಪಿ ಎಂದು ಈ ಸೆಕ್ಷನ್​ ಅಡಿಯಲ್ಲಿ ಪರಿಗಣಿಸಲಾಗುತ್ತದೆ. 

ಒಂದಕ್ಕಿಂತ ಹೆಚ್ಚು ವ್ಯಕ್ತಿಗಳು ಇಂತಹ ಕುಮ್ಮಕ್ಕು ನೀಡಿದ್ದರೆ, ಸೆಕ್ಷನ್ 306 ಜೊತೆಗೆ ಸೆಕ್ಷನ್ 34 ಅನ್ನು ವಿಧಿಸಲಾಗುತ್ತದೆ. ಮತ್ತು ಎಲ್ಲಾ ಕುಮ್ಮಕ್ಕು ನೀಡುವವರಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬಹುದು.

ಸದ್ಯ ತೀರ್ಥಹಳ್ಳಿಯ ಅರಳಸುರಳಿ ಪ್ರಕರಣದಲ್ಲಿ ಮೃತ ನಾಗರತ್ನರವರ ಸಹೋದರ ನೀಡಿದ ದೂರನ್ನ ಅನ್ವಯಿಸಿ ಎಫ್ಐಆರ್ ದಾಖಲಿಸಲಾಗಿದೆ. ಎಫ್​ಐಆರ್​ನಲ್ಲಿ ರಾಘವೇಂದ್ರ ಕೆಕ್ಕೋಡ್, ಶ್ರೀರಾಮ, ಭರತ ಮತ್ತು ನಾಗರತ್ನರ ಸಾವಿಗೆ ರಾಘವೇಂದ್ರರವರ ಇಬ್ಬರು ಸಹೋದರರು ಹಾಗೋ ಒಬ್ಬ ಸಹೋದರನ ಪತ್ನಿಯವರು ಕಾರಣ ಎಂದು ಆರೋಪಿಸಲಾಗಿದೆ. ಒಟ್ಟು ಮೂವರ ವಿರುದ್ದ ಐಪಿಸಿ ಸೆಕ್ಷನ್​ಗಳ ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ.  

ಈ ಮೊದಲೇ ಸ್ಥಳಿಯರ ನಡುವೆ ಕೇಳಿ ಬಂದ ಚರ್ಚೆಯಂತೆ, ಮೃತ ರಾಘವೇಂದ್ರರವರು ಹಾಗೂ ಅವರ ಸಹೋದರರ ನಡುವೆ ಜಮೀನಿನ ವಿಚಾರವಾಗಿ ವ್ಯಾಜ್ಯ ನಡೆಯುತ್ತಿತ್ತು ಎನ್ನಲಾಗಿದ್ದು, ಜಮೀನಿನ ಮೇಲಿನ ಸಾಲ ತೀರಿಸಬೇಕು, ಮನೆ ಖಾಲಿ ಮಾಡಬೇಕು ಎಂದು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಹಲವು ದಿನಗಳಿಂದ ಈ ರೀತಿ ಬೆದರಿಕೆ ಹಾಕಿದ್ದರ ಹಿನ್ನೆಲೆಯಲ್ಲಿ ನಾಲ್ವರು ಮನನೊಂದು ಈ ರೀತಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.  


ಇನ್ನಷ್ಟು ಸುದ್ದಿಗಳು 

  1. ಅಭಯ್ ಪ್ರಕಾಶ್ ಸಸ್ಪೆಂಡ್ ಪೊಲೀಸ್ ಇಲಾಖೆಯ ವೈಫಲ್ಯವೇ? ಹೀಗೆ ಮಾಡುವುದಾದರೆ ಹಲವರು ಅಮಾನತ್ತಲ್ಲಿರಬೇಕಿತ್ತಲ್ಲವೇ? ಯಾವ ತಪ್ಪಿಗೆ ಈ ಶಿಕ್ಷೆ? JP ಬರೆಯುತ್ತಾರೆ

  2. FACEBOOK , INSTAGRAM ಪೋಸ್ಟ್ ಹಾಕಬೇಕಾದರೆ ಹುಷಾರ್! ಬೀಳುತ್ತೆ ಕೇಸ್​! social media monitoring ಮಾಡುತ್ತಿದೆ ಶಿವಮೊಗ್ಗ ಪೊಲೀಸ್ ಇಲಾಖೆ

  3. ಈ ಹಾವು ನಿಮ್ಮ ಕಣ್ಣಿಗೆ ಬಿದ್ದಿತ್ತಾ? ಇದನ್ನ ಏನಂದು ಕರೆಯುತ್ತಾರೆ? ಈ ಹಾವಿನ ಮೈಮೇಲೆ ನೀರು ಇಂಗುತ್ತೆ ಗೊತ್ತಾ?