ಸುರಾನಿ ಬಳಿ ಭೀಕರ ಆಕ್ಸಿಡೆಂಟ್! ಬೈಕ್​-ಖಾಸಗಿ ಬಸ್​ ನಡುವೆ ಡಿಕ್ಕಿ! ಬೈಕ್ ಸವಾರನ ಸ್ಥಿತಿ ಗಂಭೀರ

terrible-accident-near-surani-collision-between-a-bike-and-a-private-bus-bike-riders-condition-critical

ಸುರಾನಿ ಬಳಿ ಭೀಕರ ಆಕ್ಸಿಡೆಂಟ್! ಬೈಕ್​-ಖಾಸಗಿ ಬಸ್​ ನಡುವೆ ಡಿಕ್ಕಿ! ಬೈಕ್ ಸವಾರನ ಸ್ಥಿತಿ ಗಂಭೀರ

KARNATAKA NEWS/ ONLINE / Malenadu today/ Jun 11, 2023 SHIVAMOGGA NEWS

ತೀರ್ಥಹಳ್ಳಿ  – ಸಾಗರ ರಸ್ತೆಯಲ್ಲಿ ಬರುವ ಸುರಾನಿ ಬಳಿ ಖಾಸಗಿ ಬಸ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದೆ. ಪರಿಣಾಮ  ಬೈಕ್ ಸವಾರನಿಗೆ ಗಂಭೀರ ಗಾಯವಾಗಿದೆ. 

ಗಾಯಾಳುವನ್ನು ಕಮ್ಮರಡಿ ಬಳಿಯ ಅರುಣ್ ಕುಮಾರ್ ಎಂದು ಗುರುತಿಸಲಾಗಿದೆ. ಅವರ ತಲೆ ಮತ್ತು ಭುಜಕ್ಕೆ ತೀವ್ರ ಸ್ವರೂಪದ ಗಾಯವಾಗಿದೆ. ಅವರನ್ನ  ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿ ಹೆಚ್ಚಿನ ಚಿಕಿತ್ಸೆಗೆ ತೀರ್ಥಹಳ್ಳಿಯ ಜಯಚಾಮರಾಜೇಂದ್ರ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿತ್ತು ಅಲ್ಲಿಂದ ಮಂಗಳೂರಿನ ವೆನ್​ಲಾಕ್ ಆಸ್ಪತ್ರೆಗೆ ರವಾನಿಸಲಾಗಿದೆ. 

ತಮ್ಮ ಪತ್ನಿಯ ತವರೂರು ಕೋಡೂರು ಸಮೀಪದ ಹಿಂಡ್ಲೆಮನೆ‌ಯಿಂದ ಸ್ವಗ್ರಾಮ ಕಮ್ಮರಡಿ ಕಡೆಗೆ ಬೈಕಿನಲ್ಲಿ ಬರುತ್ತಿದ್ದ ವೇಳೆ,  ತೀರ್ಥಹಳ್ಳಿ ಕಡೆಯಿಂದ ರಿಪ್ಪನ್‌ಪೇಟೆ ಕಡೆಗೆ ಬರುತ್ತಿದ್ದ ಖಾಸಗಿ ಬಸ್‌ಗೆ ಬೈಕ್ ಡಿಕ್ಕಿಯಾಗಿದೆ. 




ಸಾಗರದಲ್ಲಿ ಸೈಕಲ್ ವಿತರಿಸಿದ ಶಾಸಕ ಬೇಳೂರು ಗೋಪಾಲಕೃಷ್ಣ!

ಸಾಗರ / ಪರಿಸರ ದಿನಾಚರಣೆ ಎಂದರೆ ಸಸಿಗಳನ್ನು ನೆಡುವುದು ಮಾತ್ರ ಅಲ್ಲ, ವಾಯುಮಾಲಿನ್ಯ ತಡೆಗಟ್ಟುವುದೂ ಪರಿಸರ ರಕ್ಷಣೆಯ ಒಂದು ಭಾಗ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಅಭಿಪ್ರಾಯಪಟ್ಟರು. 

ಇಲ್ಲಿನ ಪತ್ರಿಕಾ ಭವನದಲ್ಲಿ ಪ್ರೆಸ್ ಟ್ರಸ್ಟ್ ಆಫ್ ಸಾಗರ್ ಮತ್ತು ಕಾರ್ಯರತ ಪತ್ರಕರ್ತರ ಸಂಘ ಹಾಗೂ ಪತ್ರಿಕಾ ವಿತರಕರ ಸಂಘ ಇವುಗಳ ಸಂಯುಕ್ತಾಶ್ರಯದಲ್ಲಿ ಶವಾರ ಏರ್ಪಡಿಸಿದ್ದ ಪರಿಸರ ದಿನಾಚರಣೆ ಅಂಗವಾಗಿ ವಿವಿಧ ದಿನಪತ್ರಿಕಾ ವಿತರಕರುಗಳಿಗೆ ಸೈಕಲ್ ವಿತರಿಸಿದ ನಂತರ ಅವರು ಮಾತನಾಡಿದ ಅವರು, ಪತ್ರಿಕಾ ವಿತರಕರೂ ಪತ್ರಿಕೆಯ ಒಂದು ಭಾಗ ಎಂದು ತಿಳಿದು ಅವರಿಗೆ ನೆರವು, ಧೈರ್ಯ ತುಂಬಿರುವುದು ಬೇರೆಯವರಿಗೆ ಪ್ರೇರಣೆಯಾಗಲಿ. ಮಳೆ, ಗಾಳಿ, ಚಳಿ ಎನ್ನದೇ ವರ್ಷವಿಡೀ ಕಷ್ಟದ ಜೀವನ ನಡೆಸುವ ವಿತರಕರ ಜೀವನದ ದಾರಿಗೆ ನಾವು ಕೈ ಜೋಡಿಸಬೇಕು ಎಂದರು. 

ಬೆಂಗಳೂರು, ದೆಹಲಿಯಂಥ ಮಹಾನಗರಗಳಲ್ಲಿ ವಾಹನಗಳ ದಟ್ಟಣೆಯಿಂದ ವಾಯುಮಾಲಿನ್ಯ ಉಂಟಾಗಿ ಪರಿಸರಕ್ಕೆ ಹಾಯಾಗುತ್ತಿದೆ. ಅಸಮರ್ಥ ವಾಹನಗಳಿಂದ ವಿಪರೀತ ಹೊಗೆಯುಗುಳುವ ವಾಹನಗಳು ಪರಿಸರವನ್ನು ಕಲುಷಿತವನ್ನಾಗಿ ಮಾಡುತ್ತವೆ. ವಾಯುಮಾಲಿನ್ಯದಿಂದ ಅಸ್ತಮಾದಂಥ ಅನೇಕ ಕಾಯಿಲೆಗಳು ಜನರನ್ನು ಕಾಡುತ್ತವೆ. ಇಂಥ ಸಂದರ್ಭದಲ್ಲಿ ಇಲ್ಲಿನ ಪತ್ರಕರ್ತರ ಸಂಘ ಪರಿಸರಸ್ನೇಹಿಯಾಗಿರುವ ಸೈಕಲ್‌ಗಳನ್ನು ವಿತರಕರಿಗೆ ಡಿರುವುದು ರಾಜ್ಯಕ್ಕೇ ಮಾದರಿ ಹೆಜ್ಜೆ ಎಂದರು. 

ಸಾಮಾಜಿಕ ಜವಾಬ್ದಾರಿ ಹೊಂದಿರುವ ಪತ್ರಕರ್ತರು ಆಯಾ ಸಂದರ್ಭದಲ್ಲಿ ಎಚ್ಚರಿಕೆ, ಮಾಹಿತಿ ಹಾಗೂ ಸಲಹೆಗಳನ್ನು ನೀಡುತ್ತಿರುತ್ತಾರೆ. ಹೀಗೆ ಸಾಮಾಜಿಕ ಕಳಕಳಿಯ ಜೊತೆಗೆ ಪರಿಸರ ಪ್ರೇಮವನ್ನೂ ಪೋಷಿಸುತ್ತಿರುವುದು ಅನುಕರಣೀಯ. ಸಂಘ ಸಂಸ್ಥೆಗಳು ಪರಿಸರ ಕಾಳಜಿಯಟ್ಟುಕೊಂಡರೆ ಪರಿಸರ ಸಂರಕ್ಷಣೆ ಸಾಧ್ಯ. ನಾವು ಗಿಡ ಕಡಿಯುತ್ತೇವೆ ಬಿಟ್ಟರೆ ಗಿಡ ಬೆಳೆಸುವ ಮನಸ್ಥಿತಿಯಿಂದ ದೂರವಾಗಿದ್ದೇವೆ ಎಂದವರು ವಿಷಾದಿಸಿದರು. 

ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಮಾತನಾಡಿ, ವಿತರಕರು ಮಾಧ್ಯಮದವರಿಂದ ಹೊರತಾದವರು ಎಂಬ ಭಾವನೆ ಸರಿಯಲ್ಲ. ಮುದ್ರಣಗೊಂಡ ಪತ್ರಿಕೆಗಳು ಸಕಾಲಕ್ಕೆ ಓದುಗರ ಕೈ ತಲುಪುವಲ್ಲಿ ವಿತರಕರ ಪರಿಶ್ರಮ ಬಹಳ ಇದೆ. ಇವರೂ ಪತ್ರಿಕೆಯ ಒಂದು ಭಾಗ ಎಂದು ತಿಳಿದು ಅವರಿಗೆ ಅಗತ್ಯ ಸೌಲಭ್ಯ ನೀಡುತ್ತಿರುವುದು ಸಂಘದ ಮಾದರಿ ನಡೆಯಾಗಿದೆ. ಕಷ್ಟದ ಬದುಕು ನಡೆಸುತ್ತಿರುವ ಪತ್ರಿಕಾ ವಿತರಕರುಗಳಿಗೆ ಸೈಕಲ್ ವಿತರಣೆ, ವಿಮೆ ಸೌಲಭ್ಯ ಕಲ್ಪಿಸಿರುವುದು ಬೇರೆ ಸಂಘಗಳಿಗೆ ಸ್ಫೂರ್ತಿಯಾಗಲಿ. ದಾಗಳು ಕೊಡುವ ಹಣ ಪ್ರಾಮಾಣಿಕವಾಗಿ ಬಳಕೆಯಾದರೆ ಕೊಡುವ ಕೈಗಳಿಗೇನೂ ಬರವಿಲ್ಲ ಎಂದರು. 

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಅತಾಕುಮಾರಿ ಮಾತನಾಡಿ, ಪತ್ರಿಕಾ ವಿತರಕರು ಬೆಳಗಿನ ಜಾವವೇ ಎದ್ದು ವಿತರಣೆಗೆ ಹೋಗಬೇಕು. ಇಂಥ ಸಂದರ್ಭದಲ್ಲಿ ಪ್ರಾಣ ಹಾಯಾದ ಘಟನೆಯೂ ಇಲ್ಲಿ ನಡೆದಿರುವುದು ವಿಷಾದಯ. ವಿಮೆಯಂಥ ಸೌಲಭ್ಯವನ್ನು ಅವರಿಗೆ ಒದಗಿಸಿರುವುದು ಸಂಘದ ಸಮಾಜಮುಖೀ ಚಿಂತನೆಗೆ ಸಾಕ್ಷಿಯಾಗಿದೆ. ಕೊರೋನಾ ಸಂದರ್ಭದಲ್ಲಿ ಪತ್ರಿಕಾ ವಿತರಕರು ಬಹಳ ಸಂಕಷ್ಟ ಅನುಭವಿಸಿದ್ದಾರೆ ಎಂದರು. 

ನಗರಸಭೆ ಸದಸ್ಯ ಆರ್.ಶ್ರೀವಾಸ್ ಮಾತನಾಡಿ, ಪತ್ರಿಕಾ ವಿತರಕರಿಗೂ ಕಟ್ಟಡ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳನ್ನು ಒದಗಿಸಬೇಕು. ಭದ್ರತೆ ಒದಗಿಸಿದರೆ ಅವರ ಬದುಕೂ ಹಸನಾಗುತ್ತದೆ. ಪತ್ರಿಕೆಗಳು ನಮ್ಮ ತ್ಯದ ಸಂಗಾತಿ. ಅವುಗಳನ್ನು ಮನೆಗೆ ತಲುಪಿಸುವ ವಿತರಕರ ಕೆಲಸ ಸಣ್ಣದಲ್ಲ ಎಂದರು. 

ಹಿರಿಯ ಪತ್ರಕರ್ತ ಎ.ಡಿ.ಸುಬ್ರಹ್ಮಣ್ಯ ಅಧ್ಯಕ್ಷತೆ ವಹಿಸಿದ್ದರು.ನಗರಸಭೆ ಸದಸ್ಯ ಗಣಪತಿ ಮಂಡಗಳಲೆ, ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ರಮೇಶ್ ಎನ್., ರಂಜನ್ ಹಾಜರಿದ್ದರು. 

ಧರ್ಮರಾಜ್ ಸ್ವಾಗತಿಸಿದರು. ಹಿತಕರ ಜೈನ್ ಪ್ರಾಸ್ತಾವಿಕ ಮಾತನಾಡಿದರು. ಶೈಲೇಂದ್ರ ವಂದಿಸಿದರು. ಗಣಪತಿ ಶಿರಳಗಿ ನಿರೂಪಿಸಿದರು.

ಸೈಕಲ್‌ಗಳ ದಾನಿಗಳು,ನಗರಸಭಾ ಸದಸ್ಯ ಆರ್.ಶ್ರಿನಿವಾಸ್,ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ರಾಯಲ್‌ಬಿಲ್ಡರ‍್ಸ್‌ನ ಮಹೇಶ್ ಮತ್ತು ಜಲೀಲ್,ರಾಮಕೃಷ್ಣ ಶಾಲೆಯ ದೇವರಾಜ್,ಅರಣ್ಯ ಇಲಾಖೆ ನೌಕರರ ಸಂಘದ ಅಧ್ಯಕ್ಷ ಸಂತೋಷ್‌ಕುಮಾರ್,ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾಕುಮಾರಿ,ನಗರಸಭೆ ಹಿರಿಯ ಇಂಜಿನಿಯರ್ ಹೆಚ್.ಕೆ.ನಾಗಪ್ಪ,ನಗರಸಭೆ ಸದಸ್ಯೆ ನಾದಿರಾಪರ್ವಿನ್ ಇವರುಗಳು ಸೈಕಲ್‌ಗಳನ್ನು ನೀಡಿದ ದಾನಿಗಳು.


ಬೆಂಗಳೂರಿನಲ್ಲಿಯೇ ಠಿಕಾಣಿ ಹೂಡಿರುವ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್​!ಕುತೂಹಲ ಮೂಡಿಸಿದ ನಡೆ

ಭದ್ರಾವತಿ/ ಸಚಿವಸ್ಥಾನಕ್ಕಾಗಿ ರಾಜ್ಯರಾಜಧಾನಿ ಬೆಂಗಳೂರಲ್ಲಿಯೇ ಇದ್ದು ಶತ ಪ್ರಯತ್ನ ನಡೆಸಿದ್ದ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ್​  ಸಚಿವಸ್ಥಾನ ಸಿಗದಿದ್ದರೂ ಸಹ ಬೆಂಗಳೂರಿನಲ್ಲಿಯೇ ಕಳೆ 26 ದಿನಗಳಿಂದ ಠಿಕಾಣಿ ಹೂಡಿದ್ದಾರೆ. ಇದಕ್ಕೆ ಕಾರಣವೇ ಕುತೂಹಲವಾಗಿದೆ. ಭದ್ರಾವತಿಯ ಜನರು ಸಂಘಟನೆಗಳು ಶಾಸಕರ ದಾರಿ ಕಾಯುತ್ತಿದ್ದಾರೆ. ಆದರೆ ಸಂಗಮೇಶ್ವರ್​ ಬೆಂಗಳೂರಿನಲ್ಲಿಯೇ ತಮ್ಮ ಕ್ಷೇತ್ರದ ಜನರನ್ನ ಭೇಟಿಯಾಗುತ್ತಿದ್ದಾರೆ. 

ಮೇ.13ರಂದು ಫಲಿತಾಂಶ ಹೊರಬಿದ್ದ ನಂತರ ಬೆಂಗಳೂರಿಗೆ ತೆರಳಿದ್ದ ಸಂಗಮೇಶ್ವರ್​ ಮತ್ತೆ, ಪುನಃ ಕ್ಷೇತ್ರಕ್ಕೆ ಹಿಂದಿರುಗಿಲ್ಲ. ಸರ್ಕಾರ ರಚನೆ ಆರಂಭದಲ್ಲಿಯೇ ಸಚಿವ ಸ್ಥಾನಕ್ಕಾಗಿ ಸಂಗಮೇಶ್ವರ್ ತೀವ್ರ ಪೈಪೋಟಿ ನಡೆಸಿದ್ದರು. ಆನಂತರ  ಸಂಪುಟ ವಿಸ್ತರಣೆ ಸಂದರ್ಭದಲ್ಲೂ ಸಹ ತೀವ್ರ ಪೈಪೋಟಿಗೆ ಮುಂದಾಗಿದ್ದರು. ಆದರೆ ಸಚಿವ ಸ್ಥಾನ ಅವರಿಗೆ ಸಿಗಲಿಲ್ಲ.  ಇದೀಗ ಯಾವುದಾದರೂ ಪ್ರತಿಷ್ಠಿತ ನಿಗಮ ಮಂಡಳಿಗೆ ಅಧ್ಯಕ್ಷರನ್ನಾಗಿ ನೇಮಿಸುವಂತೆ  ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರನ್ನ ಸಂಗಮೇಶ್​ ಒತ್ತಾಯಿಸುತ್ತಿದ್ದಾರಂತೆ. ಈ ಬಗ್ಗೆ ಖಾತರಿ ಮಾಡಿಕೊಂಡೇ ಕ್ಷೇತ್ರಕ್ಕೆ ವಾಪಸ್ ಆಗಲಿದ್ದಾರೆ ಎನ್ನುತ್ತಿದೆ ಸ್ಥಳೀಯ ಮಾಧ್ಯಮಗಳು..


ಜೂನ್ ತಿಂಗಳ​ ವಿದ್ಯುತ್​ ಬಿಲ್​ ವಿಳಂಬ! ಕಾರಣವೇನು? ಮೆಸ್ಕಾಂ ಪ್ರಕಟಣೆಯಲ್ಲಿ ಏನಿದೆ



ಭದ್ರಾವತಿ: ಮೆಸ್ಕಾಂ ನಗರ ಉಪ ವಿಭಾಗದ ವ್ಯಾಪ್ತಿಯಲ್ಲಿ ಬರುವ ವಿದ್ಯುತ್‌ ಗ್ರಾಹಕರಿಗೆ ಜೂನ್ ತಿಂಗಳ ವಿದ್ಯುತ್ ಬಿಲ್ ವಿಳಂಬವಾಗಲಿದೆ ಎಂದು ನಗರ ಉಪ ವಿಭಾಗದ ಅಧಿಕಾರಿಗಳು ಪ್ರಕಟಣೆಯನ್ನ ಹೊರಡಿಸಿದ್ದಾರೆ. 

ಈ ಸಂಬಂಧ  ಸಹಾಯಕ ಕಾರ್ಯ ನಿರ್ವಾಹಕ  ಇಂಜಿನಿಯರ್​ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಚೇರಿ ಯಲ್ಲಿ ವಿದ್ಯುತ್‌ ದರ ಪರಿಷ್ಕರಣೆಯ ಹಿನ್ನೆಲೆಯಲ್ಲಿ,  ಆರ್ ಎಪಿಡಿಆರ್‌ಪಿ ತಂತ್ರಾಂಶದಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿದೆಯಂತೆ. ಹೀಗಾಗಿ  ಜೂನ್​ ತಿಂಗಳ ಬಿಲ್​ ವಿತರಿಸುವುದು ವಿಳಂಬವಾಗುತ್ತಿದೆ ಎಂದು ಹೇಳಲಾಗಿದೆ. ಹೀಗಾಗಿ ವಿದ್ಯುತ್ ಗ್ರಾಹಕರು ಸಹಕರಿಸುವಂತೆ ಮನವಿ ಮಾಡಿದ್ದಾರೆ.


ಶಿವಮೊಗ್ಗ ನಗರದ ಹಲವೆಡೆ ವಿದ್ಯುತ್ ವ್ಯತ್ಯಯ

ಶಿವಮೊಗ್ಗ: ನಗರ ಉಪ ವಿಭಾಗ-2ರ ಘಟಕ-2,5,6 ರ ವ್ಯಾಪ್ತಿಯಲ್ಲಿನ ಮಂಡಿ ವಿದ್ಯುತ್‌ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಹಾಗೂ ಸ್ಮಾರ್ಟ್‌ಸಿಟಿ ಕಾಮಗಾರಿ ಹಿನ್ನೆಲೆಯಲ್ಲಿ ಕೆಳಕಂಡ ಪ್ರದೇಶಗಳಲ್ಲಿ ಜೂ.11ರ ಬೆಳಗ್ಗೆ 9ರಿಂದ ಸ೦ಜೆ 6ರ ವರೆಗೆ ವಿದ್ಯುತ್‌ ವ್ಯತ್ಯಯವಾಗಲಿದೆ.

ಎಲ್ಲೆಲ್ಲಿ?

ಪಿಯ‌ರ್​ ಲೈಟ್, ಪೇಪ‌ರ್​ ಪ್ಯಾಕ್ಟರಿ, ಮಂಡ್ಲಿ ಕೈಗಾರಿಕಾ ಪ್ರದೇಶ, ಕೆ.ಆರ್ ವಾಟರ್ ಸಪ್ಪೆ, ಗೋಪಿಶೆಟ್ಟಿಕೊಪ್ಪ, ಸಿದ್ದೇಶ್ವರ ಸರ್ಕಲ್, ತುಂಗಾನಗರ ಆಸ್ಪತ್ರೆ, ಚಾಲುಕ್ಯನಗರ, ಕೆಎಚ್‌ ಬಿ ಕಾಲೊನಿ, ಮೇಲಿನ ಮತ್ತು ಕೆಳಗಿನ ತುಂಗಾನಗರ, ಹಳೇ ಗೋಪಿಶೆಟ್ಟಿಕೊಪ್ಪ, ಎನ್.ಟಿ.ರಸ್ತೆ ಮತ್ತು ಬಿ.ಎಚ್. ರಸ್ತೆ ಸುತ್ತಮುತ್ತ, ಬಸ್ ನಿಲ್ದಾಣ, ಊರುಗಡೂರು, ಸುತ್ತ ಮುತ್ತಲಿನ ಪ್ರದೇಶ, ಆರ್‌ ಎಂಎಲ್ ನಗರ, ದುರ್ಗಿಗುಡಿ, ಸವಾರ್‌ ಲೈನ್ ರಸ್ತೆ, ಹರಕೆರೆ, ಗಾಂಧಿ ಬಜಾರ್, ಇಲಿಯಾಸ್ ನಗರ, ಗಾಜನೂರು, ರಾಮೇನಕೊಪ್ಪ, ಕಲ್ಲೂರು ಮಂಡಿ ಗ್ರಾಮಾಂತರ ಪ್ರದೇಶ, ಐಹೊಳೆ, ಅಗಸವಳ್ಳಿ, ಗೋವಿಂದಾ ಪುರ, ಪುರದಾಳು, ಶರಾವತಿ ನಗರದಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ.