KARNATAKA NEWS/ ONLINE / Malenadu today/ Jun 11, 2023 SHIVAMOGGA NEWS
ಭದ್ರಾವತಿ ತಾಲೂಕು ಬಿಜೆಪಿ ಮಂಡಲ ಕಾರ್ಯದರ್ಶಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಕವಿತಾ ಸುರೇಶ್(೪೦) ನಿನ್ನೆ ಬೆಳಿಗ್ಗೆ ನಿಧನ ಹೊಂದಿದ್ಧಾರೆ.
ಅವರು, ಪತಿ ಛಾಯಾಗ್ರಾಹಕ ಸುರೇಶ್ ಹಾಗು ಒಂದು ಗಂಡು, ಒಂದು ಹೆಣ್ಣು ಮಗಳನ್ನ ಅಗಲಿದ್ದಾರೆ. ಏಕಾಏಕಿ ಅನಾರೋಗ್ಯಕ್ಕೆ ಒಳಗಾಗಿದ್ದ ಇವರನ್ನು ಶಿವಮೊಗ್ಗ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ನಗರದ ಬಿ.ಎಚ್ ರಸ್ತೆ ಪದ್ಮನಿಲಯ ಹೋಟೆಲ್ ಬಳಿ ವಾಸವಾಗಿದ್ದರು. ಬಿಜೆಪಿ ಪಕ್ಷದ ಸಕ್ರಿಯ ಕಾರ್ಯಕರ್ತೆಯಾಗಿ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದರು. ಸ್ನೇಹ ಮಿಲನ ಮಹಿಳಾ ಸಂಘಟನೆ ಅಧ್ಯಕ್ಷರಾಗಿದ್ದರು. ಅಲ್ಲದೆ ವೀರಶೈವ ಲಿಂಗಾಯತ ಸಮಾಜ ಸೇರಿದಂತೆ ವಿವಿಧ ಸಂಘಟನೆಗಳಲ್ಲೂ ಸಕ್ರಿಯವಾಗಿ ಗುರುತಿಸಿಕೊಂಡಿದ್ದರು.
ಬೆಂಗಳೂರಿನಲ್ಲಿಯೇ ಠಿಕಾಣಿ ಹೂಡಿರುವ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್!ಕುತೂಹಲ ಮೂಡಿಸಿದ ನಡೆ
ಭದ್ರಾವತಿ/ ಸಚಿವಸ್ಥಾನಕ್ಕಾಗಿ ರಾಜ್ಯರಾಜಧಾನಿ ಬೆಂಗಳೂರಲ್ಲಿಯೇ ಇದ್ದು ಶತ ಪ್ರಯತ್ನ ನಡೆಸಿದ್ದ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ್ ಸಚಿವಸ್ಥಾನ ಸಿಗದಿದ್ದರೂ ಸಹ ಬೆಂಗಳೂರಿನಲ್ಲಿಯೇ ಕಳೆ 26 ದಿನಗಳಿಂದ ಠಿಕಾಣಿ ಹೂಡಿದ್ದಾರೆ. ಇದಕ್ಕೆ ಕಾರಣವೇ ಕುತೂಹಲವಾಗಿದೆ. ಭದ್ರಾವತಿಯ ಜನರು ಸಂಘಟನೆಗಳು ಶಾಸಕರ ದಾರಿ ಕಾಯುತ್ತಿದ್ದಾರೆ. ಆದರೆ ಸಂಗಮೇಶ್ವರ್ ಬೆಂಗಳೂರಿನಲ್ಲಿಯೇ ತಮ್ಮ ಕ್ಷೇತ್ರದ ಜನರನ್ನ ಭೇಟಿಯಾಗುತ್ತಿದ್ದಾರೆ.
ಮೇ.13ರಂದು ಫಲಿತಾಂಶ ಹೊರಬಿದ್ದ ನಂತರ ಬೆಂಗಳೂರಿಗೆ ತೆರಳಿದ್ದ ಸಂಗಮೇಶ್ವರ್ ಮತ್ತೆ, ಪುನಃ ಕ್ಷೇತ್ರಕ್ಕೆ ಹಿಂದಿರುಗಿಲ್ಲ. ಸರ್ಕಾರ ರಚನೆ ಆರಂಭದಲ್ಲಿಯೇ ಸಚಿವ ಸ್ಥಾನಕ್ಕಾಗಿ ಸಂಗಮೇಶ್ವರ್ ತೀವ್ರ ಪೈಪೋಟಿ ನಡೆಸಿದ್ದರು. ಆನಂತರ ಸಂಪುಟ ವಿಸ್ತರಣೆ ಸಂದರ್ಭದಲ್ಲೂ ಸಹ ತೀವ್ರ ಪೈಪೋಟಿಗೆ ಮುಂದಾಗಿದ್ದರು. ಆದರೆ ಸಚಿವ ಸ್ಥಾನ ಅವರಿಗೆ ಸಿಗಲಿಲ್ಲ. ಇದೀಗ ಯಾವುದಾದರೂ ಪ್ರತಿಷ್ಠಿತ ನಿಗಮ ಮಂಡಳಿಗೆ ಅಧ್ಯಕ್ಷರನ್ನಾಗಿ ನೇಮಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರನ್ನ ಸಂಗಮೇಶ್ ಒತ್ತಾಯಿಸುತ್ತಿದ್ದಾರಂತೆ. ಈ ಬಗ್ಗೆ ಖಾತರಿ ಮಾಡಿಕೊಂಡೇ ಕ್ಷೇತ್ರಕ್ಕೆ ವಾಪಸ್ ಆಗಲಿದ್ದಾರೆ ಎನ್ನುತ್ತಿದೆ ಸ್ಥಳೀಯ ಮಾಧ್ಯಮಗಳು..