ಈ ತಿಂಗಳೇ ಸಿಗುತ್ತೆ  2 ತಿಂಗಳ ಪಡಿತರ ಅಕ್ಕಿ: ದೂರುಗಳಿದ್ದರೆ ಈ ನಂಬರ್​​ಗೆ ಸಂಪರ್ಕಿಸಿ

ಹಂಚಿಕೊಳ್ಳಿ
WhatsApp Facebook X Telegram
Shivamogga News 2 Months Free Ration Rice
Shivamogga News 2 Months Free Ration Rice

Shivamogga News ಶಿವಮೊಗ್ಗ: ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಅನ್ನಭಾಗ್ಯ ಯೋಜನೆಯಡಿ 2026ರ ಆಗಸ್ಟ್ ಮತ್ತು ಸೆಪ್ಟಂಬರ್ ಮಾಹೆಗಳ ಅನ್ನಭಾಗ್ಯ ಪಡಿತರವನ್ನು ಆಗಸ್ಟ್ ಮಾಹೆಯಲ್ಲಿ ಒಂದೇ ಬಾರಿಗೆ ಒಟ್ಟಾಗಿ ವಿತರಣೆ ಮಾಡಲು ಸರ್ಕಾರವು ಆದೇಶಿಸಿದೆ.

ಶಿವಮೊಗ್ಗ ಶಾಸಕರ ಕಚೇರಿ ಎದುರು ಬೃಹತ್ ಪ್ರತಿಭಟನೆ, ಕಾರಣವೇನು

ಅಂತ್ಯೋದಯ ಅನ್ನ ಯೋಜನೆಯಡಿ ಪಡಿತರ ಚೀಟಿಗೆ ಎರಡು ತಿಂಗಳ ಒಟ್ಟು 70 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲಾಗುವುದು. ಆದ್ಯತಾ ಪಡಿತರ ಚೀಟಿಗೆ ಎರಡು ತಿಂಗಳ ಒಟ್ಟು 10 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ನೀಡಲಾಗುವುದು. ಪಡಿತರ ಚೀಟಿದಾರರು ಆಹಾರ ಧಾನ್ಯವನ್ನು ಪಡೆಯುವಾಗ ಆಗಸ್ಟ್ ಮತ್ತು ಸೆಪ್ಟಂಬರ್ ಮಾಹೆಗಳ ಹಂಚಿಕೆಗಳಿಗೆ ಒಂದು ಬಾರಿ ಕಡ್ಡಾಯವಾಗಿ ಬಯೋ ನೀಡಿ ಪಡಿತರ ಪಡೆಯುವುದು. ಪ್ರತಿ ದಿನ ಬೆಳಗ್ಗೆ 6.00 ರಿಂದ ರಾತ್ರಿ 10.00ರವರೆಗೆ ಪಡಿತರ ವಿತರಣೆಗೆ ಸರ್ವರ್ ಲಭ್ಯಗೊಳಿಸಿರುವುದರಿಂದ ಆ. 31 ರೊಳಗಾಗಿ ನ್ಯಾಯಬೆಲೆ ಅಂಗಡಿಗೆ ತೆರಳಿ ಎರಡು ಬಾರಿ ಬಯೋ ನೀಡಿ ಪಡಿತರ ಪಡೆಯುವುದು.

ಪಡಿತರ ವಿತರಣೆ ಸಂಬಂಧ ಯಾವುದೇ ದೂರುಗಳಿದ್ದಲ್ಲಿ ಕೇಂದ್ರ ಸಹಾಯವಾಣಿ 1967 ಕ್ಕೆ ಕರೆ ಮಾಡಿ ಅಥವಾ ಹತ್ತಿರದ ಆಹಾರ ಕಚೇರಿಗೆ ಭೇಟಿ ನೀಡಿ ದೂರು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor