High Court Bench ಶಿವಮೊಗ್ಗ: ಹೈಕೋರ್ಟ್ ಪೀಠ ಸ್ಥಾಪನೆಯಾಗಬೇಕಾದರೆ ಜಿಲ್ಲಾ ಬಂದ್ ಅನಿವಾರ್ಯ. ನಗರದಲ್ಲಿ ಪ್ರತ್ಯೇಕ ಹೈಕೋರ್ಟ್ ಪೀಠ ಸ್ಥಾಪನೆಯಾಗಬೇಕಾದರೆ ಜಿಲ್ಲೆಯ ಏಳು ತಾಲ್ಲೂಕುಗಳ ಬೆಂಬಲದೊಂದಿಗೆ ಶಿವಮೊಗ್ಗ ಬಂದ್ ಮಾಡಬೇಕೆಂದು ಶಾಂತವೇರಿ ಗೋಪಾಲಗೌಡ ಅಧ್ಯಯನ ಕೇಂದ್ರ ಆಗ್ರಹಿಸಿದೆ.
ಶಿವಮೊಗ್ಗ : ಮಳೆ ಆರ್ಭಟ, ತುಂಗಾ ಜಲಾಶಯದ ಒಳಹರಿವು ಹೊರಹರಿವು ಎಷ್ಟಿದೆ ಇವತ್ತು ?
ಇಂದು ನರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಟ್ರಸ್ಟ್ ಮುಖ್ಯಸ್ಥ ಕಲ್ಲೂರು ಮೇಘರಾಜ್, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು, ರಾಜ್ಯ ಹೈಕೋರ್ಟ್ನ ಮುಖ್ಯ ನ್ಯಾಯಾಧೀಶರು ಹಾಗೂ ರಾಜ್ಯಪಾಲರು ಶಿವಮೊಗ್ಗ ಜಿಲ್ಲೆಗೆ ಖಂಡಿತವಾಗಿ ಪ್ರತ್ಯೇಕ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪಿಸುವ ನಿರ್ಧಾರಕ್ಕೆ ಬರಬಹುದೆಂದು ವಿಶ್ವಾಸ ವ್ಯಕ್ತಪಡಿಸಿದರು.
1985ರಲ್ಲಿ ಕೇಂದ್ರ ಸರ್ಕಾರವು ಸಂಚಾರಿ ಪೀಠ ಸ್ಥಾಪನೆಯ ಬಗ್ಗೆ ರಚಿಸಿದ ನ್ಯಾಯಮೂರ್ತಿ ಜಸ್ವಂತ್ ಸಿಂಗ್ ನೇತೃತ್ವದ ಸಮಿತಿಯ ಮಾನದಂಡಗಳ ಪ್ರಕಾರ ಶಿವಮೊಗ್ಗವು ಸೂಕ್ತ ಸ್ಥಳವಾಗಿದೆ. ಸಂಚಾರಿ ಪೀಠಕ್ಕೆ ಸಾಕಾಗುವಷ್ಟು ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳು ಲಭ್ಯವಿವೆ. ಶಿವಮೊಗ್ಗದಲ್ಲಿ ಸಂಚಾರಿ ಪೀಠ ಸ್ಥಾಪನೆಯಾದರೆ ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಚಿತ್ರದುರ್ಗ, ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಜನರಿಗೆ ಮಧ್ಯಭಾಗದಲ್ಲಿ ಪ್ರತ್ಯೇಕ ಪೀಠದ ಅನುಕೂಲ ಸಿಗಲಿದೆ ಎಂದರು.
ಈ ಹಿಂದಿನ ಎಲ್ಲ ಹೋರಾಟಗಳಿಗೆ ಯಾವುದೇ ಸ್ಪಂದನೆ ಕರ್ನಾಟಕ ಸರ್ಕಾರದಿಂದಾಗಲಿ ಅಥವಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಂದಾಗಲಿ ಹಾಗೂ ರಾಜ್ಯಪಾಲರಿಂದಾಗಲಿ ದೊರೆತಿಲ್ಲ. ಈ ಕಾರಣದಿಂದ ಶಿವಮೊಗ್ಗ ನ್ಯಾಯವಾದಿಗಳ ಸಂಘದ ನೇತೃತ್ವದಲ್ಲಿ ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ನ್ಯಾಯವಾದಿಗಳ ಸಂಘ, ವಿವಿಧ ಜನಪರ ಸಂಘಟನೆಗಳು ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರುಗಳ ಬೆಂಬಲ ಪಡೆಯಲು 3 ತಂಡಗಳಾಗಿ ಜಿಲ್ಲಾ ಪ್ರವಾಸ ಮಾಡಬೇಕು. ನಂತರ ಅಖಂಡ ಶಿವಮೊಗ್ಗ ಜಿಲ್ಲಾ ಬಂದ್ಗೆ ದಿನಾಂಕವನ್ನು ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.
