ಶಿವಮೊಗ್ಗದಲ್ಲಿ ಹಿಟ್ ಆಂಡ್ ರನ್, ರೋಡ್​ನಿಂದ ರೈಲ್ವೇ ಹಳಿಗೆ ಬಿದ್ದ ಆಟೋ. ಪ್ಲೈ ಓವರ್ನಲ್ಲಿ ಜೋತಾಡಿದ  ಚಾಲಕ!

ಹಂಚಿಕೊಳ್ಳಿ
WhatsApp Facebook X Telegram
ನಗರದ ರೈಲ್ವೆ ಫ್ಲೈಓವರ್ ಮೇಲೆ ಹಿಟ್ ಆಂಡ್ ರನ್ ಘಟನೆ ಸಂಭವಿಸಿದೆ
ನಗರದ ರೈಲ್ವೆ ಫ್ಲೈಓವರ್ ಮೇಲೆ ಹಿಟ್ ಆಂಡ್ ರನ್ ಘಟನೆ ಸಂಭವಿಸಿದೆ

ಮಲೆನಾಡು ಟುಡೇ ಸುದ್ದಿ / ಶಿವಮೊಗ್ಗ: ಶಿವಮೊಗ್ಗದಲ್ಲಿ ನೆನ್ನೆ ನಡೆದ ಹಿಂದೂ ಮಹಾಸಭಾ ಗಣೇಶೋತ್ಸವ ಮೆರವಣಿಗೆ ನಡುವೆಯೇ ನಗರದ ರೈಲ್ವೆ ಫ್ಲೈಓವರ್ ಮೇಲೆ ಹಿಟ್ ಆಂಡ್ ರನ್ ಘಟನೆ ಸಂಭವಿಸಿದೆ. ಅಪಘಾತದಲ್ಲಿ ಬುಲೆಟ್ ಬೈಕ್ ಸವಾರ ಹಾಗೂ ಆಟೋ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು, ಆಟೋ ಚಾಲಕ ಫ್ಲೈಓವರ್ ಅಂಚಿನಲ್ಲಿ ಸಿಕ್ಕಿಬಿದ್ದು ಪರದಾಡಿದ್ದಾನೆ.

ಘಟನೆಯ ವಿವರ

ಶಿವಮೊಗ್ಗದ ಶೇಷಾದ್ರಿಪುರಂ ರೈಲ್ವೆ ಫ್ಲೈಓವರ್ ಮೇಲೆ ನೆನ್ನೆ ಸಂಜೆ ಅತಿವೇಗವಾಗಿ ಬಂದ ಕಾರೊಂದು ಬುಲೆಟ್ ಬೈಕ್ ಹಾಗೂ ಆಟೋಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ತಕ್ಷಣವೇ ಕಾರು ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.

ಕಾರು ಡಿಕ್ಕಿಯಾದ ರಭಸಕ್ಕೆ ಆಟೋ ರಸ್ತೆಯಿಂದ ಕೆಳಗಿದ್ದ ರೈಲ್ವೆ ಹಳಿಗೆ ಬಿದ್ದಿದೆ. ಈ ವೇಳೆ ಆಟೋ ಚಾಲಕ ಸೈಡ್‌ಗೆ ಜಿಗಿದಿದ್ದು, ಫ್ಲೈಓವರ್‌ನ ಮೇಲ್ಭಾಗದಲ್ಲೇ ಸಿಲುಕಿಕೊಂಡು ಜೋತಾಡುತ್ತಿದ್ದನು. ಆತನನ್ನು ಸಾರ್ವಜನಿಕರು ಹರಸಾಹಸ ಪಡಬೇಕಾಯಿತು. ಫ್ಲೈಓವರ್ ಅಂಚಿನಲ್ಲಿ ಸಿಲುಕಿದ್ದ ಚಾಲಕನನ್ನು ರಕ್ಷಿಸಲು ಸಾರ್ವಜನಿಕರು ತಕ್ಷಣವೇ ಲಾರಿಯೊಂದನ್ನು ಸ್ಥಳಕ್ಕೆ ತರಿಸಿ, ಸತತ ಕಾರ್ಯಾಚರಣೆ ನಡೆಸಿ ಆತನನ್ನು ಸುರಕ್ಷಿತವಾಗಿ ಕೆಳಗಿಳಿಸಿದರು.

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಆಟೋ ಚಾಲಕ ಹಾಗೂ ಬುಲೆಟ್ ಬೈಕ್ ಸವಾರನನ್ನು ಸಾರ್ವಜನಿಕರು ಆಂಬುಲೆನ್ಸ್ ಮೂಲಕ ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಕೋಟೆ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ತಲೆಮರೆಸಿಕೊಂಡಿರುವ ಕಾರು ಚಾಲಕನಿಗಾಗಿ ಬಲೆ ಬೀಸಿದ್ದಾರೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor