ಗೃಹ ಸಚಿವರ ತವರಿನಲ್ಲಿ ನಿಜಕ್ಕೂ ಪೊಲೀಸ್ ಇಲಾಖೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆಯಾ?..ರಾಜಕೀಯ ಹಗೆ ಮತ್ತು ಪ್ರತಿಕಾರಕ್ಕೆ ಎಫ್.ಐ.ಐರ್ ಎಂಬುದೇ ಅಸ್ತ್ರವಾಗಿದೆಯಾ?

ಗೃಹ ಸಚಿವರ ತವರಿನಲ್ಲಿ ನಿಜಕ್ಕೂ ಪೊಲೀಸ್ ಇಲಾಖೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆಯಾ?..ರಾಜಕೀಯ ಹಗೆ ಮತ್ತು ಪ್ರತಿಕಾರಕ್ಕೆ ಎಫ್.ಐ.ಐರ್ ಎಂಬುದೇ ಅಸ್ತ್ರವಾಗಿದೆಯಾ?

ಗೃಹ ಸಚಿವರ ತವರಿನಲ್ಲಿ ನಿಜಕ್ಕೂ ಪೊಲೀಸ್ ಇಲಾಖೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆಯಾ?..ರಾಜಕೀಯ ಹಗೆ ಮತ್ತು ಪ್ರತಿಕಾರಕ್ಕೆ ಎಫ್.ಐ.ಐರ್ ಎಂಬುದೇ ಅಸ್ತ್ರವಾಗಿದೆಯಾ?

ಪ್ರಜ್ಞಾವಂತ ಮತದಾರರ ಕ್ಷೇತ್ರವೆಂಬ ಹೆಗ್ಗಳಿಕೆ ಪಡೆದಿರುವ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ವೈಚಾರಿಕ ತಳಹದಿಯ ಮೇಲೆ ಆರೋಗ್ಯಕರವಾದ ರಾಜಕಾರಣ ನಡೆದುಕೊಂಡು ಬಂದಿದೆ. ಸೈದ್ದಾಂತಿಕ ಭಿನ್ನಾಭಿಪ್ರಾಯಗಳು ಏನೇ ಇದ್ದರೂ, ರಾಜಕೀಯ ನಾಯಕರು ತಮ್ಮದೇ ಧಾಟಿಯಲ್ಲಿ ಅದಕ್ಕೆ ಪ್ರತಿಕ್ರೀಯಿಸುವ ಮನಸ್ಥಿತಿ ಹೊಂದಿದ್ದಾರೆ. ಇದಕ್ಕೆ ಆರಗಾ ಜ್ಞಾನೇಂದ್ರರಾಗಲಿ ಅಥವಾ ಕಿಮ್ಮನೆ ರತ್ನಾಕರ್ ಅವರಾಗಲಿ ಹೊರತಾಗಿಲ್ಲ. ಆದರೆ ಆರಗಾ ಜ್ಞಾನೇಂದ್ರರವರು ಗೃಹ ಸಚಿವರಾಗುತ್ತಿದ್ದಂತೆ ಕ್ಷೇತ್ರದ ಚಿತ್ರಣವೇ ಬದಲಾಗಿದೆ. ರಾಜಿ ಸಂಧಾನವಾಗಬೇಕಾದ ವಿಷಯಗಳು, ಕೇಸ್ ಆಗದಂತ ಪ್ರಕರಣಗಳು ಉಗುರಿಗೆ ಹೋಗುವ ವಿಷಯಕ್ಕೆ ಕೊಡಲಿ ತೆಗೆದುಕೊಂಡರು ಎಂಬಂತೆ ಗಂಭೀರವಾಗುತ್ತಿದೆ.

 ರಾಜಕೀಯ ದ್ವೇಷಕ್ಕೆ ಕ್ಷೇತ್ರದ ಜನತೆ ಹಿಡಿಶಾಪ ಹಾಕುವಂತಾಗಿದೆ.ಬೇಲಿ ಗಲಾಟೆ, ಅರಣ್ಯ ಒತ್ತುವರಿ ಗಲಾಟೆಯಿಂದ ಹಿಡಿದು  ಶಾಲೆ ಹಾಸ್ಟೆಲ್ ರೆಕಮೆಂಡೇಷನ್ ನಂತಹ ವ್ಯವಸ್ಥೆ ವರೆಗೆ.., ಇವ ನಮ್ಮವನಾ ..ನಮ್ಮ ಪಕ್ಷದವನ ಎಂದು ಯೋಚಿಸುವ ಮನಸ್ಥಿತಿಗೆ ವ್ಯವಸ್ಥೆ ಹೋಗಿದೆ ಎಂದರೆ ನಿಜಕ್ಕೂ ವಿಪರ್ಯಾಸದ ಸಂಗತಿ. ಆರೋಗ್ಯಕರ ರಾಜಕಾರಣ ವ್ಯವಸ್ಥೆ ಇದ್ದರೆ, ಎಂತಹ ಸಂಘರ್ಷಗಳು ಬೇರೆ ಸ್ವರೂಪದ  ಬಣ್ಣ ಪಡೆಯುವುದಿಲ್ಲ...ಆದರೆ ತೀರ್ಥಹಳ್ಳಿ ತಾಲೂಕಿನಲ್ಲಿ ಸಣ್ಣಪುಟ್ಟ ವಿಚಾರಗಳು ಪೊಲೀಸ್ ಠಾಣೆ ಮೆಟ್ಟಲೇರಿದಾಗ, ನೊಂದವರಿಗೆ ನೆರವು ಎಂಬ ಪದವೇ ಮರೆತು ಹೋಗುತ್ತದೆ.

 ಹೌದು ತೀರ್ಥಹಳ್ಳಿ ಮಾಳೂರು ಆಗುಂಬೆ ಪೊಲೀಸ್ ಠಾಣೆಗಳು ಬಹುಚರ್ಚೆಗೆ ಗ್ರಾಸವಾಗಿದೆ. ಯಾವುದೇ ವಿವಾದ ಗಲಾಟೆಗಳಾದಾಗ ಈ ಠಾಣೆಗಳಲ್ಲಿ ಒಂದು ಪಕ್ಷದ ಪರವಾಗಿ ಪೊಲೀಸರು ಕೆಲಸ ಮಾಡುತ್ತಾರೆ ಎಂಬ ಆರೋಪವಿದೆ. ಇದಕ್ಕೆ ಸಾಕ್ಷಿ ಎಂಬಂತೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಠಾಣೆ ಎದುರು ಅಹೋರಾತ್ರಿ ಪ್ರತಿಭಟಿಸಿದ ಘಟನೆಗಳೇ ಸಾಕ್ಷಿಯಾಗಿದೆ. ಬಿಜೆಪಿ ವರ್ಸಸ್ ಕಾಂಗ್ರೇಸ್ ಸ್ಪರ್ಧೆಯಲ್ಲಿ ಪೊಲೀಸರು ಅಂಪೈರ್ ಗಳಾಗಿ ತೀರ್ಪು ನೀಡುತ್ತಿರುವುದು ಬಿಜೆಪಿ ಪರ  ಎಂಬುದು ನಿರ್ವಿವಾದವಾದಂತಿದೆ.

.ಗೃಹ ಸಚಿವರ ತವರು ಕ್ಷೇತ್ರ ಎಂದ ಮೇಲೆ ಪೊಲೀಸರ ಮೇಲೆ ತೂಗುಗತ್ತಿ ತೂಗುತ್ತಿರುತ್ತದೆ ಎಂಬುದು ವಾಸ್ತವದ ಕಟುಸತ್ಯ. ಎಲ್ಲ ವಿಷಯಗಳಿಗೂ ಗೃಹ ಸಚಿವರು ಮೂಗು ತೂರಿಸುವುದಿಲ್ಲ ನಿಜ. ಆದ್ರೆ ಅವರ ಸುತ್ತಮುತ್ತಲಿನ ವ್ಯವಸ್ಥೆ ಪೊಲೀಸ್ ಇಲಾಖೆಯನ್ನು ಆಪೋಷಣೆ ತೆಗೆದುಕೊಂಡಂತೆ ಕಾಣುತ್ತಿದೆ. ಯಾವುದೇ ಎಫ್.ಐ.ಆರ್ ಗಳು ಹಾಕಬೇಕೆಂದ್ರೂ,,ಪೊಲೀಸರು ಪೇಚಿಗೆ ಸಿಲುಕವಂತ ಪರಿಸ್ಥಿತಿ ಎದುರಾಗಿದೆ.

 ಮೊನ್ನೆ ತೀರ್ಥಹಳ್ಳಿ ಬಾರ್ ಒಂದರಲ್ಲಿ ನಡೆದ ಕಾಂಗ್ರೇಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವಿನ ಗಲಾಟೆಯಲ್ಲಿ ಪೆಟ್ಟು ತಿಂದವನ ಘಟನೆಗೆ ಕುರಿತಂತೆ ರಾತ್ರಿ ಎಪ್.,ಐ.ಆರ್ ದಾಖಲಾಗುತ್ತೆ. ಹೊಡೆದವರು ಮಾರನೇ ದಿನ ಬೆಳಿಗ್ಗೆ 10 ಗಂಟೆಗೆ ನಂತ್ರ ಆಸ್ಪತ್ರೆಗೆ ದಾಖಲಾಗಿ ಕೇಸು ದಾಖಲಿಸುತ್ತಾರೆ. ಇದರರ್ಷ..ಎರಡು ಕಡೆ ಕೇಸ್ ಮಾಡೋದು. ನಂತರ ರಾಜೀ ಸಂಧಾನ ಮಾಡುವುದೇ ಆಗಿದೆ. ಮೊದಲು ಹೊಡೆಯುವುದು, ನಂತ್ರ ರಾಜಿಸಂಧಾನ ಮಾಡುವುದಕ್ಕೆ ಪೊಲೀಸ್ ಎಫ್.ಐ.ಆರ್ ಗಳೇ ಆಸ್ತ್ರವಾಗುತ್ತಿದೆ. ತೀರ್ಥಹಳ್ಳಿಯ ದ್ವೇಷದ ರಾಜಕೀಯಕ್ಕೆ ಎದುರಾಳಿಗಳನ್ನು ಕಾನೂನಿನಡಿ  ಮಗ್ಗಲು ಮುರಿಯಲು ಪೊಲೀಸರನ್ನೇ ಬಳಸಿಕೊಳ್ಳುತ್ತಿರುವುದು  ದುರಂತದ ಸಂಗತಿ.