ಅಡಿಕೆ ತೋಟದಲ್ಲಿ ಔಷಧಿ ಸಿಂಪಡಿಸುವಾಗ ತಲೆ ಮೇಲೆ ಬಿದ್ದ ಹಲಸಿನ ಕಾಯಿ | ಹಿರಿಯ ನಾಗರಿಕ ಸಾವು

Jackfruit falls on head while spraying medicine in arecanut garden | Death of senior citizen

ಅಡಿಕೆ ತೋಟದಲ್ಲಿ ಔಷಧಿ ಸಿಂಪಡಿಸುವಾಗ ತಲೆ ಮೇಲೆ ಬಿದ್ದ ಹಲಸಿನ ಕಾಯಿ | ಹಿರಿಯ ನಾಗರಿಕ ಸಾವು
Jackfruit falls

SHIVAMOGGA | MALENADUTODAY NEWS | Jun 26, 2024  ಮಲೆನಾಡು ಟುಡೆ  

ತಲೆ ಮೇಲೆ ತೆಂಗಿನ ಕಾಯಿ ಬಿದ್ದು ಸಾವನ್ನಪ್ಪುವ ಘಟನೆಗಳನ್ನು ಓದಿದ್ದೀರಿ. ಇದಕ್ಕೆ ವ್ಯತಿರಿಕ್ತವಾಗಿ ಹಲಸಿನ ಕಾಯಿ ತಲೆ ಮೇಲೆ ಬಿದ್ದು ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಬಗ್ಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವರದದಿಯಾಗಿದೆ. ಮೃತರು ಕಾಶ್ಮೀರ್ ಮಿನೇಜಸ್ (80) ಎಂದು ಹೇಲಲಾಗಿದೆ. 

 

ವಿಟ್ಲ ಕಸಬಾ ಗ್ರಾಮದ ದಾಸರಬೆಟ್ಟಿನಲ್ಲಿ ಇಲ್ಲಿನ ನಿವಾಸಿ ಮಿನೇಜಸ್ ರವರು ಅಡಿಕೆ ತೋಟದಲ್ಲಿ ಔಷಧಿ ಸಿಂಪಡಣೆ ಮಾಡುತ್ತಿದ್ದರು. ಈ ವೇಳೆ ಹಲಸಿನ ಮರದಿಂದ ಹಲಸಿನ ಕಾಯಿ ಬಿದ್ದಿದೆ. ಅದು  ಮಿನೇಜಸ್‌ರವರ ತಲೆಯ ಮೇಲೆ ಬಿದ್ದಿದೆ. ತಕ್ಷಣವೇ ಅಸ್ವಸ್ಥರಾದ ಅವರ ಮೂಗಿನಿಂದ ರಕ್ತ ಬರಲಾರಂಭಿಸಿದೆ. ತಕ್ಷಣ ಅವರನ್ನು ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ಯಲಾಯ್ತಾದರೂ ಅಷ್ಟರಲ್ಲಿ ಅವರು ಸಾವನ್ನಪ್ಪಿದ್ದಾರೆ.