ಮೈಸೂರು ದಸರಾ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುತ್ತಾ ಸಕ್ರೆಬೈಲ್ ಆನೆ ಬಿಡಾರದ ಆನೆ? ಏನಿದು ವಿಶೇಷ ಸುದ್ದಿ?

Sakrebail elephant camp elephant participating in Mysuru Dasara Jumboo Savari? What's the special news? ಮೈಸೂರು ದಸರಾ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುತ್ತಾ ಸಕ್ರೆಬೈಲ್ ಆನೆ ಬಿಡಾರದ ಆನೆ? ಏನಿದು ವಿಶೇಷ ಸುದ್ದಿ?

ಮೈಸೂರು ದಸರಾ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುತ್ತಾ  ಸಕ್ರೆಬೈಲ್ ಆನೆ ಬಿಡಾರದ ಆನೆ?  ಏನಿದು ವಿಶೇಷ ಸುದ್ದಿ?

KARNATAKA NEWS/ ONLINE / Malenadu today/ Aug 8, 2023 SHIVAMOGGA NEWS

ಮೈಸೂರು ದಸರಾದಲ್ಲಿ ಈ ಸಲ ಶಿವಮೊಗ್ಗದ ಸಕ್ರೆಬೈಲ್ ಆನೆ ಬಿಡಾರ (Sakrebyle Elephant Camp) ಆನೆಗಳು ಪಾಲ್ಗೊಳ್ಳುತ್ತವಾ? ಹೀಗೊಂದು ಚರ್ಚೆ ನಡೆಯುತ್ತಿದೆ. ಅಲ್ಲದೆ ಈ ಸಂಬಂಧ ಜಂಬೂಸವಾರಿಗೆ ಬೇಕಿರುವ ಆನೆಗಳ ಆಯ್ಕೆ ಸಮಿತಿ ಶಿವಮೊಗ್ಗಕ್ಕೂ ಭೇಟಿಕೊಟ್ಟು ಸಕ್ರೆಬೈಲ್​ ಬಿಡಾರದಲ್ಲಿ ಸಮಾಲೋಚನೆ ನಡೆಸಿ ವಾಪಸ್ ಆಗಿದೆ. ನಿನ್ನೆ ಸಕ್ರೆಬೈಲು ಆನೆ ಬಿಡಾರಕ್ಕೆ  ಡಿಸಿಎಫ್ ಪ್ರಸನ್ನಕೃಷ್ಣ ಪಟಗಾರ್,  ಮೈಸೂರಿನ ವನ್ಯಜೀವಿ ವೈದ್ಯಾಧಿಕಾರಿ ಡಾ.ಮುಜೀಬ್ ನೇತೃತ್ವದ ತಂಡ ಭೇಟಿಕೊಟ್ಟಿದೆ. ಅಲ್ಲದೆ ಆನೆಗಳ ಬಗ್ಗೆ ಸಮಗ್ರ ಮಾಹಿತಿಯನ್ನು ವೈದ್ಯರ ತಂಡ ಪಡೆದಿದೆ. 

ಸಾಗರನ ಮೇಲೆ ಕಣ್ಣು!

ದಸರಾ ಜಂಬೂಸವಾರಿ ಕಾರ್ಯಕ್ರಮಕ್ಕಾಗಿ ಸುಮಾರು 20 ಕ್ಕೂ ಹೆಚ್ಚು ಆನೆಗಳನ್ನ ಆಯ್ಕೆ ಮಾಡಿ ಮೈಸೂರಿಗೆ ಕರೆತರಲಾಗುತ್ತದೆ. ಆ ಪೈಕಿ 14 ಆನೆಗಳು ದಸರಾದಲ್ಲಿ ಪಾಲ್ಗೊಳ್ಳುತ್ತವೆ. ಇಷ್ಟು ದಿನ ದುಬಾರೆ, ಮತ್ತಿಗೋಡು, ರಾಮಾಪುರದ ಆನೆಗಳು ದಸರಾದಲ್ಲಿ ಪಾಲ್ಗೊಂಡಿದ್ದವು. ಈ ಸಲ ಶಿವಮೊಗ್ಗ ಸಕ್ರೆಬೈಲ್ ಬಿಡಾರದ ಆನೆಗಳನ್ನ ದಸರಾ ತಂಡ ತಮ್ಮ ಮನಸ್ಸಿನಲ್ಲಿ ಇಟ್ಟುಕೊಂಡಿದೆ. ಅದೇ ಕಾರಣಕ್ಕೆ ನಿನ್ನೆ ಭೇಟಿಕೊಟ್ಟು ಆನೆಗಳ ಬಗ್ಗೆ ಮಾಹಿತಿ ಪಡೆದಿದೆ. ಮುಖ್ಯವಾಗಿ ಶಿವಮೊಗ್ಗ ದಸರಾದಲ್ಲಿಯು ಪಾಲ್ಗೊಳ್ಳುತ್ತಿದ್ದ ಸಾಗರ್ ಆನೆಯ ಬಗ್ಗೆ ವಿಶೇಷ ತಂಡ ಆಸಕ್ತಿ ವಹಿಸಿದೆ ಎನ್ನಲಾಗುತ್ತಿದೆ. ಅಲ್ಲದೆ ಸಕ್ರೆಬೈಲ್​ನ ಕ್ಯಾಪ್ಟನ್​ಗಳಾದ ಆಲೆ, ಬಾಲಣ್ಣ ಆನೆಗಳು ಲಿಸ್ಟ್​ನಲ್ಲಿವೆ ಎನ್ನಲಾಗಿವೆ. ಅಂತಿಮವಾಗಿ ಮೈಸೂರು ದಸರಾ ಜಂಬು ಸವಾರಿಯಲ್ಲಿ ಪಾಲ್ಗೊಳ್ಳುವ ಭಾಗ್ಯ ಯಾವ ಆನೆಗೆ ಲಭ್ಯವಾಗುತ್ತದೆ ಎಂಬುದು ಇನ್ನಷ್ಟೆ ಗೊತ್ತಾಗಬೇಕಿದೆ.  


ಕಾರಲ್ಲಿ 1 ಲಕ್ಷ ದುಡ್ಡಿಟ್ಟು ಬ್ಯಾಂಕ್​ಗೆ ಹೋಗಿ ಬರುವಷ್ಟರಲ್ಲಿ ಕಾದಿತ್ತು ಶಾಕ್ ! ತೀರ್ಥಹಳ್ಳಿ ಪೇಟೆಯಲ್ಲಿ ಹಾಡಹಗಲೇ ನಡೆದಿದ್ದೇನು?

ಶಿವಮೊಗ್ಗ ಜಿಲ್ಲೆ  ತೀರ್ಥಹಳ್ಳಿ   ಪಟ್ಟಣದ ಗಾಂಧಿ ಚೌಕದಲ್ಲಿರುವ ಮಾರಿಕಾಂಬಾ ದೇವಸ್ಥಾನದ ಬಳಿ ಕಾರಿನಲ್ಲಿ ಇಟ್ಟಿದ್ದ ಒಂದು ಲಕ್ಷ ರೂಪಾಯಿ ಕಳ್ಳತನವಾಗಿರುವ ಘಟನೆ ನಿನ್ನೆ ನಡೆದಿದೆ.  ಹಗಲು ಹೊತ್ತಿನಲ್ಲಿಯೇ ಈ ಘಟನೆ ನಡೆದಿರುವುದು ವ್ಯಾಪಾರಸ್ಥರಲ್ಲಿ ಇನ್ನಷ್ಟು ಆತಂಕ ಮೂಡಿಸಿದೆ. 

ನಡೆದಿದ್ದೇನು?

ಮುಂಡಿಗೆಮನೆಯ ದೇವರಾಜ್ ಎಂಬುವರು ಕರ್ನಾಟಕ ಬ್ಯಾಂಕ್ ನಲ್ಲಿ 1 ಲಕ್ಷ ರೂ ಹಣವನ್ನು ಡ್ರಾ ಮಾಡಿದ್ದರು. ಅದನ್ನ ಸೇಪ್ಟಿಗೆ ಅಂತಾ ಬ್ಯಾಂಕ್​ನಿಂದ ಹೊರಬಂದು ತಮ್ಮ  ಕಾರಿನಲ್ಲಿ ಇಟ್ಟಿದ್ದಾರೆ. ನಂತರ ಪುನಃ ಬ್ಯಾಂಕ್ ಗೆ ಹೋಗಿ ಪಾಸ್ ಬುಕ್ ಎಂಟ್ರಿ ಮಾಡಿಸಿದ್ದಾರೆ ಅಷ್ಟೆ.  ವಾಪಾಸ್ ಬರುವುದರೊಳಗೆ ದುಷ್ಕರ್ಮಿಗಳು ಕಾರಿನ ಲಾಕ್ ತೆಗೆದು ಹಣವನ್ನು ಕಳ್ಳರು ದೋಚಿ ಎಸ್ಕೇಪ್ ಆಗಿದ್ದಾರೆ. ಘಟನೆ ಸಂಬಂಧ ತೀರ್ಥಹಳ್ಳಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಸುತ್ತಮುತ್ತಲಿನ ಸಿಸಿ ಕ್ಯಾಮರಾಗಳನ್ನ ಪರಿಶೀಲನೆ ನಡೆಸಿದ್ದಾರೆ. ಇದುವರೆಗೂ ಆರೋಪಿಯ ಸುಳಿವು ಪತ್ತೆಯಾಗಿಲ್ಲ.  

ಇನ್ನಷ್ಟು ಸುದ್ದಿಗಳು 



 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು