ಸಾಗರ ಕಾಲೇಜಿನ ಆಹಾರ ಮೇಳದಲ್ಲಿ VEG NON VEG ಚರ್ಚೆ....ಚರ್ಚೆ...ಚರ್ಚೆ! ಸೋಶಿಯಲ್​ ಮೀಡಿಯಾ ತಲುಪಿದ ಉಪನ್ಯಾಸಕರು-ವಿದ್ಯಾರ್ಥಿನಿಯರ ಸಂವಾದದ ವಿಡಿಯೋ

A video has gone viral after non-veg food was not allowed at a food mela held at a college in Sagar taluka. ಸಾಗರ ತಾಲ್ಲೂಕಿನ ಕಾಲೇಜಿನಲ್ಲಿ ನಡೆದ ಆಹಾರದ ಮೇಳದಲ್ಲಿ ನಾನ್​ವೆಜ್​ ಪುಡ್​ಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ನಡೆದ ಚರ್ಚೆಯ ವಿಡಿಯೋವೊಂದು ವೈರಲ್ ಆಗಿದೆ.

ಸಾಗರ ಕಾಲೇಜಿನ ಆಹಾರ ಮೇಳದಲ್ಲಿ VEG NON VEG   ಚರ್ಚೆ....ಚರ್ಚೆ...ಚರ್ಚೆ! ಸೋಶಿಯಲ್​ ಮೀಡಿಯಾ ತಲುಪಿದ  ಉಪನ್ಯಾಸಕರು-ವಿದ್ಯಾರ್ಥಿನಿಯರ ಸಂವಾದದ ವಿಡಿಯೋ

KARNATAKA NEWS/ ONLINE / Malenadu today/ Aug 8, 2023 SHIVAMOGGA NEWS

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಪ್ರತಿಷ್ಟಿತ ಕಾಲೇಜಿನಲ್ಲಿ ನಡೆದ ಆಹಾರ ಮೇಳದ ವಿಚಾರ ಇದೀಗ ಮಲೆನಾಡಿನಲ್ಲಿ ಚರ್ಚೆಗೆ ಕಾರಣವಾಗಿದೆ. ಆಹಾರ ಮೇಳದಲ್ಲಿ ನಾನ್​ವೆಜ್​ ಅಡುಗೆಯನ್ನ ಆಹಾರ ಮೇಳಕ್ಕೆ ತಂದಿದ್ದ ವಿಚಾರದಲ್ಲಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿನಿಯರ ನಡುವೆ ಜೋರು ಧ್ವನಿಯಲ್ಲಿ ಮಾತುಕತೆ ನಡೆದಿದೆ. 

ಏನಿದು ಘಟನೆ?

ಸಾಗರ ತಾಲ್ಲೂಕಿನ ಇಂದಿರಾಗಾಂಧಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಆಹಾರ ಮೇಳ ಎರ್ಪಡಿಸಲಾಗಿತ್ತು. ಈ ಮೇಳದಲ್ಲಿ ಸಸ್ಯಹಾರಿ ಆಹಾರಕ್ಕೆ ಮಾತ್ರವೇ ಅವಕಾಶ ಕಲ್ಪಿಸಲಾಗಿತ್ತು. ಈ ಸಂಬಂಧ ಮೊದಲೇ ಹೇಳಲಾಗಿತ್ತು ಎಂದು ಉಪನ್ಯಾಸಕರು ಹೇಳಿದ್ದಾರೆ. ಈ ಮಧ್ಯೆ ಆಹಾರ ಮೇಳದಲ್ಲಿ ಪಾಲ್ಗೊಂಡ ಕೆಲವು ವಿದ್ಯಾರ್ಥಿನಿಯರು ಮಾಂಸಾಹಾರವನ್ನು ತಯಾರು ಮಾಡಿಕೊಂಡು ತಂದಿದ್ದಾರೆ. ಇದಕ್ಕೆ ಕೆಲವು ಉಪನ್ಯಾಸಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವೇಳೆ ಉಪನ್ಯಾಸಕರು ಹಾಗೂ ವಿದ್ಯಾರ್ಥಿನಿಯರ ನಡುವೆ ಮಾತುಕತೆ ಆಗಿದೆ. 

ಇದೆ ವಿಚಾರದಲ್ಲಿ ಹಲವು ಹೊತ್ತು ಚರ್ಚೆ ನಡೆದು ಉಪನ್ಯಾಸಕರು ಹಾಗೂ ವಿದ್ಯಾರ್ಥಿನಿಯರ ನಡುವೆ ವಾಗ್ವಾದವೂ ಆಗಿದೆ. ಆನಂತರ ವಿದ್ಯಾರ್ಥಿನಿಯರಿಗೆ ಮಾಂಸಾಹಾರವನ್ನು ಆಹಾರ ಮೇಳದಲ್ಲಿ ಇಡಲು ಅವಕಾಶ ಮಾಡಿಕೊಡಲಾಯ್ತು ಎಂಬ ಮಾಹಿತಿ ಇದೆ. ಈಓ ನಡುವೆ ಇಡೀ ಪ್ರಹಸನವನ್ನು ಅಲ್ಲಿಯೇ ಇದ್ದವರೊಬ್ಬರು ವಿಡಿಯೋ ರೆಕಾರ್ಡ್​ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದು ಪರ ವಿರೋಧ ಚರ್ಚೆಗಳು ಸಹ ನಡೆಯುತ್ತಿವೆ. 

ಕಾರಲ್ಲಿ 1 ಲಕ್ಷ ದುಡ್ಡಿಟ್ಟು ಬ್ಯಾಂಕ್​ಗೆ ಹೋಗಿ ಬರುವಷ್ಟರಲ್ಲಿ ಕಾದಿತ್ತು ಶಾಕ್ ! ತೀರ್ಥಹಳ್ಳಿ ಪೇಟೆಯಲ್ಲಿ ಹಾಡಹಗಲೇ ನಡೆದಿದ್ದೇನು?

ಶಿವಮೊಗ್ಗ ಜಿಲ್ಲೆ  ತೀರ್ಥಹಳ್ಳಿ   ಪಟ್ಟಣದ ಗಾಂಧಿ ಚೌಕದಲ್ಲಿರುವ ಮಾರಿಕಾಂಬಾ ದೇವಸ್ಥಾನದ ಬಳಿ ಕಾರಿನಲ್ಲಿ ಇಟ್ಟಿದ್ದ ಒಂದು ಲಕ್ಷ ರೂಪಾಯಿ ಕಳ್ಳತನವಾಗಿರುವ ಘಟನೆ ನಿನ್ನೆ ನಡೆದಿದೆ.  ಹಗಲು ಹೊತ್ತಿನಲ್ಲಿಯೇ ಈ ಘಟನೆ ನಡೆದಿರುವುದು ವ್ಯಾಪಾರಸ್ಥರಲ್ಲಿ ಇನ್ನಷ್ಟು ಆತಂಕ ಮೂಡಿಸಿದೆ. 

ನಡೆದಿದ್ದೇನು?

ಮುಂಡಿಗೆಮನೆಯ ದೇವರಾಜ್ ಎಂಬುವರು ಕರ್ನಾಟಕ ಬ್ಯಾಂಕ್ ನಲ್ಲಿ 1 ಲಕ್ಷ ರೂ ಹಣವನ್ನು ಡ್ರಾ ಮಾಡಿದ್ದರು. ಅದನ್ನ ಸೇಪ್ಟಿಗೆ ಅಂತಾ ಬ್ಯಾಂಕ್​ನಿಂದ ಹೊರಬಂದು ತಮ್ಮ  ಕಾರಿನಲ್ಲಿ ಇಟ್ಟಿದ್ದಾರೆ. ನಂತರ ಪುನಃ ಬ್ಯಾಂಕ್ ಗೆ ಹೋಗಿ ಪಾಸ್ ಬುಕ್ ಎಂಟ್ರಿ ಮಾಡಿಸಿದ್ದಾರೆ ಅಷ್ಟೆ.  ವಾಪಾಸ್ ಬರುವುದರೊಳಗೆ ದುಷ್ಕರ್ಮಿಗಳು ಕಾರಿನ ಲಾಕ್ ತೆಗೆದು ಹಣವನ್ನು ಕಳ್ಳರು ದೋಚಿ ಎಸ್ಕೇಪ್ ಆಗಿದ್ದಾರೆ. ಘಟನೆ ಸಂಬಂಧ ತೀರ್ಥಹಳ್ಳಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಸುತ್ತಮುತ್ತಲಿನ ಸಿಸಿ ಕ್ಯಾಮರಾಗಳನ್ನ ಪರಿಶೀಲನೆ ನಡೆಸಿದ್ದಾರೆ. ಇದುವರೆಗೂ ಆರೋಪಿಯ ಸುಳಿವು ಪತ್ತೆಯಾಗಿಲ್ಲ.  

ಇನ್ನಷ್ಟು ಸುದ್ದಿಗಳು 



 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು