ಮಲೆನಾಡ ಪತ್ರಕರ್ತರ ಸಂಭ್ರಮ ಹಾಗೂ ಸಡಗರ!

A unique programme by malnadjournalists

ಮಲೆನಾಡ ಪತ್ರಕರ್ತರ ಸಂಭ್ರಮ ಹಾಗೂ ಸಡಗರ!
ಮಲೆನಾಡ ಪತ್ರಕರ್ತರ ಸಂಭ್ರಮ ಹಾಗೂ ಸಡಗರ!

ಮಲೆನಾಡು ಪತ್ರಿಕೋದ್ಯಮದಲ್ಲಿ ತನ್ನದೆ ವಿಶಿಷ್ಟ ಹೆಜ್ಜೆಗಳನ್ನು ಮೂಡಿಸುತ್ತಾ ಬಂದಿದೆ. ಹೊಸತನದ ಜೊತೆಯಲ್ಲಿ ನೆಲದ ಗುಣದ ವಿಶಿಷ್ಟತೆಯನ್ನು ಬರಹಗಳ ಮೂಲ ಪ್ರಚುರ ಪಡಿಸ್ತಿರುವ ಈ ಕ್ಷೇತ್ರದಲ್ಲಿ ಮಲೆನಾಡ ರಹಸ್ಯ ಹಾಗೂ ಹಾಗೂ ಸುದ್ದಿಮನೆ ಡಿಜಿಟಲ್ ಮೀಡಿಯಾ  ಸಾಗರದಲ್ಲಿ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದೆ. ಈ ಸಂಭ್ರಮದ ವೇದಿಕೆಯಲ್ಲಿ ಮಲೆನಾಡ ನೃತ್ಯ ವೈಭವ ಮಹಾಸಂಗಮ ಮತ್ತು ಕ್ಯಾಲೆಂಡರ್ ಬಿಡುಗಡೆ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ಅತ್ಯಂತ ಯಶಸ್ವಿಯಾಗಿ ನಡೆದಿದೆ. 

ಕಾರ್ಯಕ್ರಮದ ಉದ್ಘಾಟನೆಯನ್ನು ವಡನ್ ಬೈಲು‌ ಶ್ರೀ ಪದ್ಮಾವತಿ ದೇವಸ್ಥಾನದ ಧರ್ಮಾಧಿಕಾರಿಗಳಾದ ಶ್ರೀ ವೀರರಾಜಯ್ಯ ಜೈನ್  ಅವರು ನೆರವೇರಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಫೀಕ್ ಕೊಪ್ಪ ಮತ್ತು ಜಮೀಲ್ ಸಾಗರ್ ನಿರ್ವಹಿಸಿದರೆ,  ಮುಖ್ಯ ಅತಿಥಿಗಳಾಗಿ ಸಾಗರದ ಶಾಸಕರಾದ *ಶ್ರೀ ಹರತಾಳು ಹಾಲಪ್ಪ, ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಮಾಜಿ ಕಂದಾಯ ಸಚಿವರು ಶ್ರೀ ಕಾಗೋಡು ತಿಮ್ಮಪ್ಪ, ಉದ್ಯಮಿಗಳಾದ ಸಯ್ಯದ್ ಜಹೂರ್, ಇನ್ನಿತರರು ವೇದಿಕೆಯಲ್ಲಿದ್ದರು.

*Secretary, Ministry of Civil Aviation : ಶಿವಮೊಗ್ಗ ವಿಮಾನ ನಿಲ್ದಾಣದ ವಿಚಾರದಲ್ಲಿ ಹೊಸದೊಂದು ಅಪ್​ಡೇಟ್ಸ್​​ ಇಲ್ಲಿದೆ*

ಇನ್ನೊಂದೆಡೆ ಬೆಂಗಳೂರಿನ ಸ್ಪೂರ್ತಿಧಾಮದಲ್ಲಿ ನಡೆದ ಗುರುಕುಲ ಕಲಾ ಪ್ರತಿಷ್ಠಾನದ ಎರಡನೇ ವರ್ಷದ ರಾಜ್ಯ ಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿ ರಿಪ್ಪನ್‌ಪೇಟೆಯ ಯುವ ಸಾಹಿತಿ ಪೋಸ್ಟ್ ಮ್ಯಾನ್ ಸುದ್ದಿಸಂಸ್ಥೆಯ ಸಂಪಾದಕ ರಫ಼ಿ ರಿಪ್ಪನ್‌ಪೇಟೆ ರವರಿಗೆ ರಾಜ್ಯಮಟ್ಟದ "ಗುರುಕುಲ ಕೀರ್ತಿ ಕಳಸ" ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು.

ಸಾಹಿತ್ಯ ಕ್ಷೇತ್ರದಲ್ಲಿ ರಫ಼ಿ ರಿಪ್ಪನ್‌ಪೇಟೆ ರವರ ಅಪರಿಮಿತ ಸೇವೆಯನ್ನು ಪರಿಗಣಿಸಿ ರಾಜ್ಯಮಟ್ಟದ ಪ್ರಶಸ್ತಿಯನ್ನು ವಿತರಿಸಲಾಗಿದೆ.ಸಾಹಿತ್ಯ ಕ್ಷೇತ್ರದಲ್ಲಿ ಸರಿಸುಮಾರು ಐದು ರಾಜ್ಯ ಪ್ರಶಸ್ತಿಗಳನ್ನು ಪಡೆಯುವ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮ ಛಾಫು ಮೆರೆದಿದ್ದಾರೆ. ರಫ಼ಿ ರಿಪ್ಪನ್‌ಪೇಟೆ ರವರು 2020 ರ ಪೆಬ್ರವರಿಯಲ್ಲಿ ಇವರ ಸಾಹಿತ್ಯ ಚಟುವಟಿಕೆಗಳನ್ನು ಗಮನಿಸಿ ಬಳ್ಳಾರಿ ಜಿಲ್ಲೆಯಲ್ಲಿ ಬರಹಗಾರರ ಬಳಗ "ಸಾಹಿತ್ಯ ಸಿರಿ" ಎಂಬ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.2021ರ ಮೇ ತಿಂಗಳಿನಲ್ಲಿ ಲಯನ್ಸ್ ಕ್ಲಬ್ ಬೆಂಗಳೂರು ಹಾಗೂ ಕಲಾ ಸಂಘದ ಸಂಯುಕ್ತ ಆಶ್ರಯದಲ್ಲಿ ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿ "ಗುರುಕುಲ ಶಿರೋಮಣಿ" ಎಂಬ ರಾಜ್ಯ ಪ್ರಶಸ್ತಿಯನ್ನು ಪಡೆದಿದ್ದರು

 JP Flashback : ಬಿಎಸ್​ವೈ ತೋಟದ ಮನೆಯಲ್ಲಿ ದುಡ್ಡಿದೆ ಎಂಬ ಪುಕಾರು ಹಬ್ಬಿದ್ದ ಸಂದರ್ಭದಲ್ಲಿ ಏನಾಗಿತ್ತು ಗೊತ್ತಾ? 2011 ರ ಆ ದಿನ ನಡೆದ ಘಟನೆಯ ಪ್ಲ್ಯಾಶ್​ಬ್ಯಾಕ್

Shimoga: ಮಹಿಳೆ ನೇಣಿಗೆ ಶರಣಾದ ಪ್ರಕರಣದಲ್ಲಿ ಆರೋಪಿ ಪ್ರಿಯಕರ ಬಂಧನ! ಡೆತ್​ನೋಟ್​ನಲ್ಲಿತ್ತು ಸತ್ಯ!

*Secretary, Ministry of Civil Aviation : ಶಿವಮೊಗ್ಗ ವಿಮಾನ ನಿಲ್ದಾಣದ ವಿಚಾರದಲ್ಲಿ ಹೊಸದೊಂದು ಅಪ್​ಡೇಟ್ಸ್​​ ಇಲ್ಲಿದೆ*

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com