JP Flashback : ಬಿಎಸ್​ವೈ ತೋಟದ ಮನೆಯಲ್ಲಿ ದುಡ್ಡಿದೆ ಎಂಬ ಪುಕಾರು ಹಬ್ಬಿದ್ದ ಸಂದರ್ಭದಲ್ಲಿ ಏನಾಗಿತ್ತು ಗೊತ್ತಾ? 2011 ರ ಆ ದಿನ ನಡೆದ ಘಟನೆಯ ಪ್ಲ್ಯಾಶ್​ಬ್ಯಾಕ್

JP Flashback : Do you know what happened when rumours were lot of money was found in BSY's farmhouse? A flashback of the incident that took place that day in 2011

JP Flashback :  ಬಿಎಸ್​ವೈ ತೋಟದ ಮನೆಯಲ್ಲಿ ದುಡ್ಡಿದೆ ಎಂಬ ಪುಕಾರು ಹಬ್ಬಿದ್ದ ಸಂದರ್ಭದಲ್ಲಿ ಏನಾಗಿತ್ತು ಗೊತ್ತಾ? 2011 ರ ಆ ದಿನ ನಡೆದ ಘಟನೆಯ ಪ್ಲ್ಯಾಶ್​ಬ್ಯಾಕ್

JP Flashback : ಬಿ.ಎಸ್​. ಯಡಿಯೂರಪ್ಪ, ರಾಜ್ಯ ಕಂಡ ಅಪ್ರತಿಮ ನಾಯಕ. ಇವತ್ತು ದೇಶದೆಲ್ಲೆಡೆ ಬಿಜೆಪಿಯು ಪಕ್ಷಾದರಿತ ಶಕ್ತಿಯನ್ನು ಹೊಂದಿದ್ದರು ಸಹ ರಾಜ್ಯದಲ್ಲಿ ಬಿಎಸ್​ವೈ ಕೇಂದ್ರಿಕೃತ ರಾಜಕಾರಣದಿಂದ ಕಮಲ ಪಾರ್ಟಿ ಹೊರಬರಲು ಆಗುತ್ತಿಲ್ಲ. ಅಷ್ಟರಮಟ್ಟಿಗೆ ಬಿಜೆಪಿಯ ಶಕ್ತಿಯಾಗಿರುವ ಬಿಎಸ್​ವೈ ಸಹ ಒಂದು ಸಮಯ ಕೆಟ್ಟ ಕಾಲವನ್ನು ಎದುರಿಸಿದ್ದರು. 2011 ವರ್ಷವೂ ಮಾಜಿ ಸಿಎಂರ ಬದುಕಿನಲ್ಲಿ ಅಂತಹದ್ದೊಂದು ಸಂಕಷ್ಟದ ಸಮಯ ತಂದಿಟ್ಟಿತ್ತು. 

ಆ ವರ್ಷದ ಅಕ್ಟೋಬರ್​ ತಿಂಗಳಿನಲ್ಲಿ ಬಿಎಸ್​ವೈ ಇನ್ನಿಲ್ಲದ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಅಕ್ಟೋಬರ್​ ತಿಂಗಳಿಗೆ ದಿನ ಹೊರಳುವುದಕ್ಕೂ  ಕೆಲ ದಿನಗಳ ಮೊದಲು ಶಿಕಾರಿಪುರದ ಹುಲಿಕೊಪ್ಪದಲ್ಲಿ ಘಟನೆಯೊಂದು ನಡೆದಿತ್ತು. ಆ ಸಂದರ್ಭದಲ್ಲಿ ಬಿಎಸ್​ ವೈ ರಿಗೆ ಸೇರಿದ ತೋಟದ ಮನೆಯಲ್ಲಿ ಹಣವನ್ನು ಸಾಗಿಸಲಾಗಿತ್ತಿದೆ ಎಂದು ಎದ್ದಿದ್ದ ಪುಕಾರೋಂದು ಕಾಡ್ಗಿಚ್ಚಿನಂತೆ ಹಬ್ಬಿ, ಸಾವಿರಾರು ಜನರು ತೋಟದ ಮನೆಯ ಸುತ್ತ ಜಮಾಯಿಸಿದ್ದರು. 

Shimoga: ಮಹಿಳೆ ನೇಣಿಗೆ ಶರಣಾದ ಪ್ರಕರಣದಲ್ಲಿ ಆರೋಪಿ ಪ್ರಿಯಕರ ಬಂಧನ! ಡೆತ್​ನೋಟ್​ನಲ್ಲಿತ್ತು ಸತ್ಯ!

ಹೀಗೊಂದು ಪುಕಾರು ಎದ್ದ ನಂತರ ಏನೇನೆಲ್ಲಾ ಆಯ್ತು ಎನ್ನುವುದೇ ಇವತ್ತಿನ ಫ್ಲ್ಯಾಶ್​ ಬ್ಯಾಕ್, ಶಿವಮೊಗ್ಗದ ಇತಿಹಾಸದ ಪುಟಗಳಲ್ಲಿ ನಡೆದ ಘಟನೆಗಳನ್ನು ಜನರಿಗೆ ತಿಳಿಸುವ ದೃಷ್ಟಿಯಿಂದ ಈ ವರದಿಯನ್ನು ಪ್ರಕಟಿಸುತ್ತಿದ್ದೇವೆ. ಸ್ನೇಹಿತರೇ ಅಂದು ಅಂದರೆ,  25-01-11 ರಂದು ಬಿಎಸ್​ವೈರ  ತೋಟಕ್ಕೆ ಎರಡು ಟಿಟಿ ವಾಹನಗಳು ಬಂದಿದ್ದವು. ಇದು ಬೇರೆಯದ್ದೆ ಪುಕಾರಿಗೆ ಕಾರಣವಾಯ್ತು, ಅಸಲಿಗೆ ಅಂತಹದ್ದೊಂದು ವದಂತಿಯು ಹಬ್ಬುತ್ತದೆ ಎಂದು ಯಾರು ಊಹಿಸಿರಲಿಲ್ಲ. ಆದರೆ ಕೇವಲ ಬಾಯಿ ಮಾತಿನಲ್ಲಿ ದುಡ್ಡು..ದುಡ್ಡು. ದುಡ್ಡು ಎಂಬ ಸುದ್ದಿ ನಾನಾ ರೀತಿಯಲ್ಲಿ ಪಸರಾಗಿತ್ತು. ಒಬ್ಬೊಬ್ಬರು ಒಂದೊಂದು ಕಥೆ ಕಟ್ಟಿ, ಅವರು ನೋಡಿದರಂತೆ, ಇವರಿಗೆ ಸಿಕ್ಕಿತ್ತಂತೆ, ಹೀಗಾಯ್ತಂತೆ, ಹಂಗಂತೆ ಅಯ್ಯೋ ಹೌದಾ ಅಂತೆಲ್ಲಾ ಮಾತಾಡ್ತಾ ಬಿಎಸ್​ವೈರ ತೋಟದ ಮನೆಯತ್ತ ಬರುವ ಪ್ರಯತ್ನ ಮಾಡಿದ್ರು. ಈಗೆಲ್ಲಾ ಇದ್ದಕ್ಕಿದ್ದಂತೆ ವೈರಲ್​ ಆಗುವ ಹಾಗೆ, ಆಗ ಮೊಬೈಲ್​ಗಳ ಸಹವಾಸ ಅಷ್ಟಾಗಿ ಇರದಿದ್ದರೂ ಇಡಿ ಶಿವಮೊಗ್ಗದ ತುಂಬೆಲ್ಲಾ ಹಿಂಗತೆ ಕಣ್ರಿ ಅನ್ನುವ ಸುದ್ದಿ ಹಬ್ಬಿ ರಾತೋರಾತ್ರಿ ಜನ ಶಿಕಾರಿಪುರಕ್ಕೆ ಹೊರಟಿದ್ದರು.

ಸುತ್ತ ಗನ್​ಮ್ಯಾನ್​ಗಳಿದ್ದ ಆ ತೋಟದ ಮನೆಯಿಂದ ಹಣ ಸಾಗಿಸಲಾಗುತ್ತಿತ್ತು ಎಂಬ ಪುಕಾರು ಹಬ್ಬಿದ್ದರಿಂದಲೇ ಜನರು ಅಲ್ಲಿಗೆ ದೌಡಾಯಿಸಿದ್ದರು. ಆದರೆ ಅಸಲಿಗೆ ಅಲ್ಲೇನು ನಡೆದೇ ಇರಲಿಲ್ಲ. ಹಾಗಿದ್ದರೂ ವದಂತಿಯನ್ನು ಜನರು ಅಲ್ಲಗಳೆಯದೇ ಮತ್ತಷ್ಟು ಜನರಿಗೆ ಹಬ್ಬಿಸುತ್ತಿದ್ರು.ಈ ವೇಳೆ ಪರಿಸ್ಥಿತಿಯನ್ನ ತಹಬದಿಗೆ ತಂದಿದ್ದು ಅಂದಿನ ಡಿವೈಎಸ್​ಪಿ ಶಾಂತರಾಜು. ಜನರಿಗೆ ತಲುಪಿದ್ದ ಹಾಗೆ ಪೊಲಿಸರಿಗೂ ವದಂತಿಯ ಸುಳಿವು ಸಿಕ್ಕಿತ್ತು.

ಹಾಗಾಗಿ ಮೊದಲು ಎಚ್ಚರಗೊಂಡು, ಹೆಚ್ಚುವರಿ ಟೀಂನೊಂದಿಗೆ ಅಂದಿನ ಡಿವೈಎಸ್​ಪಿ ಶಾಂತರಾಜು ಸ್ಥಳಕ್ಕೆ ಬಂದರು, ಜನರನ್ನ ಮೊದಲು ಮಾತಿನಿಂದ ಸುಧಾರಿಸಲು ನೋಡಿದರು, ಆದರೆ ಪರಿಸ್ಥಿತಿ ಭಿನ್ನವಾಗಿ ಕಂಡಿತ್ತು.  ಶಾಂತರಾಜುರವರು ಹೆಸರಿಗೆ ತಕ್ಕಂತೆ ಶಾಂತ ಸ್ವಭಾವದವರು. ಪರಿಸ್ಥಿತಿ ಅವರ ಶಾಂತ ಸ್ವಭಾವಕ್ಕೆ ಬೆಲೆಕೊಡಲಿಲ್ಲ. ಹೀಗಾಗಿ ಲಘು ಲಾಠಿ ಪ್ರಹಾರ ಅಸ್ತು ಎಂದರು. ಯಾವಾಗ ಪೊಲೀಸ್ ಲಾಠಿಗಳು ಸದ್ದು ಮಾಡಲು ಆರಂಭಿಸಿದವೊ ವದಂತಿಯನ್ನ ನಂಬಿ ಬಂದವರು ಕಂಡವರ ಹೊಲಗದ್ದೆಗಳನ್ನು ತುಳಿದು ಮನೆಗಳತ್ತ ದೌಡಾಯಿಸಿದ್ರು. ಮಧ್ಯರಾತ್ರಿ 12 ಗಂಟೆಯ ಹೊತ್ತಿಗೆ ಪರಿಸ್ಥಿತಿ ಶಾಂತವಾಗಿತ್ತು ಮತ್ತು ಶಾಂತರಾಜುರವರ ನಿಯಂತ್ರಣದಲ್ಲಿತ್ತು.

ಈ ಮಧ್ಯೆ ಲಾಠಿ ಪ್ರಹಾರದಲ್ಲಿ ಸಣ್ಣಪುಟ್ಟ ಗಾಯಗಳಾದವು,ಆಗಿನ ದುಬಾರಿ ಮೊಬೈಲ್ಗ​ಳು ದ್ವಂಸಗೊಂಡವು. ಗದ್ದೆಗಳು ಹಾಳಾದವು, ತೋಟಗಳು ಜನರ ಕಾಲ್ತುಳಿತಕ್ಕೆ ಸಿಕ್ಕಿದ್ವು. ಅಂತಿಮವಾಗಿ ಸನ್ನಿವೇಶವನ್ನು ಕಂಟ್ರೊಲ್​ಗೆ ತೆಗೆದುಕೊಂಡ ಶಾಂತರಾಜರವರು, ಅಳಿದುಳಿದ ಜನರನ್ನು ಸಹ ಅಲ್ಲಿಂದ ಜಾಗಖಾಲಿ ಮಾಡಿಸಿದ್ರು. ವದಂತಿಗು ತೆರೆಯೆಳೆದಿದ್ರು. ಆದರೆ, ಅಂತಿಮವಾಗಿ ಇವತ್ತಿಗೂ ನಿಗೂಢವಾಗಿ ಉಳಿದ ವಿಚಾರ ಏನು ಗೊತ್ತಾ? ಇಂತಹದ್ದೊಂದು ಪುಕಾರು ಹಬ್ಬಿಸಿದವರು ಯಾರು ಅನ್ನೋದು?

Shimoga: ಮಹಿಳೆ ನೇಣಿಗೆ ಶರಣಾದ ಪ್ರಕರಣದಲ್ಲಿ ಆರೋಪಿ ಪ್ರಿಯಕರ ಬಂಧನ! ಡೆತ್​ನೋಟ್​ನಲ್ಲಿತ್ತು ಸತ್ಯ!

*Secretary, Ministry of Civil Aviation : ಶಿವಮೊಗ್ಗ ವಿಮಾನ ನಿಲ್ದಾಣದ ವಿಚಾರದಲ್ಲಿ ಹೊಸದೊಂದು ಅಪ್​ಡೇಟ್ಸ್​​ ಇಲ್ಲಿದೆ*

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com