ದರ್ಶನ್​, ಸುದೀಪ್, ಅಪ್ಪು ಜೊತೆ ನಟಿಸಿದ್ದ ನಟಿ ಮೇಲೆ ಕಾಸ್ಪಾಡಿಯಲ್ಲಿ ಹಲ್ಲೆ!? ಏನಿದು ಪ್ರಕರಣ!? ಯಾರಿದು ನಟಿ? ಕಾರಣವೇನು?

Malenadu Today

KARNATAKA NEWS/ ONLINE / Malenadu today/ Jul 4, 2023 SHIVAMOGGA NEWS 

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಕಾಸ್ಪಾಡಿಯಲ್ಲಿ ಭೂಮಿ ವ್ಯಾಜ್ಯದ ಸಂಬಂಧ ಚಲನಚಿತ್ರಗಳಲ್ಲಿ ಸಹನಟಿಯಾಗಿ ನಟಿಸ್ತಿರುವ ಅನಿತಾಗೌಡ ಎಂಬವರ ಮೇಲೆ ಹಲ್ಲೆಯಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಆನಂದಪುರಂ ಪೊಲೀಸ್​ ಸ್ಟೇಷನ್​ನಲ್ಲಿ ದೂರು ದಾಖಲಾಗಿ ಎಫ್ಐಆರ್ ಸಹ ಆಗಿದ್ದು ಅನಿತಾ ಗೌಡ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನ ಸಹ ಪಡೆದಿದ್ಧಾರೆ. 

Malenadu Today

ಏನಿದು ಪ್ರಕರಣ?

ಅನಿತಾ ಗೌಡ ತಂದೆ ಶ್ರೀನಿವಾಸ ಗೌಡ ಮತ್ತು ಮೋಹನರವರ ನಡುವೆ  ಕಾಸ್ಪಾಡಿಯ ಸರ್ವೇ ನಂ 43 ರ ಜಮೀನು ವಿಚಾರವಾಗಿ ವಿವಾದವಿದೆ. ಇದೇ ಕಾರಣಕ್ಕೆ  ದಿನಾಂಕ 30-06-2023 ರಂದು ಸಂಜೆ 7.30 ರ ಸಮಯದಲ್ಲಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಮೋಹನ್​ ಹಾಗೂ ಅವರ ತಾಯಿ ಸ್ಥಳಕ್ಕೆ ಬಂದು ಬೈದು ಹಲ್ಲೆ ಮಾಡಿದ್ದಾರೆ ಎಂಬುದು ಆರೋಪ.  ಕೋಲನಿಂದ  ತಲೆಗೆ ಹೋಡೆದು ರಕ್ತ ಗಾಯ ಪಡಿಸಿದ್ದಾರೆ ಎಂದು ಅನಿತಾ ದೂರು ನೀಡಿದ್ಧಾರೆ. ಈ ಸಂಬಂಧ  IPC 1860 U/s-506,34,504,323,324,354) ಅಡಿಯಲ್ಲಿ ಆನಂದಪುರಂ ಪೊಲೀಸರ ಕೇಸ್ ದಾಖಲಿಸಿದ್ಧಾರೆ. 

ಯಾರಿದು ಅನಿತಾ ಗೌಡ

ಅನಿತಾ ಗೌಡ  ಕನ್ನಡ ಹಾಗೂ ತಮಿಳು ಸಿನಿಮಾಗಳಲ್ಲಿ ನಟಿಸಿದ್ಧಾರೆ.  ಕನ್ನಡದಲ್ಲಿ ಸವಿಸವಿ ನೆನಪು’, ‘ಭೂಗತ’  ಸ್ಕೂಲ್ ಮಾಸ್ಟರ್,  ಕೆಂಪೇಗೌಡ, ದಂಡಂ ದಶಗುಣಂ, ಸುಗ್ರೀವ, ಹುಡುಗರು ಸಿನಿಮಾಗಳಲ್ಲಿ ಸಹನಟಿಯಾಗಿ ಕಾಣಿಸಿಕೊಂಡಿದ್ಧಾರೆ 


ರೌಡಿಶೀಟರ್ ಸೈಫು ಕಾಲಿಗೆ ಪೊಲೀಸ್ ಫೈರಿಂಗ್! ಎಸ್​ಪಿ ಮಿಥುನ್ ಕುಮಾರ್ ಹೇಳಿದ್ದೇನು?

 

ಶಿವಮೊಗ್ಗ ನಗರದ ಜಯನಗರ ಪೊಲೀಸ್ ಸ್ಟೇಷನ್​  ಪೊಲೀಸರು ಆಯನೂರಿನ ದೊಡ್ಡಾವನಂದಿ ಪ್ರದೇಶದಲ್ಲಿ ನಿನ್ನೆ ರೌಡಿಶೀಟರ್ ನ ಕಾಲಿಗೆ ಗುಂಡು ಹೊಡೆದು ಅರೆಸ್ಟ್ ಮಾಡಿದ್ದಾರೆ. ಈ ವಿಚಾರವಾಗಿ ಮಾತನಾಡಿರುವ ಎಸ್​​ಪಿ ಮಿಥುನ್ ಕುಮಾರ್, ಶಿವಮೊಗ್ಗದ ದೊಡ್ಡಪೇಟೆ, ಜಯನಗರ ಸೇರಿದಂತೆ ಆರೋಪಿ ವಿರುದ್ಧ  ವಿವಿಧ ಠಾಣೆಗಳಲಿ ಪ್ರಕರಣ ದಾಖಲಾಗಿದ್ದವು. ಒಟ್ಟು ರೌಡಿಶೀಟರ್ ಸೈಫು ವಿರುದ್ಧ 18 ಪ್ರಕರಣಗಳಿವೆ. ಈ ಪೈಕಿ ಡಕಾಯಿತಿ, ರಾಬರಿ, NDPS ಕಾಯ್ದೆ ಅಡಿಯಲ್ಲಿಯು ಕೇಸ್ ದರ್ಜ್​ ಆಗಿದ್ದವು. ಮೇಲಾಗಿಈತ ರೌಡಿ  ಫೌಜನ್​  ಸಹಚರನಾಗಿ ಗುರುತಿಸಿಕೊಂಡು ಕೆಲಸ ಮಾಡುತ್ತಿದ್ದ. 

ಜಯನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 307 ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಈತ ಪೊಲೀಸರಿಗೆ ಬೇಕಾಗಿದ್ದ. ಈ ಹಿನ್ನೆಲೆಯಲ್ಲಿ ಆತನ ಇರುವಿಕೆಯ ಸುಳಿವು ಸಿಕ್ಕು,  ಬಂಧಿಸಲು ಜಯನಗರ ಪಿಎಸ್ಐ ನವೀನ್ ನೇತೃತ್ವದ ತಂಡ ತೆರಳಿತ್ತು. ಪಿ ಎಸ್ ಐ ನವೀನ್ ಪೊಲೀಸ್ ಸಿಬ್ಬಂದಿಗಳಾದ ಸಚಿನ್, ನಾಗರಾಜ್ ಬಂಧನ ಕಾರ್ಯಾಚರಣೆಯಲ್ಲಿ ಇದ್ದರು. ಬಂಧನಕ್ಕೆ ತೆರಳಿದ್ದ ವೇಳೆಯಲ್ಲಿ ಸೈಫು ಸಿಬ್ಬಂದಿ ಸಚಿನ್ , ನಾಗರಾಜ್ ಮೇಲೆ ಹಲ್ಲೆ ನಡೆಸಿದ್ದಾನೆ. ಆಗ ಪಿಎಸ್ಐ ಆತ್ಮರಕ್ಷಣೆಗಾಗಿ ರೌಡಿಶೀಟರ್ ಸೈಫುಲ್ಲಾ ಕಾಲಿಗೆ ಗುಂಡು ಹಾರಿಸಿದ್ದಾರೆ.  ಆತನ 

ಜೀವಕ್ಕೆ ಯಾವುದೇ ಅಪಾಯವಾಗಿಲ್ಲ. ಪ್ರಕರಣದ ಸಂಬಂಧ ತನಿಖೆ ಮುಂದುವರಿಯುತ್ತೆ ಎಂದು ತಿಳಿಸಿದ್ದಾರೆ.  


 

 

Share This Article