ರೌಡಿಶೀಟರ್ ಸೈಫು ಕಾಲಿಗೆ ಪೊಲೀಸ್ ಫೈರಿಂಗ್! ಎಸ್​ಪಿ ಮಿಥುನ್ ಕುಮಾರ್ ಹೇಳಿದ್ದೇನು?

Police firing on rowdy-sheeter Saifu's leg! What did SP Mithun Kumar say?

ರೌಡಿಶೀಟರ್ ಸೈಫು ಕಾಲಿಗೆ ಪೊಲೀಸ್ ಫೈರಿಂಗ್! ಎಸ್​ಪಿ ಮಿಥುನ್ ಕುಮಾರ್ ಹೇಳಿದ್ದೇನು?

KARNATAKA NEWS/ ONLINE / Malenadu today/ Jul 4, 2023 SHIVAMOGGA NEWS 

ಶಿವಮೊಗ್ಗ ನಗರದ ಜಯನಗರ ಪೊಲೀಸ್ ಸ್ಟೇಷನ್​  ಪೊಲೀಸರು ಆಯನೂರಿನ ದೊಡ್ಡಾವನಂದಿ ಪ್ರದೇಶದಲ್ಲಿ ನಿನ್ನೆ ರೌಡಿಶೀಟರ್ ನ ಕಾಲಿಗೆ ಗುಂಡು ಹೊಡೆದು ಅರೆಸ್ಟ್ ಮಾಡಿದ್ದಾರೆ. ಈ ವಿಚಾರವಾಗಿ ಮಾತನಾಡಿರುವ ಎಸ್​​ಪಿ ಮಿಥುನ್ ಕುಮಾರ್, 

ಶಿವಮೊಗ್ಗದ ದೊಡ್ಡಪೇಟೆ, ಜಯನಗರ ಸೇರಿದಂತೆ ಆರೋಪಿ ವಿರುದ್ಧ  ವಿವಿಧ ಠಾಣೆಗಳಲಿ ಪ್ರಕರಣ ದಾಖಲಾಗಿದ್ದವು. ಒಟ್ಟು ರೌಡಿಶೀಟರ್ ಸೈಫು ವಿರುದ್ಧ 18 ಪ್ರಕರಣಗಳಿವೆ. ಈ ಪೈಕಿ ಡಕಾಯಿತಿ, ರಾಬರಿ, NDPS ಕಾಯ್ದೆ ಅಡಿಯಲ್ಲಿಯು ಕೇಸ್ ದರ್ಜ್​ ಆಗಿದ್ದವು. ಮೇಲಾಗಿ ಈತ ರೌಡಿ  ಫೌಜನ್​  ಸಹಚರನಾಗಿ ಗುರುತಿಸಿಕೊಂಡು ಕೆಲಸ ಮಾಡುತ್ತಿದ್ದ. 

ಜಯನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 307 ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಈತ ಪೊಲೀಸರಿಗೆ ಬೇಕಾಗಿದ್ದ. ಈ ಹಿನ್ನೆಲೆಯಲ್ಲಿ ಆತನ ಇರುವಿಕೆಯ ಸುಳಿವು ಸಿಕ್ಕು,  ಬಂಧಿಸಲು ಜಯನಗರ ಪಿಎಸ್ಐ ನವೀನ್ ನೇತೃತ್ವದ ತಂಡ ತೆರಳಿತ್ತು. ಪಿ ಎಸ್ ಐ ನವೀನ್ ಪೊಲೀಸ್ ಸಿಬ್ಬಂದಿಗಳಾದ ಸಚಿನ್, ನಾಗರಾಜ್ ಬಂಧನ ಕಾರ್ಯಾಚರಣೆಯಲ್ಲಿ ಇದ್ದರು. 

ಬಂಧನಕ್ಕೆ ತೆರಳಿದ್ದ ವೇಳೆಯಲ್ಲಿ ಸೈಫು ಸಿಬ್ಬಂದಿ ಸಚಿನ್ , ನಾಗರಾಜ್ ಮೇಲೆ ಹಲ್ಲೆ ನಡೆಸಿದ್ದಾನೆ. ಆಗ ಪಿಎಸ್ಐ ಆತ್ಮರಕ್ಷಣೆಗಾಗಿ ರೌಡಿಶೀಟರ್ ಸೈಫುಲ್ಲಾ ಕಾಲಿಗೆ ಗುಂಡು ಹಾರಿಸಿದ್ದಾರೆ.  ಆತನ ಜೀವಕ್ಕೆ ಯಾವುದೇ ಅಪಾಯವಾಗಿಲ್ಲ. ಪ್ರಕರಣದ ಸಂಬಂಧ ತನಿಖೆ ಮುಂದುವರಿಯುತ್ತೆ ಎಂದು ತಿಳಿಸಿದ್ದಾರೆ.