ಯಶವಂತಪುರ-ಶಿವಮೊಗ್ಗ ರೈಲಿಗೆ ಸಿಲುಕಿಗೆ ತುಮಕೂರು ಮೂಲದ ಟ್ರೈನಿ ಪೊಲೀಸ್ ಕಾಲು ಕಟ್! ಶಿವಮೊಗ್ಗದ ಮಹಾದೇವಿ ಟಾಕೀಸ್ ಬಳಿಯ ನಿಲ್ದಾಣದಲ್ಲಿ ಘಟನೆ

Trainee cop's leg chopped off after being stuck in Yeshwanthpur Shimoga train The incident took place at a station near Mahadevi Talkies in Shivamogga.

ಯಶವಂತಪುರ-ಶಿವಮೊಗ್ಗ ರೈಲಿಗೆ ಸಿಲುಕಿಗೆ ತುಮಕೂರು ಮೂಲದ ಟ್ರೈನಿ ಪೊಲೀಸ್ ಕಾಲು ಕಟ್! ಶಿವಮೊಗ್ಗದ ಮಹಾದೇವಿ ಟಾಕೀಸ್ ಬಳಿಯ ನಿಲ್ದಾಣದಲ್ಲಿ ಘಟನೆ

KARNATAKA NEWS/ ONLINE / Malenadu today/ Jul 8, 2023 SHIVAMOGGA NEWS  

ಯಶವಂತಪುರ – ಶಿವಮೊಗ್ಗ (16581/Yesvantpur - Shivamogga Town Express)  ರೈಲಿಗೆ ಸಿಲುಕಿ ತರಬೇತಿಯಲ್ಲಿರುವ ಪೊಲೀಸ್ ಸಿಬ್ಬಂದಿಯ ಕಾಲು ತುಂಡಾಗಿದೆ. ಈ ಘಟನೆ ಶಿವಮೊಗ್ಗ ನಗರದ ಮಹಾದೇವಿ ಟಾಕೀಸ್ ಬಳಿ ಇರುವ ರೈಲ್ವೆ ನಿಲ್ದಾಣದಲ್ಲಿ ಸಂಭವಿಸಿದೆ. ಇವತ್ತು ಮಧ್ಯಾಹ್ನ ನಡೆದ ಘಟನೆಯಲ್ಲಿ ನಾಗರಾಜ್​ ಎಂಬವರ ಕಾಲು ಕಟ್ ಆಗಿದ್ದು, ಅವರನ್ನ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. 

ಘಟನೆ ನಡೆದಿದ್ದೇಗೆ?

ಯಶವಂತಪುರದಿಂದ ಬರುತ್ತಿದ್ದ ಟ್ರೈನ್​ನಲ್ಲಿ ನಾಗರಾಜ್​ ರವರು ಆಗಮನಿಸಿದ್ದಾರೆ. ನಿಲ್ದಾಣದ ಬಳಿ ಅವರು ಇಳಿಯುವಾಗ ಎಡವಿ ಟ್ರೈನ್​ಗೆ ಕಾಲು ಸಿಲುಕಿಕೊಂಡಿದೆ. ತಕ್ಷಣವೇ ಅಲ್ಲಿದ್ದವರು ಬಂದು ನಾಗರಾಜ್​ರನ್ನ ರಕ್ಷಿಸಿದ್ಧಾರೆ. ಮೂಲತಃ ತುಮಕೂರಿನ ಕುಣಿಗಲ್ ಮೂಲದವರಾದ ನಾಗರಾಜ್​, ಕಡೂರಿನಲ್ಲಿರುವ ಪೊಲೀಸ್​ ತರಭೇತಿ ಸಂಸ್ಥೆಯಲ್ಲಿ ತರಭೇತಿ ಪಡೆಯುತ್ತಿದ್ದರು ಎಂಬ ಮಾಹಿತಿ ತಿಳಿದು ಬಂದಿದೆ.  


ಮಳೆಗಾಲದಲ್ಲಿ ಅಡಿಕೆ ಲಾಟರಿ ! 82 ಸಾವಿರದ ಗಡಿದಾಟಿದ ಸರಕು! ಎಷ್ಟಿದೆ ರೇಟು!?

ಶಿವಮೊಗ್ಗ: ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆಗೆ ಉತ್ತಮ ದರ ಲಭ್ಯವಾಗುತ್ತಿದೆ. ಕಾದಿದ್ದು ಅಡಿಕೆ ಮಾರುವವರಿಗೆ ಭರ್ಜರಿ ಲಾಭ ತಂದುಕೊಡ್ತಿದೆ. ಶುಕ್ರವಾರದ ಮಾರುಕಟ್ಟೆ ದರದಲ್ಲಿ ಗರಿಷ್ಠ ₹82,496ಕ್ಕೆ ಅಡಿಕೆ ಮಾರಾಟವಾಗಿದೆ. ಕನಿಷ್ಠ ಅಂದರೆ ₹50,599 ದರ ದೊರೆತಿದೆ. ಸರಕು ಅಡಿಕೆಗೆ ಈ ದರ ದೊರಕ್ಕಿದ್ದು,  ರಾಶಿ ಹಾಗೂ ಬೆಟ್ಟೆಗೆ ಕ್ವಿಂಟಾಲ್​ಗೆ ಅರ್ಧಲಕ್ಷ ಸಿಗುತ್ತಿದೆ. ಕಳೆದ ತಿಂಗಳು  ಕ್ವಿಂಟಲ್‌ಗೆ ₹80 ಸಾವಿರದ ಆಸುಪಾಸಿನಲ್ಲಿತ್ತು. ಆನಂತರ ಜುಲೈ ಆರಂಭದಲ್ಲಿ ಅಡಿಕೆ ದರ  ಕ್ವಿಂಟಾಲ್​  ₹76,000  ಆಸುಪಾಸು  ತಲುಪಿತ್ತು . ಇದೀಗ ಮತ್ತೆ ಅಡಿಕೆ ದರದಲ್ಲಿ ಮತ್ತೆ ಏರಿಕೆ ಕಂಡಿದೆ. 

ಯಾವ್ಯಾವುದಕ್ಕೆ ಎಷ್ಟೆಷ್ಟಿದೆ ರೇಟು? 

ಸರಕು ಕ್ವಿಂಟಾಲ್​ಗೆ ಗರಿಷ್ಟ ₹82496 ಕನಿಷ್ಟ ₹50599

ಬೆಟ್ಟೆ ಅಡಿಕೆಕ್ವಿಂಟಲ್‌ಗೆ ಗರಿಷ್ಠ ₹55382, ಕನಿಷ್ಠ ₹45000 

ರಾಶಿ ಅಡಿಕೆ ಗರಿಷ್ಠ ₹56299 ಹಾಗೂ ಕನಿಷ್ಠ ₹39201

ಗೊರಬಲು ಗರಿಷ್ಠ ₹42,399 ಹಾಗೂ ಕನಿಷ್ಠ ₹18,000