ನೇಣು ಬಿಗಿದುಕೊಂಡು ತೀರ್ಥಹಳ್ಳಿಯ ಯುವಕ ಆತ್ಮಹತ್ಯೆ! ಕಾರಣವೇನು? ಪೊಲೀಸ್​ ಇಲಾಖೆಗೆ ವಿರುದ್ಧವೇಕೆ ಕೇಳಿಬರ್ತಿದೆ ದೂರು?

Thirthahalli youth commits suicide by hanging himself What is the reason? Why is there a complaint against the police department?

ನೇಣು ಬಿಗಿದುಕೊಂಡು ತೀರ್ಥಹಳ್ಳಿಯ ಯುವಕ ಆತ್ಮಹತ್ಯೆ! ಕಾರಣವೇನು? ಪೊಲೀಸ್​ ಇಲಾಖೆಗೆ ವಿರುದ್ಧವೇಕೆ ಕೇಳಿಬರ್ತಿದೆ  ದೂರು?

KARNATAKA NEWS/ ONLINE / Malenadu today/ Jul 8, 2023 SHIVAMOGGA NEWS  

ಶಿವಮೊಗ್ಗ ಜಿಲ್ಲೆ  ತೀರ್ಥಹಳ್ಳಿ : ತಾಲೂಕಿನ ಶೇಡ್ಗಾರ್ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ  ಕಟ್ಟೆಹಕ್ಲಿನಲ್ಲಿ  22 ವರ್ಷದ ಯುವಕನೊಬ್ಬ ನೇಣುಬಿಗಿದುಕೊಂಡು ಸಾವನ್ನಪ್ಪಿದ್ದಾನೆ. ಮೃತ ಯುವಕ ಸ್ಥಳೀಯ ನಿವಾಸಿ ಮಿಥುನ್​ ಶೆಟ್ಟಿ ಎಂದು ಗೊತ್ತಾಗಿದೆ. ಮೊಬೈಲ್ ಅಂಗಡಿ ಇಟ್ಟುಕೊಂಡಿದ್ದ ಈತನ ಸಾವಿಗೆ ಪೊಲೀಸ್ ಇಲಾಖೆಯ ಅಧಿಕೃತ ಕಾರಣ ಗೊತ್ತಾಗಿಲ್ಲ., ಸ್ಥಳೀಯರು ಕ್ರಿಕೆಟ್ ಬೆಟ್ಟಿಂಗ್​ನ ಸಾಲವೇ ಆತ್ಮಹತ್ಯೆಗೆ ಕಾರಣ ಎನ್ನುತ್ತಿದ್ದಾರೆ. ಪೊಲೀಸರು ಅಸ್ವಾಭಾವಿಕ ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನೂ ಕ್ರಿಕೆಟ್ ಬೆಟ್ಟಿಂಗ್ ದಂಧೆ ಜೋರಾಗಿಯೇ ಸದ್ದು ಮಾಡುತ್ತಿದ್ದು, ಈ ಬಗ್ಗೆ ಪೊಲೀಸ್ ಇಲಾಖೆಗೆ ಮಾತನಾಡುತ್ತಿಲ್ಲ ಎಂದು ಸ್ಥಳೀಯರು ದೂರಿದ್ಧಾರೆ. 


ಯಶವಂತಪುರ-ಶಿವಮೊಗ್ಗ ರೈಲಿಗೆ ಸಿಲುಕಿಗೆ ತುಮಕೂರು ಮೂಲದ ಟ್ರೈನಿ ಪೊಲೀಸ್ ಕಾಲು ಕಟ್! ಶಿವಮೊಗ್ಗದ ಮಹಾದೇವಿ ಟಾಕೀಸ್ ಬಳಿಯ ನಿಲ್ದಾಣದಲ್ಲಿ ಘಟನೆ

ಯಶವಂತಪುರ – ಶಿವಮೊಗ್ಗ (16581/Yesvantpur - Shivamogga Town Express)  ರೈಲಿಗೆ ಸಿಲುಕಿ ತರಭೇತಿಯಲ್ಲಿರುವ ಪೊಲೀಸ್ ಸಿಬ್ಬಂದಿಯ ಕಾಲು ತುಂಡಾಗಿದೆ. ಈ ಘಟನೆ ಶಿವಮೊಗ್ಗ ನಗರದ ಮಹಾದೇವಿ ಟಾಕೀಸ್ ಬಳಿ ಇರುವ ರೈಲ್ವೆ ನಿಲ್ದಾಣದಲ್ಲಿ ಸಂಭವಿಸಿದೆ. ಇವತ್ತು ಮಧ್ಯಾಹ್ನ ನಡೆದ ಘಟನೆಯಲ್ಲಿ ನಾಗರಾಜ್​ ಎಂಬವರ ಕಾಲು ಕಟ್ ಆಗಿದ್ದು, ಅವರನ್ನ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. 

ಘಟನೆ ನಡೆದಿದ್ದೇಗೆ?

ಯಶವಂತಪುರದಿಂದ ಬರುತ್ತಿದ್ದ ಟ್ರೈನ್​ನಲ್ಲಿ ನಾಗರಾಜ್​ ರವರು ಆಗಮನಿಸಿದ್ದಾರೆ. ನಿಲ್ದಾಣದ ಬಳಿ ಅವರು ಇಳಿಯುವಾಗ ಎಡವಿ ಟ್ರೈನ್​ನ ಚಕ್ರಕ್ಕೆ ಕಾಲು ಸಿಲುಕಿಕೊಂಡಿದೆ. ತಕ್ಷಣವೇ ಅಲ್ಲಿದ್ದವರು ಬಂದು ನಾಗರಾಜ್​ರನ್ನ ರಕ್ಷಿಸಿದ್ಧಾರೆ. ಮೂಲತಃ ತುಮಕೂರಿನ ಕುಣಿಗಲ್ ಮೂಲದವರಾದ ನಾಗರಾಜ್​, ಕಡೂರಿನಲ್ಲಿರುವ ಪೊಲೀಸ್​ ತರಭೇತಿ ಸಂಸ್ಥೆಯಲ್ಲಿ ತರಭೇತಿ ಪಡೆಯುತ್ತಿದ್ದರು ಎಂಬ ಮಾಹಿತಿ ತಿಳಿದು ಬಂದಿದೆ.  


ಮಳೆಗಾಲದಲ್ಲಿ ಅಡಿಕೆ ಲಾಟರಿ ! 82 ಸಾವಿರದ ಗಡಿದಾಟಿದ ಸರಕು! ಎಷ್ಟಿದೆ ರೇಟು!?

ಶಿವಮೊಗ್ಗ: ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆಗೆ ಉತ್ತಮ ದರ ಲಭ್ಯವಾಗುತ್ತಿದೆ. ಕಾದಿದ್ದು ಅಡಿಕೆ ಮಾರುವವರಿಗೆ ಭರ್ಜರಿ ಲಾಭ ತಂದುಕೊಡ್ತಿದೆ. ಶುಕ್ರವಾರದ ಮಾರುಕಟ್ಟೆ ದರದಲ್ಲಿ ಗರಿಷ್ಠ ₹82,496ಕ್ಕೆ ಅಡಿಕೆ ಮಾರಾಟವಾಗಿದೆ. ಕನಿಷ್ಠ ಅಂದರೆ ₹50,599 ದರ ದೊರೆತಿದೆ. ಸರಕು ಅಡಿಕೆಗೆ ಈ ದರ ದೊರಕ್ಕಿದ್ದು,  ರಾಶಿ ಹಾಗೂ ಬೆಟ್ಟೆಗೆ ಕ್ವಿಂಟಾಲ್​ಗೆ ಅರ್ಧಲಕ್ಷ ಸಿಗುತ್ತಿದೆ. 

ಕಳೆದ ತಿಂಗಳು  ಕ್ವಿಂಟಲ್‌ಗೆ ₹80 ಸಾವಿರದ ಆಸುಪಾಸಿನಲ್ಲಿತ್ತು. ಆನಂತರ ಜುಲೈ ಆರಂಭದಲ್ಲಿ ಅಡಿಕೆ ದರ  ಕ್ವಿಂಟಾಲ್​  ₹76,000  ಆಸುಪಾಸು  ತಲುಪಿತ್ತು . ಇದೀಗ ಮತ್ತೆ ಅಡಿಕೆ ದರದಲ್ಲಿ ಮತ್ತೆ ಏರಿಕೆ ಕಂಡಿದೆ. 

ಯಾವ್ಯಾವುದಕ್ಕೆ ಎಷ್ಟೆಷ್ಟಿದೆ ರೇಟು? 

ಸರಕು ಕ್ವಿಂಟಾಲ್​ಗೆ ಗರಿಷ್ಟ ₹82496 ಕನಿಷ್ಟ ₹50599

ಬೆಟ್ಟೆ ಅಡಿಕೆಕ್ವಿಂಟಲ್‌ಗೆ ಗರಿಷ್ಠ ₹55382, ಕನಿಷ್ಠ ₹45000 

ರಾಶಿ ಅಡಿಕೆ ಗರಿಷ್ಠ ₹56299 ಹಾಗೂ ಕನಿಷ್ಠ ₹39201

ಗೊರಬಲು ಗರಿಷ್ಠ ₹42,399 ಹಾಗೂ ಕನಿಷ್ಠ ₹18,000