ಕೊಟ್ಟಿಗೆಯಲ್ಲಿ ಕಟ್ಟಿದ್ದ ತುಂಬು ಗರ್ಭದ ಹಸುಗಳನ್ನ ಕದ್ದೊಯ್ದ ಕಳ್ಳರು! ಸ್ಥಳೀಯರ ಆಕ್ರೋಶ

Thieves steal cows from Sakrebail in Shivamogga

ಕೊಟ್ಟಿಗೆಯಲ್ಲಿ ಕಟ್ಟಿದ್ದ ತುಂಬು ಗರ್ಭದ ಹಸುಗಳನ್ನ ಕದ್ದೊಯ್ದ ಕಳ್ಳರು! ಸ್ಥಳೀಯರ ಆಕ್ರೋಶ

SHIVAMOGGA|  Dec 19, 2023  | ಶಿವಮೊಗ್ಗದಲ್ಲಿ ದನಗಳ್ಳತನ ಪ್ರಕರಣಗಳು ಮತ್ತೆ ಹೆಚ್ಚಾಗುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ಶಿವಮೊಗ್ಗ ಸಕ್ರೆಬೈಲ್​ ಸಮೀಪ ತುಂಬು ಗರ್ಭಿಣಿಯಾಗಿದ್ದ ಹಸುಗಳನ್ನ ಕಾರಿನಲ್ಲಿ ಕದ್ದೋಯ್ಯಲಾಗಿದೆ. ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಘಟನೆ ಬಗ್ಗೆ ಸ್ಥಳೀಯರ ಆಕ್ರೋಶ ವ್ಯಕ್ತವಾಗಿದೆ. 

ಇಲ್ಲಿನ ನಿವಾಸಿಯೊಬ್ಬರು ಕೊಟ್ಟಿಗೆಯಲ್ಲಿ ಕಟ್ಟಿದ್ದ ಒಟ್ಟು ನಾಲ್ಕು ಹಸುಗಳನ್ನ ಕಳ್ಳತನ ಮಾಡಲಾಗಿದೆ. ಕಾರೊಂದರಲ್ಲಿ ಬಂದ ದುಷ್ಕರ್ಮಿಗಳು ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಈ ಕೃತ್ಯವೆಸಗಿದ್ದಾರೆ. ದನಕ್ಕೆ ಬಾಳೆಹಣ್ಣು ಹಾಕುವಂತೆ ಮಾಡಿ ಅದನ್ನ ಹಿಡಿದು ಕಾರಿನೊಳಕ್ಕೆ ತುರುಕಿಕೊಂಡು ಎಸ್ಕೇಪ್ ಆಗಿದ್ದಾರೆ. 

READ : ಶಿವಮೊಗ್ಗ ಜಿಲ್ಲೆ ಮಂಗನ ಕಾಯಿಲೆ ಆತಂಕ! ಎರಡು ಪ್ರತ್ಯೇಕ ಸ್ಥಳದಲ್ಲಿ ಪತ್ತೆಯಾಯ್ತು ಕೋತಿಯ ಶವ

ಇನ್ನೂ ಸ್ಥಳೀಯ ನಿವಾಸಿಗಳಲ್ಲಿ ಈ ಘಟನೆ ಆತಂಕ ಮೂಡಿಸಿದ್ದು, ಕಷ್ಟಪಟ್ಟು ಸಾಕಿದ್ದ ಮೂಕಪ್ರಾಣಿಗಳನ್ನ ಹೊತ್ತುಕೊಂಡು ಹೋಗಿರುವ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ಇನ್ನೂ ಘಟನೆ ಬೆನ್ನಲ್ಲೆ ಸ್ಥಳೀಯರು ಕಾರಿನ ಮೂಲ ಹಾಗೂ ಕಳ್ಳರನ್ನ ಗುರುತಿಸುವ ಪ್ರಯತ್ನ ನಡೆಸ್ತಿದ್ದಾರೆ. ಸಿಸಿ ಕ್ಯಾಮರಾಗಳಲ್ಲಿ ದೃಶ್ಯ ಸೆರೆಯಾಗಿದ್ದು, ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ.