ಶಿವಮೊಗ್ಗ ಜಿಲ್ಲೆ ಮಂಗನ ಕಾಯಿಲೆ ಆತಂಕ! ಎರಡು ಪ್ರತ್ಯೇಕ ಸ್ಥಳದಲ್ಲಿ ಪತ್ತೆಯಾಯ್ತು ಕೋತಿಯ ಶವ

Shimoga district is worried about KFD. Monkey's body found at two separate places

ಶಿವಮೊಗ್ಗ ಜಿಲ್ಲೆ ಮಂಗನ ಕಾಯಿಲೆ ಆತಂಕ! ಎರಡು ಪ್ರತ್ಯೇಕ ಸ್ಥಳದಲ್ಲಿ ಪತ್ತೆಯಾಯ್ತು ಕೋತಿಯ ಶವ

KARNATAKA |  Dec 19, 2023  | ಕೊರೊನಾ ಲಕ್ಷಣಗಳು ಮತ್ತೆ ಕಾಣಿಸಿಕೊಳ್ಳುತ್ತಿರುವ ಬೆನ್ನಲ್ಲೆ ಶಿವಮೊಗ್ಗ ಜಿಲ್ಲೆಯಲ್ಲಿ ಆ ಕಾಲದಿಂದಲೂ ಕಾಡುತ್ತಿರುವ ಮಂಗನ ಕಾಯಿಲೆಯ ಆತಂಕ ಮನೆ ಮಾಡಿದೆ. ಮೊದಲೇ ಈ ಕಾಯಿಲೆಗೆ ಅಗತ್ಯವಿರುವ ಲಸಿಕೆಯ ಉತ್ಪಾದನೆ ಮಾಡುತ್ತಿಲ್ಲ. ಇದರ ನಡುವೆ ಇತ್ತೀಚೆಗೆ ಮಂಗನ ಕಾಯಿಲೆಯ ಪ್ರಕರಣ ದಾಖಲಾಗಿತ್ತು. 

ಇದರ ನಡುವೆ  ತಾಲೂಕಿನ ಜೋಗ್‌ಫಾಲ್ಸ್‌ನ ವರ್ಕ್‌ಮನ್ ಬ್ಲಾಕ್ ಹಾಗೂ ರೆಡ್ಡಿ ಬ್ಲಾಕ್ ಪ್ರದೇಶದಲ್ಲಿ ಎರಡು ಮಂಗಗಳ ಮೃತದೇಹಗಳು ಪತ್ತೆಯಾಗಿದೆ.  

READ :ಇಂಡಿಯನ್ ಡೆಂಟಲ್ ಅಸೋಸಿಯೇಷನ್ (ಐಡಿಎ) ಕರ್ನಾಟಕ ರಾಜ್ಯ ಶಾಖೆಯ ಅಧ್ಯಕ್ಷರಾಗಿ ಡಾ.ಭರತ್ ಎಸ್.ವಿ ಆಯ್ಕೆ

ಇನ್ನೂ ವಿಷಯ ತಿಳಿಯುತ್ತಲೇ ಸ್ಥಳಕ್ಕೆ  ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪಶು ವೈದ್ಯಾಧಿಕಾರಿ ಮತ್ತು ಜೋಗ ಕಾರ್ಗಲ್ ಪಟ್ಟಣ ಪಂಚಾಯ್ತಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

ಅಲ್ಲದೆ  ಮಂಗಗಳ ಮೃತ ದೇಹದ ಪರೀಕ್ಷೆ ನಡೆಸಿ ಮಾಹಿತಿ ಸಂಗ್ರಹಿಸಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಇನ್ನೂ ಮಂಗಗಳ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಆದಾಗ್ಯು ಅನಾವಶ್ಯಕವಾಗಿ  ಯಾರು ಕಾಡಿಗೆ ತೆರಳಬಾರದು.ಹಾಗೊಂದು ತೆರಳುವ ಅನಿವಾರ್ಯ ಇದ್ದರೆ,  ಡಿಎಂಪಿ ತೈಲವನ್ನು ಹಚ್ಚಿಕೊಂಡು ಹೋಗಬೇಕೆಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.