ಶಿವಮೊಗ್ಗದ ರಾಗಿಗುಡ್ಡ ಚಾನಲ್‌ ಬಳಿ, ಪುರಲೆ, ಗೋಪಾಳ, ನ್ಯೂ ಮಂಡ್ಲಿ ಯುವಕರ ಬಂಧನ

Police in Shivamogga, India, arrested three people for selling ganja near Ragigudda Channel 

ಶಿವಮೊಗ್ಗದ ರಾಗಿಗುಡ್ಡ ಚಾನಲ್‌ ಬಳಿ, ಪುರಲೆ, ಗೋಪಾಳ, ನ್ಯೂ ಮಂಡ್ಲಿ ಯುವಕರ ಬಂಧನ
Shivamogga police , SP Mithun Kumar ,ganja drive

SHIVAMOGGA | MALENADUTODAY NEWS | Jul 2, 2024  ಮಲೆನಾಡು ಟುಡೆ    

ಶಿವಮೊಗ್ಗ ಸಿಟಿಯ ರಾಗಿಗುಡ್ಡ ಚಾನಲ್‌ ಬಳಿ ಗಾಂಜಾ ಮಾರುತ್ತಿದ್ದ ಮೂವರನ್ನು ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರು ರೇಡ್‌ ನಡೆಸಿ ಅರೆಸ್ಟ್‌ ಮಾಡಿದ್ದಾರೆ. ಅದರ ವಿವರ ನೋಡುವುದಾದರೆ,  ದಿನಾಂಕ:- 01-07-2024 ರಂದು ಅಂದರೆ ನಿನ್ನೆ ಬೆಳಗ್ಗೆ ಶಿವಮೊಗ್ಗ ಟೌನ್ ರಾಗಿಗುಡ್ಡ ಚಾನಲ್ ಹತ್ತಿರ ಗಾಂಜಾ ಮಾರಲಾಗುತ್ತಿದೆ ಎಂಬ ವರ್ತಮಾನ  ಪೊಲೀಸರಿಗೆ ಸಿಕ್ಕಿದೆ. 

ಶಿವಮೊಗ್ಗ ಗ್ರಾಮಾಂತರ ಪೊಲೀಸ್‌ ಠಾಣೆ

ತಕ್ಷಣವೇ ಅಲರ್ಟ್‌ ಆದ  ಸತ್ಯನಾರಾಯಣ, ಪಿಐ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ರವರ ನೇತೃತ್ವದ ಸಿಬ್ಬಂಧಿಗಳ ತಂಡ ಸ್ಥಳಕ್ಕೆ ಬಂದು ದಾಳಿ ನಡೆಸಿದೆ. ಈ ದಾಳಿಯಲ್ಲಿ ಅಂದಾಜು ಮೌಲ್ಯ 68,000/-  ರೂಗಳ 1 ಕೆಜಿ 243 ಗ್ರಾಂ ತೂಕದ ಒಣ ಗಾಂಜಾ ಮತ್ತು 2,350 ನಗದು ಹಣವನ್ನು  ಅಮಾನತ್ತು ಪಡಿಸಿಕೊಳ್ಳಲಾಗಿದೆ. 

ಬಂಧಿತರು 

1) ಸಂಕೇತ, 23 ವರ್ಷ, ಗೋಪಾಳ, ಶಿವಮೊಗ್ಗ ಟೌನ್,  

2) ಅಂಬರೀಶ, 26 ವರ್ಷ,  ನ್ಯೂ ಮಂಡ್ಲಿ, ಶಿವಮೊಗ್ಗ ಟೌನ್ ಮತ್ತು 

3) ಧನುಷ್,  20 ವರ್ಷ,  ಪುರಲೆ, ಶಿವಮೊಗ್ಗ ಟೌನ್ 

ಆರೋಪಿತರ ವಿರುದ್ಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0193/2024  ಕಲಂ 20(b), (II)B, 8(c) NDPS ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.

Police in Shivamogga, India, arrested three people for selling ganja near Ragigudda Channel