ಶಿವಮೊಗ್ಗ | ಒಮಿನಿ ಡಿಕ್ಕಿ, ಬೈಕ್‌ ಸವಾರ ಸಾವು | ಆಟೋ & ಸ್ಕೂಟರ್‌ ನಡುವೆ ಡಿಕ್ಕಿ ಇಬ್ಬರಿಗೆ ಗಾಯ

bike and a Maruti Omni collided near Hitturu Cross in Shivamogga taluk

ಶಿವಮೊಗ್ಗ | ಒಮಿನಿ ಡಿಕ್ಕಿ,  ಬೈಕ್‌ ಸವಾರ ಸಾವು | ಆಟೋ & ಸ್ಕೂಟರ್‌  ನಡುವೆ ಡಿಕ್ಕಿ ಇಬ್ಬರಿಗೆ ಗಾಯ
Hitturu Cross in Shivamogga taluk

SHIVAMOGGA | MALENADUTODAY NEWS | Jul 2, 2024  ಮಲೆನಾಡು ಟುಡೆ   

ಹಿಟ್ಟೂರು ಕ್ರಾಸ್‌ ಬಳಿ ಬೈಕ್ ಮತ್ತು ಮಾರುತಿ ಒಮ್ಮಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೆ ಮೃತಪಟ್ಟಿರುವ ಘಟನೆ ನಡೆದಿದೆ. ನ್ಯಾಮತಿ ತಾಲೂಕು ಕೊಡತಾಳು ಗ್ರಾಮದ ಜಗದೀಶ್ (30) ಮೃತಪಟ್ಟವರು. 

ಬೈಕ್‌ನಲ್ಲಿ ಹಾರನಹಳ್ಳಿ ಬ್ಯಾಂಕ್‌ಗೆ ಬರುತ್ತಿದ್ದಾಗ ಹಿಟ್ಟೂರು ಕ್ರಾಸ್ ಬಳಿ ಎದುರಿಗೆ ಬರುತ್ತಿದ್ದ ಒಮಿನಿ ಮುಖಾಮುಖಿ ಡಿಕ್ಕಿಯಾಗಿದೆ. ಜಗದೀಶ್ ತಲೆಗೆ ತೀವ್ರ ಪೆಟ್ಟು ಬಿದ್ದು ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಕುಂಸಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 

ಶಿವಮೊಗ್ಗ ಗ್ರಾಮಾಂತರ ಪೊಲೀಸ್‌ ಠಾಣೆ 

ಇನ್ನೊಂದು ಘಟನೆಯಲ್ಲಿ ಶಿವಮೊಗ್ಗ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ,  ಬೈಕ್ & ಆಟೋ ನಡುವೆ ಅಪಘಾತವಾಗಿದೆ. ವಿಷಯ ತಿಳಿದು  ಸ್ಥಳಕ್ಕೆ ತೆರಳಿದ ERV ಸಿಬ್ಬಂದಿ ಪರಿಶೀಲನೆ ನಡೆಸಿ ಎರಡು ವಾಹನಗಳನ್ನ ಠಾಣೆಗೆ ರವಾನಿಸಿದ್ದಾರೆ. ಇನ್ನೂ ಗಾಯಗೊಂಡಿದ್ದ ಬೈಕ್ ಸವಾರರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  

accident occurred near Hitturu Cross in Shivamogga taluk when a bike and a Maruti Omni collided.