ಲಿಂಗನಮಕ್ಕಿಗೆ ಭರಪೂರ ನೀರು | ಭದ್ರಾ ಡ್ಯಾಂಗೆ ಕುಸಿದ ಒಳಹರಿವು | ತುಂಗಾ ಜಲಾಶಯದ 14 ಕ್ರಸ್ಟ್‌ ಗೇಟ್‌ ಓಪನ್‌

Linganamakki Increased Inflow Bhadra Dam Reduced Inflow 14 crest gates of Tunga reservoir opened

ಲಿಂಗನಮಕ್ಕಿಗೆ ಭರಪೂರ ನೀರು | ಭದ್ರಾ ಡ್ಯಾಂಗೆ ಕುಸಿದ ಒಳಹರಿವು | ತುಂಗಾ ಜಲಾಶಯದ 14 ಕ್ರಸ್ಟ್‌ ಗೇಟ್‌  ಓಪನ್‌
Linganamakki Increased Inflow , Bhadra Dam Reduced Inflow, 14 crest gates of Tunga reservoir opened

SHIVAMOGGA | MALENADUTODAY NEWS | Jul 4, 2024  ಮಲೆನಾಡು ಟುಡೆ   

ಒಂದೆ ದಿನದ ಮಳೆಗೆ ಶಿವಮೊಗ್ಗ ಡ್ಯಾಂಗಳಿಗೆ ಭರಪೂರ ನೀರು ಹರಿದಿದೆ. ಆದರೆ ಭದ್ರಾ ಜಲಾಶಯಕ್ಕೆ ನೀರಿನ ಹರಿವು ಕಡಿಮೆಯಾಗಿದೆ. ಭದ್ರಾ ಜಲಾಶಯಕ್ಕೆ ನಿನ್ನೆ 5324 ಕ್ಯೂಸೆಕ್ಸ್‌ ನೀರು ಹರಿದು ಬಂದಿತ್ತು. ಜಲಾಶಯದ ಮಟ್ಟ 639.59 ಮೀಟರ್‌ ನಷ್ಟಿತ್ತು. ಇವತ್ತು ಬೆಳಗ್ಗಿನ ಅಂಕಿ ಅಂಶಗಳ ಪ್ರಕಾರ ಭದ್ರಾ ಜಲಾಶಯಕ್ಕೆ 4908 ಕ್ಯೂಸೆಕ್ಸ್‌ ನೀರು ಹರಿದು ಬಂದಿದ್ದು  ಜಲಾಶಯದ ನೀರಿನ ಮಟ್ಟ 136.1 ಅಡಿಯಷ್ಟಿದೆ. (ಸಮುದ್ರ ಮಟ್ಟದಿಂದ ಮೀಟರ್‌, ಕೆಲವು ಅಂಕಿ ಅಂಶಗಳು ಅಡಿಗಳಲ್ಲಿರುತ್ತವೆ)

ಇನ್ನೂ  ಮಳೆಯಿಂದಾಗಿ ಲಿಂಗನಮಕ್ಕಿ ಜಲಾಶಯಕ್ಕೆ 60 ಸಾವಿರ ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. ಗರಿಷ್ಠ 1819 ಅಡಿ ನೀರಿನ ಮಟ್ಟ ಹೊಂದಿರುವ ಲಿಂಗನಮಕ್ಕಿ ಜಲಾಶಯದಲ್ಲಿ ಪ್ರಸ್ಥುತ 1760.11 ಅಡಿ ನೀರು ಸಂಗ್ರಹಗೊಂಡಿದೆ. ಕಳೆದ ವರ್ಷ ಇದೇ ಸಂದರ್ಭದಲ್ಲಿ ಡ್ಯಾಂ ನಲ್ಲಿ 1741 ಅಡಿ ಕನಿಷ್ಠ ನೀರಿನ ಮಟ್ಟವಿತ್ತು  

ಗಾಜನೂರಿನ ತುಂಗಾ ಅಣೆಕಟ್ಟೆ ಭರ್ತಿಯಾಗಿದ್ದು, ತುಂಗಾ ನದಿಗೆ 18,412 ಕ್ಯೂಸೆಕ್ಸ್ ನೀರು ಹರಿಬಿಡಲಾಗಿದೆ. ಜಲಾಶಯ ಭರ್ತಿ ಆಗಿರುವುದರಿಂದ ಅಷ್ಟೇ ಪ್ರಮಾಣದ ನೀರನ್ನು ನದಿಗೆ ಹರಿಸಲಾಗುತ್ತಿದೆ. ಬುಧವಾರದಿಂದ ಜಲಾಶಯದ 22 ಕ್ರಸ್ಟ್‌ಗೇಟ್‌ಗಳ ಪೈಕಿ 14 ಕ್ರಸ್ಟ್‌ಗೇಟ್‌ಗಳನ್ನು ತೆರೆದು ನದಿಗೆ ನೀರು ಹರಿಸಲಾಗುತ್ತಿದೆ

Heavy rainfall in Shivamogga has significantly increased water inflow into the region's dams, with the exception of Bhadra Reservoir. The Bhadra Reservoir received 4908 cusecs of water, and its level stands at 136.1 feet. Linganamakki Dam, on the other hand, received a substantial inflow of 60,000 cusecs, with the water level reaching 1760.11 feet compared to 1741 feet last year. The Tunga Dam in Gajanoor is full, and excess water is being released into the Tunga River at a rate of 18,412 cusecs.