ಪ್ರೈವೇಟ್‌ ಬಸ್‌ ಸ್ಟಾಪ್‌ ಬಳಿ ಅಸ್ವಸ್ಥರಾಗಿ ಬಿದ್ದಿದ್ದ ಕುಮಾರಸ್ವಾಮಿ ಸಾವು| ಇಲ್ಲಿದೆ ಪ್ರಕಟಣೆ

Doddapet Police Station Announcement

ಪ್ರೈವೇಟ್‌ ಬಸ್‌ ಸ್ಟಾಪ್‌ ಬಳಿ ಅಸ್ವಸ್ಥರಾಗಿ ಬಿದ್ದಿದ್ದ ಕುಮಾರಸ್ವಾಮಿ ಸಾವು| ಇಲ್ಲಿದೆ ಪ್ರಕಟಣೆ
Doddapet Police Station Announcement

SHIVAMOGGA | MALENADUTODAY NEWS | Jul 4, 2024  ಮಲೆನಾಡು ಟುಡೆ   

ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ  ಜೂನ್ 24 ರಂದು ಶಿವಮೊಗ್ಗ ನಗರದ ಖಾಸಗಿ ಬಸ್ಸ್ ಸ್ಟಾಪ್ ಬಳಿ ಸುಮಾರು 50-55 ವಯಸ್ಸಿನ ವ್ಯಕ್ತಿಯೊಬ್ಬರು ಸುಸ್ತಾಗಿ ಬಿದ್ದಿದ್ದರು. ಅವರನ್ನ ಸಾರ್ವಜನಿಕರು ಅಂಬುಲೆನ್ಸ್ ಮೂಲಕ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದರು. ಇದೀಗ ಅವರು ಚಿಕಿತ್ಸೆ ಪಲಿಸದೆ ಮರಣ ಹೊಂದಿದ್ದಾರೆ. ಅವರ ಮೃತ ದೇಹವನ್ನು ಮೆಗ್ಗಾನ್ ಶವಗಾರದಲ್ಲಿ ಇರಿಸಲಾಗಿದೆ. 

ದೊಡ್ಡಪೇಟೆ ಪೊಲೀಸ್‌ ಸ್ಟೇಷನ್‌ 

ಚಿಕಿತ್ಸೆ ವೇಳೆ ವ್ಯಕ್ತಿಯ ಹೆಸರು ಕುಮಾರಸ್ವಾಮಿ ಎಂದು ತಿಳಿದಿದ್ದು, ಸುಮಾರು 5.06 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕಪ್ಪು ಮೈಬಣ್ಣ, ಕೋಲುಮುಖ ಹೊಂದಿರುತ್ತಾರೆ. ಮೃತನ ಕುತ್ತಿಗೆಯ ಕೆಳಭಾಗದಲ್ಲಿ ರಾಗಿ ಕಾಳು ಗಾತ್ರದ 3 ಕಪ್ಪು ಮಚ್ಚೆಗಳು ಇರುತ್ತದೆ. ಮೈಮೇಲೆ ಕಪ್ಪು ಬಣ್ಣದ ತುಂಬು ತೋಳಿನ ಸ್ವೆಟರ್, ಬಿಳಿ ಬಣ್ಣದ ಶರ್ಟ್ ಮತ್ತು ನೀಲಿ ಬಣ್ಣದ ಪಂಚೆ ಧರಿಸಿರುತ್ತಾನೆ. 

ಈ ವ್ಯಕ್ತಿಯ ವಾರಸುದಾರರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆ ದೂ.ಸಂ.: 08182-261414 ಅಥವಾ ಮೊ.ಸಂ.: 9611761255 ನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

---------------

A man, approximately 50-55 years old, was found unconscious near a private bus stop in Shivamogga on June 24th. He was taken to Meggan Hospital but died during treatment Anyone with information about his relatives is asked to contact the Shivamogga Doddapete Police Station.