ಕಾಮತ್‌ ಲೇಔಟ್‌ನಲ್ಲಿ ತುಂಗಾನಗರ ಪೊಲೀಸರ ರೇಡ್‌! ಸೀಜ್‌ ಆದ ಆಟೋದಲ್ಲಿತ್ತು ಐಟಂ!

Tunganagar police raid Kamath Layout Ganja in seized auto

ಕಾಮತ್‌ ಲೇಔಟ್‌ನಲ್ಲಿ ತುಂಗಾನಗರ ಪೊಲೀಸರ ರೇಡ್‌! ಸೀಜ್‌ ಆದ ಆಟೋದಲ್ಲಿತ್ತು ಐಟಂ!
Tunganagar police

Shivamogga  Apr 11, 2024 ಶಿವಮೊಗ್ಗ ನಗರದ ತುಂಗಾನಗರ ಪೊಲೀಸ್‌ ಸ್ಟೇಷನ್‌ ಲಿಮಿಟ್ಸ್‌ನಲ್ಲಿ ಬರುವ ಕಾಮತ್‌ ಲೇಔಟ್‌ನಲ್ಲಿ  ಗಾಂಜಾ ಮಾರುತ್ತಿದ್ದವರನ್ನ ಪೊಲೀಸರು ರೇಡ್‌ ನಡೆಸಿ ಅರೆಸ್ಟ್‌ ಮಾಡಿದ್ದಾರೆ. 

ಖಾಲಿ ಜಾಗದಲ್ಲಿ  ಆಟೋ ಒಂದನ್ನು ನಿಲ್ಲಿಸಿಕೊಂಡು, ಸಾರ್ವಜನಿಕರಿಗೆ ಗಾಂಜಾವನ್ನು ಮಾರಾಟ ಮಾಡುತ್ತಿರುವ ಬಗ್ಗೆ  ತುಂಗಾನಗರ ಪೊಲೀಸರಿಗೆ ದೂರು ಬಂದಿದೆ. ಈ ಹಿನ್ನೆಲೆಯಲ್ಲಿ ರೇಡ್‌ ನಡೆಸಿದ್ಧಾರೆ. 

ದಾಳಿ ವೇಳೆ ಆರೋಪಿ ಸಮೀರ @ ಸಯ್ಯದ್‌ ಸಮೀರ 23 ವರ್ಷ ಶ್ರೀರಾಮನಗರ ಗೋಪಾಳ ಶಿವಮೊಗ್ಗ ಟೌನ್ ಈತನನ್ನು ವಶಕ್ಕೆ ಪಡೆದು ಅಂದಾಜು ಮೌಲ್ಯ 10,000 /- ರೂ ಗಳ 250 ಗ್ರಾಂ ಒಣ ಗಾಂಜಾ, ರೂ 400 ನಗದು ಹಣ ಮತ್ತು ಕೃತ್ಯಕ್ಕೆ ಬಳಸಿದ ಆಟೋವನ್ನು  ಅಮಾನತುಪಡಿಸಿಕೊಳ್ಳಲಾಗಿದೆ. 

ಇನ್ನೂ ಆರೋಪಿತನ ವಿರುದ್ಧ ತುಂಗಾನಗರ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ  0170/2024 ಕಲಂ 20 (ಬಿ) 8 (ಸಿ) NDPS ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ