ಪೊಲೀಸ್‌ ರೇಡ್‌ ,7 ಮಂದಿ ಅರೆಸ್ಟ್‌ | ಪುರದಾಳು ಚಾನಲ್‌ ಬಳಿ ಮಾಲು ಸಮೇತ ಸಿಕ್ಕಿಬಿದ್ದ ಆರೋಪಿ

Police raid in Hosanagar, 7 arrested | The accused was caught with a garland near Puradalu channel.

ಪೊಲೀಸ್‌ ರೇಡ್‌ ,7 ಮಂದಿ ಅರೆಸ್ಟ್‌  |  ಪುರದಾಳು ಚಾನಲ್‌ ಬಳಿ ಮಾಲು ಸಮೇತ ಸಿಕ್ಕಿಬಿದ್ದ ಆರೋಪಿ
Police raid in Hosanagar, Puradalu channel

Shivamogga  Apr 11, 2024  ಚುನಾವಣೆ ನಡುವೆ ಅಕ್ರಮ ಇಸ್ಪೀಟ್‌ ಆಟದ ವಿರುದ್ಧ ಪೊಲೀಸರು ಮುಗಿಬಿದ್ದಿದ್ದಾರೆ. ಈ ಸಂಬಂಧ  ಹೊಸನಗರ ಪೊಲೀಸ್ ಸ್ಟೇಷನ್  ವ್ಯಾಪ್ತಿಯ ಗೇರುಪುರ ಗ್ರಾಮದಲ್ಲಿ ಅಕ್ರಮವಾಗಿ ಹಣವನ್ನು ಪಣವಾಗಿಟ್ಟು ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿರುವವರ ಮೇಲೆ ಪೊಲೀಸರು ರೇಡ್‌ ನಡೆಸಿದ್ದಾರೆ.  

ಈ ಸಂಬಂಧ ಗುರಣ್ಣ ಹೆಬ್ಬಾರ್ ಸರ್ಕಲ್ ಪೊಲೀಸ್ ಇನ್ಸ್‌ಪೆಕ್ಟರ್, ಹೊಸನಗರ ವೃತ್ತ ರವರ ಮೇಲ್ವಿಚಾರಣೆಯಲ್ಲಿ ರಾಜು ರೆಡ್ಡಿ ಬೆನ್ನೂರು, ಪಿ.ಎಸ್.ಐ ಹೊಸನಗರ ಪೊಲೀಸ್ ಠಾಣೆ ರವರ ನೇತೃತ್ವದ ಸಿಬ್ಬಂದಿಗಳ ತಂಡ ದಾಳಿ ನಡೆಸಿ  07 ಜನ ಆರೋಪಿತರನ್ನು ದಸ್ತಗಿರಿ ಮಾಡಿದೆ

ಅಲ್ಲದೆ   ಜೂಜಾಟದಲ್ಲಿ ಪಣವಾಗಿಟ್ಟಿದ್ದ ಒಟ್ಟು 25,660/- ರೂ ನಗದು ಹಣ ಮತ್ತು ಇಸ್ಪೀಟ್ ಎಲೆಗಳನ್ನು ಅಮಾನತುಪಡಿಸಿಕೊಂಡಿದೆ.  

ಪುರದಾಳು ಚಾನಲ್‌ ಹತ್ತಿರ ಗಾಂಜಾ ಮಾರಾಟ 

ಇನ್ನು  ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗಾಡಿಕೊಪ್ಪ ಗ್ರಾಮದಿಂದ ಪುರುದಾಳು ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಇರುವ ಚಾನಲ್ ಹತ್ತಿರ  ತುಂಗಾನಗರ ಪೊಲೀಸ್‌ ಸ್ಟೇಷನ್‌ ಅಧಿಕಾರಿಗಳ ತಂಡ ದಾಳಿ ನಡೆಸಿ ಗಾಂಜಾ ಮಾರುತ್ತಿದ್ದವನನ್ನ ವಶಕ್ಕೆ ಪಡೆದಿದೆ. 

ಕಿರಣ್ ಕುಮಾರ್,  30 ವರ್ಷ, ಕಲ್ಲಹಳ್ಳಿ ಹುಡ್ಕೋ ಶಿವಮೊಗ್ಗ ಈತನನ್ನು ವಶಕ್ಕೆ ಪಡೆದು ಅಂದಾಜು ಮೌಲ್ಯ 15,000/- ರೂ ಗಳ 400 ಗ್ರಾಂ ತೂಕದ ಒಣ ಗಾಂಜಾ ಮತ್ತು ರೂ 950/- ನಗದು ಹಣವನ್ನು  ಅಮಾನತುಪಡಿಸಿಕೊಳ್ಳಲಾಗಿದೆ. 

ಇನ್ನೂ ಆರೋಪಿ ಕಿರಣ್ ಕುಮಾರ್, ಕಲ್ಲಹಳ್ಳಿ ಹುಡ್ಕೋ, ಶಿವಮೊಗ್ಗ ಈತನ ವಿರುದ್ಧ ತುಂಗಾನಗರ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ  0165/2024 ಕಲಂ 20 (ಬಿಚNDPS ಕಾಯ್ದೆ  ಅಡಿ ಕೇಸ್‌ ದಾಖಲಿಸಲಾಗಿದೆ