ನುಗ್ಗೆಕಾಯಿ ಕಿರಿಕ್​, ಉಣುಗೋಲಿನಿಂದ ಹಲ್ಲೆ! ಕರೆಂಟ್ ಲೈನ್ ಕೇಳಲು ಬಂದವ ದೊಣ್ಣೆಯಿಂದ ಹಲ್ಲೆ! ಕ್ರೈಂ ನ್ಯೂಸ್​

ಹಂಚಿಕೊಳ್ಳಿ
WhatsApp Facebook X Telegram

MALENADUTODAY.COM | SHIVAMOGGA  | #KANNADANEWSWEB

ನುಗ್ಗೆಕಾಯಿ ಕಿತ್ತಿರೋ ವಿಚಾರಕ್ಕೆ ಕಿರಿಕ್

ಶಿವಮೊಗ್ಗ ಜಿಲ್ಲೆ ಹೊಸನಗರ (Hosanagara) ತಾಲ್ಲೂಕಿನ ಗ್ರಾಮವೊಂದರಲ್ಲಿ ನುಗ್ಗೆಕಾಯಿ ವಿಚಾರಕ್ಕೆ  ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ ಘಟನೆಯೊಂದು ನಡೆದಿದೆ. ಮೊನ್ನೆ ಸಂಜೆ ಈ ಘಟನೆ ಸಂಭವಿಸಿದೆ. ಇಲ್ಲಿನ ಗ್ರಾಮವೊಂದರ ನಿವಾಸಿ ಒಬ್ಬರು ರಿಪ್ಪನ್​ಪೇಟೆಗೆ ಹೋಗಿ ವಾಪಸ್​ ಮನೆಗೆ ಬರುವಾಗ, ಅದೇ ಗ್ರಾಮದ ನಿವಾಸಿ, ಮನೆ ಹಿತ್ತಲಿನಲ್ಲಿ  ಬೆಳೆದಿದ್ದ ನುಗ್ಗೆಕಾಯಿಯನ್ನು ಕೀಳುತ್ತಿರುವುದು ಕಾಣಿಸಿದೆ. ಸಹಜವಾಗಿಯೇ ನಮ್ಮನೆಯ ಹಿತ್ಲಿಂದ ಯಾಕೆ ನುಗ್ಗೆಕಾಯಿ ಕಿತ್ಕೊಂಡು ಹೋಗ್ತಿದ್ದಿಯಾ, ಹೇಳೋದು ಕೇಳೋದು ಏನು ಇಲ್ವಾ ಎಂದು ಪ್ರಶ್ನಿಸಿದ್ದಾರೆ . 

ಇಷ್ಟಕ್ಕೆ ಸಿಟ್ಟಾದ ವ್ಯಕ್ತಿ  ಅದು ನಿನ್ನ ಅಪ್ಪಂದಾ ಮರ,  ಅಂತಾ ಅವಾಚ್ಯವಾಗಿ ಬೈದು  ಉಣುಗೋಲಿನ ಗೂಟ ಕಿತ್ತು ಹಲ್ಲೆ ಮಾಡಿದ್ದಾರೆ. ಇದೇ ವೇಳೆ, ನುಗ್ಗೆಕಾಯಿ ಕಿತ್ತ ವ್ಯಕ್ತಿಯ ತಮ್ಮನು ಸಹಯ ಬಂದು ಹಲ್ಲೆ ಮಾಡಿದ್ದಾನೆ. ಬಳಿಕ ಸ್ಥಳೀಯರು ಕೂಗಾಟ ಕೇಳಿ ಬಂದು ಜಗಳ ಬಿಡಿಸಿದ್ದಾರೆ. ಈ ವೇಳೆ ಜೀವ ಬೆದರಿಕೆ ಹಾಕಿ ಅಲ್ಲಿಂದ ಆರೋಪಿಗಳು ತೆರಳಿದ್ದಾರೆ ಎಂದು ದೂರಲಾಗಿದೆ. 

ಕರೆಂಟ್ ಲೈನ್​ ಕೇಳಲು ಬಂದ ಅಣ್ಣನ ಮಗ ದೊಣ್ಣೆಯಿಂದ ಹಲ್ಲೆ ಮಾಡಿದ್ರು. 

ಇನ್ನೂ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ (thirthahalli) ತಾಲ್ಲೂಕಿನ ಪೊಲೀಸ್ ಸ್ಟೇಷನ್​ ವ್ಯಾಪ್ತಿಯಲ್ಲಿ ಕರೆಂಟ್ ಲೈನ್ ಫ್ರೀಯಾಗಿ ಕೊಡುವಂತೆ ಕೇಳಲು ಬಂದವರು ದೊಣ್ಣೆಯಿಂದ ಹೊಡೆದು ಹಲ್ಲೆ ಮಾಡಿದ ಘಟನೆಯೊಂದು ಎಫ್ಐಆರ್ ಆಗಿದೆ. 

ಇಲ್ಲಿನ ನಿವಾಸಿಯೊಬ್ಬರು ತಮ್ಮ ಜಮೀನಿನಲ್ಲಿ ಉಳುಮೆ ಮಾಡಲು, 15 ವರ್ಷಗಳ ಹಿಂದೆ ಕರೆಂಟ್ ಲೈನ್ ಅಳವಡಿಸಿ ಮೋಟಾರ್‌ ಹಾಕಿಕೊಂಡು ತನ್ನ ಹಣದಿಂದಲೇ ವಿದ್ಯುತ್‌ ಬೋರ್ಡ್ ನ್ನು ಹಾಕಿಸಿಕೊಂಡಿದ್ದರಂತೆ. ಈ ಮಧ್ಯೆ  ಅಣ್ಣನ ಮಗ, 3 ಜನರೊಂದಿಗೆ ಬಂದು, ನಿಮ್ಮ ವಿದ್ಯುತ್‌ ಬೋರ್ಡ್ ನಿಂದ ನಮ್ಮ ಮನೆಗೆ ನೀರು ಬಳಸಲು ಕರೆಂಟ್​ ಲೈನ್ ಕೊಡಿ ಎಂದು ಕೇಳಿದ್ಧಾನೆ. ಈ ವೇಳೆ ಗಲಾಟೆ ನಡೆದಿದೆ. ಆಗ ಅಣ್ಣನ ಮಗ ದೊಣ್ಣೆಯಿಂದ ಹೊಡೆದು ಗಾಯಗೊಳಿಸಿದ್ದು, ಈ ಸಂಬಂಧ ದೂರು ದಾಖಲಾಗಿದೆ. 

ನುಗ್ಗೆಕಾಯಿ ಕಿರಿಕ್​, ಉಣುಗೋಲಿನಿಂದ ಹಲ್ಲೆ! ಕರೆಂಟ್ ಲೈನ್ ಕೇಳಲು ಬಂದವ ದೊಣ್ಣೆಯಿಂದ ಹಲ್ಲೆ! ಕ್ರೈಂ ನ್ಯೂಸ್​

READ | BREAKING : ಮತ್ತೊಂದು ದರೋಡೆ ಯತ್ನವನ್ನು ತಡೆದ ಶಿವಮೊಗ್ಗ ಪೊಲೀಸ್! ನಾಲ್ವರ ಬಂಧನ !

 

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor