ಹೊಸನಗರ ಪೊಲೀಸ್ ಸ್ಟೇಷನ್​ ಲಿಮಿಟ್ಸ್​ನಲ್ಲೊಂದು ಪ್ರೀತಿ, ಮದುವೆ & ಆತ್ಮಹತ್ಯೆ ಯತ್ನ ಪ್ರಕರಣ!

A case of love, marriage and attempt to suicide has been registered at Hosanagar police station limits

ಹೊಸನಗರ ಪೊಲೀಸ್ ಸ್ಟೇಷನ್​ ಲಿಮಿಟ್ಸ್​ನಲ್ಲೊಂದು ಪ್ರೀತಿ, ಮದುವೆ & ಆತ್ಮಹತ್ಯೆ ಯತ್ನ ಪ್ರಕರಣ!
police Station

SHIVAMOGGA NEWS / Malenadu today/ Nov 27, 2023 | Malenadutoday.com  

HOSANAGARA  |   ಪ್ರೀತಿಸಿದ ಯುವತಿಯೊಬ್ಬಳು ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹೊಸನಗರ ತಾಲ್ಲೂಕಲ್ಲಿ ನಡೆದಿದೆ. ತಾಲ್ಲೂಕಿನ ಗ್ರಾಮವೊಂದರ ನಿವಾಸಿಯಾದ ಯುವತಿ ಆತ್ಮಹತ್ಯೆಗೆ ಯತ್ನಿಸಲು ಆಕೆಯ ಪ್ರಿಯಕರನೇ ಕಾರಣ ಎಂದು ಆರೋಪಿಸಲಾಗಿದೆ. 

ಹೊಸನಗರ ತಾಲ್ಲೂಕು

ಹೊಸನಗರ ತಾಲ್ಲೂಕಿನ ಯುವತಿ ಸುಮಿ (ಹೆಸರು ಬದಲಾಯಿಸಲಾಗಿದೆ) ಎಂಬಾಕೆ ಆತ್ಮಹತ್ಯೆಗೆ ಯತ್ನಿಸಿದ ಯುವತಿ. ಈಕೆಯ ಇಲ್ಲಿನ ಶ್ರೀಕಾರ (ಹೆಸರು ಬದಲಿಸಿದೆ) ಎಂಬವರನ್ನ ಆರುವರ್ಷಗಳಿಂದ ಪ್ರೀತಿಸುತ್ತಿದ್ದಳಂತೆ. ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದಷ್ಟೆ ಅಲ್ಲದೆ ದೈಹಿಕ ಸಂಬಂಧ ಹೊಂದಿದ್ದರಂತೆ.ಆರು ವರ್ಷಗಳ ನಂತರ ಶ್ರೀಕಾರ ಯುವತಿಯನ್ನು ಮದುವೆಯಾಗಲು ನಿರಾಕರಿಸಿದ್ದಾನೆ. 

READ :ಕಾರು ಟಚ್​ ಮಾಡಿದ್ದನ್ನ ಪ್ರಶ್ನೆ ಮಾಡಿದ್ದಕ್ಕೆ ಕಿರಿಕ್ ! ಬಿತ್ತು ಇಟ್ಟಿಗೆಯಿಂದ ಏಟು!

ಹೊಸನಗರ ಪೊಲೀಸ್ ಸ್ಟೇಷನ್

ಈ ಸಂಬಂಧ ಎರಡು ಮನೆಯಲ್ಲಿ ಬಹಳಷ್ಟು ಚರ್ಚೆಗಳು ಆಗಿವೆ. ಅಲ್ಲದೆ ಮಹಿಳಾ ಸಾಂತ್ವನ ಕೇಂದ್ರಕ್ಕೆ ಯುವತಿ ದೂರು ನೀಡಿದ್ದಾಳೆ. ಆ ಕಡೆಯಿಂದ ಸಾಂತ್ವನ ಕೇಂದ್ರದವರು ಎರಡು ಕಡೆಯವರನ್ನುನ ಕರೆಯಿಸಿ ಸಂಧಾನ ಮಾಡಲು ಯತ್ನಿಸಿದ್ದಾರೆ. ಈ ವೇಳೆ ಹುಡುಗನ ಕಡೆಯವರು ಯುವತಿಯನ್ನ ನಿಂಧಿಸಿ ತೆರಳಿದ್ದಾರೆ ಎನ್ನಲಾಗಿದೆ. 

ಇದೇ ನೋವಿನಲ್ಲಿ ಯುವತಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಸದ್ಯ ಆಕೆಯ ಸ್ಟೇಟ್ಮೆಂಟ್​ನೊಂದಿಗೆ ಹೊಸನಗರ ಪೊಲೀಸರು ಎಫ್ಐಆರ್ ದಾಖಲಿಸಿದ್ದು, ಪ್ರಕರಣದ ತನಿಖೆ ನಡೆಸ್ತಿದ್ದಾರೆ