ಪೋಕ್ಸೋ ಕೇಸ್​ನಲ್ಲಿ ಜೈಲಿಗೆ ಹೋಗಿಬಂದವನಿಂದ , ಎರಡನೇ ಸಲ ಮಗುವಿನ ಜನ್ಮ ನೀಡಿದ ಅಪ್ತಾಪ್ತೆ! ದಾಖಲಾಯ್ತು ಕೇಸ್​!

Harassment by jailed man in POCSO case , Minor gives birth to baby for the second time! The case has been registered!

ಪೋಕ್ಸೋ ಕೇಸ್​ನಲ್ಲಿ ಜೈಲಿಗೆ ಹೋಗಿಬಂದವನಿಂದ , ಎರಡನೇ ಸಲ ಮಗುವಿನ ಜನ್ಮ ನೀಡಿದ ಅಪ್ತಾಪ್ತೆ! ದಾಖಲಾಯ್ತು ಕೇಸ್​!
ಪೋಕ್ಸೋ ಕೇಸ್​ನಲ್ಲಿ ಜೈಲಿಗೆ ಹೋಗಿಬಂದವನಿಂದ , ಎರಡನೇ ಸಲ ಮಗುವಿನ ಜನ್ಮ ನೀಡಿದ ಅಪ್ತಾಪ್ತೆ! ದಾಖಲಾಯ್ತು ಕೇಸ್​!

MALENADUTODAY.COM  |SHIVAMOGGA| #KANNADANEWSWEB

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನಲ್ಲಿ ಮತ್ತೊಂದು ಪೋಕ್ಸೋ ಕೇಸ್ ದಾಖಲಾಗಿದೆ. ಇಲ್ಲಿನ ಪೊಲೀಸ್ ಸ್ಟೇಷನ್​ ಒಂದರ ಲಿಮಿಟ್​ನಲ್ಲಿ, ಈ ಹಿಂದೆ ಪೋಕ್ಸೋ ಕೇಸ್​ನಲ್ಲಿ ಜೈಲು ಶಿಕ್ಷೆ ಅನುಭವಿಸಿ ಬಂದಿದ್ದ ಯುವಕ ಮತ್ತದೆ ಬಾಲಕಿಗೆ ಕಿರುಕುಳ ನೀಡಿದ ಆರೋಪ ಎದುರಿಸ್ತಿದ್ದಾನೆ. 

*ಬ್ಯಾಲೆನ್ಸ್​ ತಪ್ಪಿ ಸ್ಕಿಡ್ಡಾದ ಸ್ಕೂಟಿ, ತೀರ್ಥಹಳ್ಳಿ ದಂಪತಿ ಮೇಲೆ ಹರಿದ ಟ್ಯಾಂಕರ್! ಭೀಕರ ಆಕ್ಸಿಡೆಂಟ್*

ಬಾಲಕಿಯೊಬ್ಬಳನ್ನು ಪುಸಲಾಯಿಸಿ, ಆಕೆಯ ಮೇಲೆ ಲೈಂಗಿಕ ಕಿರುಕುಳ ನೀಡಿದ್ದ ಯುವಕ ಮಗುವೊಂದರ ಜನ್ಮಕ್ಕೂ ಕಾರಣವಾಗಿದ್ದ. ಆ ಸಂದರ್ಭದಲ್ಲಿ ಮಗುವನ್ನು ಸರ್ಕಾರಿ ದತ್ತುಕೇಂದ್ರಕ್ಕೆ ಕೊಟ್ಟು, ಬಾಲಕಿ ಮತ್ತೆ ಮನೆಗೆ ಬಂದಿದ್ದಳು, ಅಲ್ಲಿವರೆಗೂ ಜೈಲಿನಲ್ಲಿದ್ದ ಯುವಕ ಬಳಿಕ ಪ್ರಕರಣ ರಾಜಿಮಾಡಿಕೊಂಡು ಆಚೆ ಬಂದಿದ್ದ.

*ಬೈಕ್​ ಸವಾರನ ಜೀವ ತೆಗೆದ ಕೆಎಸ್​ಆರ್​ಟಿಸಿ ಬಸ್​! ನಡೆದಿದ್ದೇನು?*

ಹೀಗೆ ಬಂದ ಯುವಕ  ನಂತರ ಸಂತ್ರಸ್ತ ಬಾಲಕಿಯೊಂದಿಗೆ ಈತ ಪುನಃ ಸಂಪರ್ಕ ಬೆಳೆಸಿದ್ದಾನೆ. ಅಲ್ಲದೆ  ಬಾಲಕಿಯ ಮನೆಗೆ ಪದೇ ಪದೇ ಬರುತ್ತಿದ್ದ. ಈ ನಡುವೆ  ನಿನ್ನನ್ನು ಮದುವೆಯಾಗುತ್ತೇನೆಂದು ಪುಸಲಾಯಿಸಿ ಬಾಲಕಿಯನ್ನು ಕರೆದುಕೊಂಡು ಹೋಗಿ, ನೆರೆ ಜಿಲ್ಲೆಯ ದೇವಾಲಯದಲ್ಲಿ ಮದುವೆಯಾಗಿದ್ಧಾನೆ.

*ಹಳ್ಳಕ್ಕೆ ಬಿದ್ದ ಒಮಿನಿ , ಭದ್ರಾವತಿಯ ನಾಲ್ವರಿಗೆ ಗಾಯ! ಘಟನೆ ವಿವರ ಇಲ್ಲಿದೆ*

ಆನಂತರ ಮತ್ತೆ ಆಕೆಯ ಜೊತೆಗೆ ದೈಹಿಕ ಸಂಪರ್ಕ ಹೊಂದಿದ್ದ. ಇದೀಗ  ಮತ್ತೆ ಆಕೆ ಇನ್ನೊಂದು ಮಗುವಿಗೆ ಜನ್ಮ ನೀಡಿದ್ದು, ಈ ಸಂಬಂಧ ಯುವಕನ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿದೆ.