ಲೈಟ್ ಕಂಬ, ಪಂಪ್ ಹೌಸ್ಗೆ ಡಿಕ್ಕಿಯಾಗಿ ಪಲ್ಟಿಯಾದ ಕಾರು
Car overturns after hitting light pole, pump house
SHIVAMOGGA | Jan 12, 2024 | ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ರಿಪ್ಪನ್ಪೇಟೆ ಸಮೀಪ ನಿನ್ನೆ ರಾತ್ರಿ ಕಾರೊಂದು ಅಪಘಾತಕ್ಕೀಡಾಗಿದೆ. ಇಲ್ಲಿನ ಹೊಸನಗರ ರಸ್ತೆಯಲ್ಲಿ ಘಟನೆ ಸಂಭವಿಸಿದೆ.
ಡ್ರೈವರ್ ಕಂಟ್ರೋಲ್ ತಪ್ಪಿದ ಕಾರು ನೇರವಾಗಿ ರಸ್ತೆಪಕ್ಕದ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದ್ದಷ್ಟೆ ಅಲ್ಲದೆ ಕುಡಿಯುವ ನೀರು ಪೂರೈಕೆಯ ಪಂಪ್ ಹೌಸ್ಗೆ ಗುದ್ದಿ ಬಳಿಕ ಒಂದು ಪಲ್ಟಿಯಾಗಿದೆ. ಒಂದು ಸೈಡ್ ವಾಲಿ ನಿಂತ ಕಾರಿನಲ್ಲಿ ಚಾಲಕನಿಗೆ ಪೆಟ್ಟಾಗಿದ್ದು ಪ್ರಾಣಾಪಾಯದಿಂದ ಬಚಾವ್ ಆಗಿದ್ದಾನೆ.
ಇನ್ನೂ ಘಟನೆ ಹೇಗೆ ನಡೀತು ಅನ್ನೋದನ್ನ ಹೇಳುವುದಾಯ್ತು ಅಂದರೆ, ರಾತ್ರಿ ಹೊಸನಗರ ಕಡೆಗೆ ಹೋಗುತ್ತಿದ್ದ ಮಾರುತಿ ಸ್ವಿಫ್ಟ್ ಕಾರು ಅದಾಗಿತ್ತು. ತಾವರೆಕೆರೆ ಹತ್ರ ಕಾರು ಕಂಟ್ರೋಲ್ ತಪ್ಪಿದೆ. ಅಡ್ಡಾದಿಡ್ಡಿ ಚಲಿಸಿದ ಕಾರು, ಲೈಟ್ ಕಂಬಕ್ಕೆ ಮೊದ್ಲು ಗುದ್ದಿದೆ. ಆನಂತರ ಪಂಪ್ ಹೌಸ್ಗೆ ಡಿಕ್ಕಿಯಾಗಿದೆ. ಆಮೇಲೆ ಪಲ್ಟಿಯಾಗಿ ರಸ್ತೆ ಬದಿಗೆ ಬಿದ್ದಿದೆ.
ಅದೃಷ್ಟ ಚೆನ್ನಾಗಿತ್ತು ಡಿಕ್ಕಿಯಾದ ರಭಸಕ್ಕೆ ಕರೆಂಟ್ ಹೋಗಿದೆ. ಹಾಗಾಗಿ ಯಾವುದೇ ಅಪಾಯ ಆಗ್ಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.