ಟ್ಯಾಂಕರ್​ ಹಾಗೂ ರಾಯಲ್ ಎನ್​ ಫೀಲ್ಡ್ ಬೈಕ್​ ನಡುವೆ ಡಿಕ್ಕಿ! ನಡೆದಿದ್ದೇನು?

A collision occurred between a tanker and a Royal Enfield bike in Hosnagar taluk of Shimoga districtಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನಲ್ಲಿ ಟ್ಯಾಂಕರ್ ಹಾಗೂ ರಾಯಲ್ ಎನ್​ಫೀಲ್ಡ್ ಬೈಕ್​ ನಡುವೆ ಡಿಕ್ಕಿಯಾಗಿದೆ

ಟ್ಯಾಂಕರ್​ ಹಾಗೂ ರಾಯಲ್ ಎನ್​ ಫೀಲ್ಡ್ ಬೈಕ್​ ನಡುವೆ ಡಿಕ್ಕಿ! ನಡೆದಿದ್ದೇನು?

KARNATAKA NEWS/ ONLINE / Malenadu today/ Sep 10, 2023 SHIVAMOGGA NEWS ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ಪಟ್ಟಣದ ಕೆಇಬಿ ಕಚೇರಿ ಸಮೀಪ ಅಪಘಾತವೊಂದು ಸಂಭವಿಸಿದೆ. ಟ್ಯಾಂಕರ್ ಹಾಗೂ ಬುಲೆಟ್ ಬೈಕ್​ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ. 

ಮಂಗಳೂರು ಕಡೆಯಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಟ್ಯಾಂಕರ್ ಗಾಡಿ, ತೆಂಕ್​ಬೈಲ್​ ಕಡೆಗೆ ಹೋಗುತ್ತಿದ್ದ ರಾಯಲ್ ಎನ್​ ಫೀಲ್ಡ್ ಬೈಕ್​ ನಡುವೆ ಕಳೆದ ಶುಕ್ರವಾರ ರಾತ್ರಿ ಎಂಟು ಗಂಟೆ ಸುಮಾರಿಗೆ  ಡಿಕ್ಕಿ ಸಂಭವಿಸಿತ್ತು. ಘಟನೆಗೆ ಕಾರಣ ಸ್ಪಷ್ಟವಾಗಿಲ್ಲ. ಘಟನೆಯಲ್ಲಿ ಬೈಕ್​ನಲ್ಲಿದ್ದ ಇಬ್ಬರು ಸವಾರರ ಕಾಲಿಗೆ ಬಲವಾಡ ಏಟು ಬಿದ್ದಿದೆ. 

ವಿಷಯ ತಿಳಿಯುತ್ತಲೇ ಸ್ಥಳದಲ್ಲಿದ್ದ ಜನರು ಗಾಯಾಳುಗಳನ್ನು ಹೊಸನಗರ ಸರ್ಕಾರಿ ಆಸ್ಪತ್ರೆಗೆ ರವಾನಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ಅಲ್ಲಿಂದ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಿ ಹೆಚ್ಚಿನ ಟ್ರೀಟ್ಮೆಂಟ್ ನೀಡಲಾಗ್ತಿದೆ 


ಇನ್ನಷ್ಟು ಸುದ್ದಿಗಳು