ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸ್ತೀವಿ ಎಂದು ಮೂವರಿಗೆ ವಂಚನೆ! ಮಹಿಳೆ ಸೇರಿ ಇಬ್ಬರ ವಿರುದ್ಧ ಕೇಸ್!

Three duped by promising them jobs in railways A case has been registered against two persons, including a woman. ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸ್ತೀವಿ ಎಂದು ಮೂವರಿಗೆ ವಂಚನೆ! ಮಹಿಳೆ ಸೇರಿ ಇಬ್ಬರ ವಿರುದ್ಧ ಕೇಸ್!

ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸ್ತೀವಿ ಎಂದು ಮೂವರಿಗೆ ವಂಚನೆ! ಮಹಿಳೆ ಸೇರಿ ಇಬ್ಬರ ವಿರುದ್ಧ ಕೇಸ್!

KARNATAKA NEWS/ ONLINE / Malenadu today/ Aug 30, 2023 SHIVAMOGGA NEWS  

ಕೆಲಸ ಕೊಡಿಸ್ತೀವಿ ಎಂದು ಮೂವರಿಗೆ ಮೋಸದ ಮಾಡಿದ ಮಹಿಳೆಯ ವಿರುದ್ಧ ರಿಪ್ಪನ್​ ಪೇಟೆ ಪೊಲೀಸ್ ಸ್ಟೇಷನ್​ನಲ್ಲಿ ಎಫ್ಐಆರ್ ದಾಖಲಾಗಿದೆ.  

ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ  ರಿಪ್ಪನಪೇಟೆಯ ಶ್ವೇತಾ ರಿಶಾಂತ್, ವಿಜಯಪುರದ ಪ್ರಶಾಂತ್ ದೇಶಪಾಂಡೆ ಎಂಬುವವರು ಮೋಸ ಮಾಡಿದ್ದಾರೆ ಎಂದು ಆರೋಪಿಸಿ ದೂರು ದಾಖಲಾಗಿದ್ದು, ದೂರಿನನ್ವಯ ಎಫ್ಐಆರ್ ದಾಖಲಾಗಿದೆ.  

ತೀರ್ಥಹಳ್ಳಿಯ ಅರ್ಜುನ್ ಟಿ.ಪಿ. ಎಂಬುವವರು  ಶಿವಮೊಗ್ಗ ಜಿಲ್ಲೆಯ ರಿಪ್ಪನ್‌ಪೇಟೆ ಠಾಣೆಯಲ್ಲಿ ಈ ಸಂಬಂಧ ದೂರು ನೀಡಿದ್ದಾರೆ.  ಅರ್ಜುನ್‌ಗೆ 4.02 ಲಕ್ಷ ರೂಪಾಯಿ ಹಾಗೂ  ಕೊಪ್ಪ ತಾಲೂಕಿನ ಆದರ್ಶ್‌ಗೆ 6.50 ಲಕ್ಷ ರೂಪಾಯಿ  ಶಿವಮೊಗ್ಗದ ನವೀನ್ ಎಂಬವರಿಗೆ  3,42,500 ರೂ ವಂಚಿಸಲಾಗಿದೆ ಎಂದು ಆರೋಪಿಸಲಾಗಿದೆ. 

ಅರ್ಜನ್​​ರವರ ಪತ್ನಿಗೆ ರೈಲ್ವೆ ಇಲಾಖೆಯಲ್ಲಿ ಹೆಚ್​ಆರ್​ ಕೆಲಸ ಕೊಡಿಸುತ್ತೇವೆ ಎಂದು ಸುತ್ತಾಡಿಸಿದ ಆರೋಪಿಗಳು, ಹಲವು ಬಾರಿ ಅಕೌಂಟ್​ಗೆ ಹಣ ಹಾಕಿಸಿಕೊಂಡಿದ್ದಾರೆ. ಮೆಡಿಕಲ್ ಚೆಕಪ್​, ಪೊಲೀಸ್ ವೆರಿಫಿಕೇಷನ್ ಅದು ಇದು ಎಂದು ಕಾರಣ ಕೊಟ್ಟು, ಹಣ ಹಾಕಿಸಿಕೊಂಡ ಆರೋಪಿಗಳು ಆನಂತರ ಅವರ ಫೋನ್​ ರಿಸೀವ್ ಮಾಡದೇ ಹಣವನ್ನು ವಾಪಸ್ ಕೊಡದೆ ವಂಚಿಸಿದ್ದಾರೆ.ಇದೇ ರೀತಿಯಲ್ಲಿ ಇನ್ನಿಬ್ಬರಿಗೂ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. 

ಈ ಮಧ್ಯೆ ಆರೋಪಿಗಳನ್ನ ಹಣ ವಾಪಸ್ ಕೊಡುವಂತೆ ಕೇಳಿದರೆ, ಮಹಿಳೆ ದೂರುದಾರರ ಮೇಲೆಯೇ ರೇಪ್​ ಕೇಸ್ ಹಾಕುವುದಾಗಿ ಬೆದರಿಕೆಯನ್ನು ಹಾಕಿದ್ದಾರಂತೆ. ಈ ಬಗ್ಗೆಯು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸ್ತಿದ್ದಾರೆ.


ಇನ್ನಷ್ಟು ಸುದ್ದಿಗಳು