ಹೊಸನಗರ ತಾಲ್ಲೂಕಿನಲ್ಲಿ ರೈಲಿಗೆ ಮುತ್ತಿಗೆ ಹಾಕಲು ಯತ್ನ! ಕಾರಣವೇನು?

Attempt to lay siege to train in Hosanagara taluk! What is the reason?

ಹೊಸನಗರ ತಾಲ್ಲೂಕಿನಲ್ಲಿ ರೈಲಿಗೆ ಮುತ್ತಿಗೆ ಹಾಕಲು ಯತ್ನ! ಕಾರಣವೇನು?

KARNATAKA NEWS/ ONLINE / Malenadu today/ Jun 20, 2023 SHIVAMOGGA NEWS

ರಿಪ್ಪನ್‌ಪೇಟೆ : ಅನ್ನಭಾಗ್ಯ ಯೋಜನೆ ಜಾರಿಗೆ ಅಕ್ಕಿ ವಿತರಿಸದ ಕೇಂದ್ರ ಸರ್ಕಾರದ ವಿರುದ್ಧ ಪಟ್ಟಣದ ಸಮೀಪದ ಅರಸಾಳು ಮಾಲ್ಗುಡಿ ರೈಲ್ವೆ ನಿಲ್ದಾಣದಲ್ಲಿ ಹೊಸನಗರ ತಾಲೂಕ್ ಯುವ ಕಾಂಗ್ರೆಸ್  ಕಾರ್ಯಕರ್ತರು ರೈಲು ತಡೆದು ಪ್ರತಿಭಟಿಸಲು ಮುಂದಾಗಿದ್ದರು. ಈ ಸಂಬಂಧ ಅವರನ್ನ ಸ್ಟೇಷನ್​ ಗೇಟ್​ನಲ್ಲಿಯೇ ತಡೆದ ಪೊಲೀಸರು, ಕಾರ್ಯಕರ್ತರನ್ನು ವಶಕ್ಕೆ ಪಡೆದರು. 

 

ಇನ್ನೂ ಪ್ರತಿಭಟನೆಯಲ್ಲಿ ಮಾತನಾಡಿದ  ಮಾತನಾಡಿದ ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಮಹೇಂದ್ರ ಬುಕ್ಕಿವರೆ ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಹಾಗೂ ಭಾರತೀಯ ಆಹಾರ ಪ್ರಾಧಿಕಾರವು ಅಕ್ಕಿ ಖರೀದಿಗೆ ಅವಕಾಶ ನಿರಾಕರಿಸಿರುವುದು ಖಂಡನೀಯ. ಬಿಜೆಪಿ ದ್ವೇಷ ರಾಜಕಾರಣ ಸಾಧಿಸುತ್ತಾ, ಬಡವರ ವಿರೋಧಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತೀರ್ಥಹಳ್ಳಿ ವಿಭಾಗದ ಡಿವೈಎಸ್ ಪಿ ಗಜಾನನ ವಾಮನ ಮಾರ್ಗದರ್ಶನದಲ್ಲಿ ಹೊಸನಗರ ಸಿಪಿಐ ಗಿರೀಶ್ ಬಿ ಸಿ, ರಿಪ್ಪನ್‌ಪೇಟೆ ಪಿಎಸ್ ಐ ಪ್ರವೀಣ್ ಎಸ್ ಪಿ,ಹೊಸನಗರ ಪಿಎಸ್ ಐ ಶಿವಾನಂದ ಕೆ ರವರ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗಿತ್ತು.

 


ಬಾಲಕ ಓಡಿಸ್ತಿದ್ದ ನೀರಿನ ಟ್ರ್ಯಾಕ್ಟರ್ ಪಲ್ಟಿ! ನೀರು ಗಂಟಿ ಸ್ಥಳದಲ್ಲಿಯೇ ಸಾವು!?

 

ಹೊಸನಗರ ತಾಲೂಕಿನ ಬಿದನೂರಿನಲ್ಲಿ ಕುಡಿಯುವ ನೀರಿನ ಟ್ರ್ಯಾಕ್ಟರ್​ ಪಲ್ಟಿಯಾಗಿ, ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಮೃತರು ನೀರುಗಂಟಿಯಾಗಿ ಕೆಲಸ ಮಾಡುತ್ತಿದ್ದ ಬಿದನೂರು ನಗರದ ಚಿಕ್ಕಪೇಟೆ ನಿವಾಸಿ ತುಕಾರಾಮರವರು. ಅವರಿಗೆ 46 ವರ್ಷವಾಗಿತ್ತು. 

ರೇಷನ್​ ಅಕ್ಕಿ , ಬೇಳೆ , ಗೋದಿಗೆ ಕಾಯುತ್ತಿರುವವರಿಗೆ ಇಲ್ಲಿದೆ ಮಹತ್ವದ ಮಾಹಿತಿ ! ಜೂನ್​ 28 ರೊಳಗೆ ತೆಗೆದುಕೊಳ್ಳಬೇಕು ಪಡಿತರ? ಕಾರಣವೇನು?

 

ನಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದ್ದ ತುಕಾರಾಮ್​ರವರು ಬಿದನೂರು ಗ್ರಾಪಂ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ ಟ್ರ್ಯಾಕ್ಟರ್​ನಲ್ಲಿ ನೀರು ಪೂರೈಕೆ ಮಾಡಲು ತೆರಳಿದ್ದರು. ಟ್ರ್ಯಾಕ್ಟರ್​ನ್ನ ಅಪ್ರಾಪ್ತ ಬಾಲಕ ಚಲಾಯಿಸುತ್ತಿದ್ದ ಎಂಬ ಮಾಹಿತಿಯಿದೆ. ದಾರಿಮಧ್ಯೆ ಟ್ರ್ಯಾಕ್ಟರ್​ ಪಲ್ಟಿಯಾಗಿದೆ. ಇನ್ನೂ ಟ್ರ್ಯಾಕ್ಟರ್​ನ ಅಡಿಯಲ್ಲಿ ತುಕಾರಾಮ್​ ಸಿಲುಕಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಗುತ್ತಿಗೆದಾರ ಬಾಲಕನ ಕೈಯಲ್ಲಿ ಟ್ರ್ಯಾಕ್ಟರ್​ ಓಡಿಸಲು ಅವಕಾಶ ನೀಡಿದ್ದಕ್ಕೆ ಸ್ಥಳೀಯವಾಗಿ ಆಕ್ರೋಶ ಎದುರಾಗಿದೆ. 

 


ಭದ್ರಾವತಿ ಪೊಲೀಸರ ಕಾರ್ಯಾಚರಣೆ! ಗಾಂಜಾ ಜೊತೆಗೆ ಸಿಕ್ಕಿಬಿದ್ದ ಇಬ್ಬರು ಪೆಡ್ಲರ್ಸ್​

 

ಭದ್ರಾವತಿ  ಪೊಲೀಸರು ದಿಢೀರ್​ ಕಾರ್ಯಾಚರಣೆ ಕೈಗೊಂಡು  1 ಕೆ.ಜಿ 490 ಗ್ರಾಂ. ಒಣ ಗಾಂಜಾ ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಆಧಾರದ ಮೇರೆಗೆ ನಗರಸಭೆ ವ್ಯಾಪ್ತಿಯ ಜಟ್‌ಪಟ್ ನಗರದ ವೀರಶೈವ ರುದ್ರಭೂಮಿ ಬಳಿ ದಾಳಿ ನಡೆಸಿ ನಸ್ರುಲ್ಲಾ ಅಲಿಯಾಸ್ ನಸ್ರು(19) ಮತ್ತು ಸೈಫ್ ಆಲಿ ಖಾನ್(25) ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.

ಸರ್ಕಾರ ಅಸ್ತಿತ್ವಕ್ಕೆ ಬಂದು ತಿಂಗಳಾಗುವಷ್ಟರಲ್ಲಿಯೇ ಪ್ರತಿಭಟನೆಯ ಬಿಸಿ! ವಿದ್ಯುತ್ ದರ ಕಡಿಮೆ ಮಾಡದಿದ್ದರೇ ಹೋರಾಟ ಶುರು

 

ಬಂಧಿತರಿಂದ ಒಟ್ಟು ಸುಮಾರು 34,400 ರು. ಮೌಲ್ಯದ   1 ಕೆ.ಜಿ 490 ಗ್ರಾಂ ಒಣ ಗಾಂಜಾ ಹಾಗು700 ರು. ನಗದು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಹಳೇನಗರ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಠಾಣಾಧಿಕಾರಿ ಶರಣಪ್ಪ ನೇತೃತ್ವದ ತಂಡವನ್ನು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್‌ಕುಮಾರ್, ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಹಾಗು ಪೊಲೀಸ್ ಉಪಾಧೀಕ್ಷಕರು ಅಭಿನಂದಿಸಿದ್ದಾರೆ.