ತೀರ್ಥಹಳ್ಳಿ ದಸರಾ ಆಚರಣೆ ಮತ್ತು ಆನೆ ಸಮಾಚಾರ! ಯಾಕಿಷ್ಟು ಚರ್ಚೆ?
Tirthahalli Dussehra celebration and elephant news! Why talk?ತೀರ್ಥಹಳ್ಳಿ ದಸರಾ ಆಚರಣೆ ಮತ್ತು ಆನೆ ಸಮಾಚಾರ! ಯಾಕಿಷ್ಟು ಚರ್ಚೆ?

KARNATAKA NEWS/ ONLINE / Malenadu today/ Sep 10, 2023 SHIVAMOGGA NEWS
ಮೈಸೂರು ದಸರಾ ಆಚರಣೆಗೆ ಈಗಾಗಲೇ ಸಿದ್ಧತೆಗಳನ್ನ ಕೈಗೊಳ್ಳಲಾಗುತ್ತಿದ್ದು, ದಸರಾ ಸಂಭ್ರಮಕ್ಕೆ ಆನೆಗಳನ್ನು ಸಹ ಕರೆತರಲಾಗಿದೆ. ಇತ್ತ ಶಿವಮೊಗ್ಗದಲ್ಲಿ ನಡೆಯುವ ದಸರಾ ಆಚರಣೆಗೂ ಸಕ್ರೆಬೈಲ್ ಆನೆ ಬಿಡಾರದಿಂದ ಆನೆಗಳನ್ನು ಕರೆತರುವ ವಿಚಾರದ ಬಗ್ಗೆ ಈಗಾಗಲೇ ಸಿಎಂ ಸಿದ್ದರಾಮಯ್ಯರನ್ನೆ ಭೇಟಿಯಾಗಿ ಶಿವಮೊಗ್ಗ ಮಹಾನಗರ ಪಾಲಿಕೆ ಸದಸ್ಯರು ಮಾತುಕತೆ ನಡೆಸಿದ್ದಾರೆ. ಅದೇ ರೀತಿಯಲ್ಲಿ ತೀರ್ಥಹಳ್ಳಿ ದಸರಾಗೆ ಆನೆ ತರುವ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ತೀರ್ಥಹಳ್ಳಿಯಲ್ಲಿ ದಸರಾದಂದು ಆನೆಯನ್ನು ತಂದು ಜಂಬೂಸವಾರಿ ಮಾಡಿಸಬೇಕು. ಆ ದೃಶ್ಯವನ್ನ ಕಣ್ತುಂಬಿಕೊಳ್ಳಬೇಕು ಎಂಬುದು ಹಲವರ ಅಭಿಪ್ರಾಯ. ಬರೀ ಕಾಡಾನೆಗಳ ಕಾಟವನ್ನ ಕಂಡಿದ್ದೆ ಆಯ್ತು, ನಾಡಾನೆಯ ನಡಿಗೆಯನ್ನು ನೋಡಲು ಅವಕಾಶ ಕೊಡಿ ಎಂಬುದು ಇನ್ನೊಂದಿಷ್ಟು ಜನರ ಅಭಿಪ್ರಾಯ. ಆದರೆ ಎರಡು ವರ್ಷಗಳಿಂದ ಈ ಅಭಿಪ್ರಾಯಕ್ಕೆ ಮನ್ನಣೆ ಸಿಗುತ್ತಿಲ್ಲ ಎಂಬುದು ಆರೋಪ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಜೋರು ಚರ್ಚೆ ನಡೆಯುತ್ತಿದೆ.
ಫೇಸ್ಬುಕ್, ಇನ್ಸ್ಟಾಗ್ರಾಮ್ಗಳಲ್ಲಿ ತಮ್ಮದೇ ಅಭಿಪ್ರಾಯ ಮಂಡಿಸ್ತಿರುವ ತೀರ್ಥಹಳ್ಳಿ ಪ್ರಜೆಗಳು, ತಮ್ಮದೇ ಸ್ಟೈಲ್ನಲ್ಲಿ ವಿಚಾರವನ್ನು ವೈರಲ್, ಟ್ರೋಲ್ ಏರಡನ್ನು ಮಾಡುತ್ತಿದ್ದಾರೆ.
ಇನ್ನಷ್ಟು ಸುದ್ದಿಗಳು
-
ಬಾರ್ನಲ್ಲಿ ಎಣ್ಣೆ ಕೊಡ್ಲಿಲ್ಲ ಎಂದು ಸಿಬ್ಬಂದಿಯನ್ನ ಅಟ್ಟಾಡಿಸಿ ಹಲ್ಲೆ! ಬಿಹೆಚ್ ರೋಡ್ನಲ್ಲಿ ನಿನ್ನೆ ನಡೆದಿದ್ದೇನು?
-
ಸಚಿವರ ಶಾಕ್/ 48 ಗಂಟೆಯಲ್ಲಿ ಬದಲಾಯ್ತು ಶಿವಮೊಗ್ಗ AIRPORT ನಲ್ಲಿದ್ದ ಈ ವ್ಯವಸ್ಥೆ!