ಬಾರ್​ನಲ್ಲಿ ಎಣ್ಣೆ ಕೊಡ್ಲಿಲ್ಲ ಎಂದು ಸಿಬ್ಬಂದಿಯನ್ನ ಅಟ್ಟಾಡಿಸಿ ಹಲ್ಲೆ! ಬಿಹೆಚ್​ ರೋಡ್​ನಲ್ಲಿ ನಿನ್ನೆ ನಡೆದಿದ್ದೇನು?

Yesterday, youths attacked the bar staff at Blue Moon Bar on BH Road in Shimogaಶಿವಮೊಗ್ಗದ ಬಿಹೆಚ್ ರೋಡ್​ನಲ್ಲಿರುವ ಬ್ಲೂ ಮೂನ್ ಬಾರ್​ನಲ್ಲಿ ನಿನ್ನೆ ಯುವಕರು ಬಾರ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ

ಬಾರ್​ನಲ್ಲಿ ಎಣ್ಣೆ ಕೊಡ್ಲಿಲ್ಲ ಎಂದು  ಸಿಬ್ಬಂದಿಯನ್ನ ಅಟ್ಟಾಡಿಸಿ  ಹಲ್ಲೆ! ಬಿಹೆಚ್​ ರೋಡ್​ನಲ್ಲಿ ನಿನ್ನೆ ನಡೆದಿದ್ದೇನು?

KARNATAKA NEWS/ ONLINE / Malenadu today/ Sep 3, 2023 SHIVAMOGGA NEWS

ಬಾರ್ ಮುಚ್ಚುವ ಸಂದರ್ಭದಲ್ಲಿ ಬಂದು ಎಣ್ಣೆ ಕೊಟ್ಟಿಲ್ಲವೆಂದು ಬಾರ್​ ಸಿಬ್ಬಂದಿಗಳ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ಮಾಡಿದ ಘಟನೆ ನಿನ್ನೆ ಬಿಹೆಚ್ ರೋಡ್​ನಲ್ಲಿ ನಡೆದಿದೆ. ಬಿಹೆಚ್​ ರೋಡ್​ನಲ್ಲಿರುವ ಬ್ಲೂ ಮೂನ್ ಬಾರ್​ ನಲ್ಲಿ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ಇಬ್ಬರು ಬಾರ್ ಸಿಬ್ಬಂದಿಗೆ ಗಾಯವಾಗಿದೆ. 

 

ನಡೆದಿದ್ದೇನು!

ಬಾರ್​ ಕ್ಲೋಸ್​ ಪ್ರತಿನಿತ್ಯ 11.30 ಕ್ಕೆ ಆಗುತ್ತದೆ. ಆದರೆ ಬಾರ್​ ಆ್ಯಂಡ್ ರೆಸ್ಟೋರೆಂಟ್​ನವರು ತಲೆ ಬಿಸಿ ಬೇಡ ಎಂದು 11.10 ಕ್ಕೆಲ್ಲಾ ಮುಂದಿನ ಡೋರ್ ಕ್ಲೋಸ್ ಮಾಡಿ, ಒಳಗಿದ್ದವರನ್ನ ಹೊರಕ್ಕೆ ಕಳುಹಿಸುವ ಕೆಲಸದಲ್ಲಿ ತೊಡಗುತ್ತಾರೆ. ಇದು ಎಲ್ಲಾ ಬಾರ್​ ಗಳಲ್ಲಿಯು ಸಾಮಾನ್ಯ ಸಂಗತಿ. ಹೀಗೆ ಬ್ಲೂ ಮೂನ್​ನಲ್ಲಿಯು ಸಿಬ್ಬಂದಿ ಹೊರಗಡೆ ಡೋರ್ ಹಾಕಿದ್ದರು, ಬಳಿಕ ಒಳಗಿದ್ದ ಗ್ರಾಹಕರೊಬ್ಬರು ಒಳಗಡೆ ಹೋಗುವಾಗ ಡೋರ್ ಓಪನ್​ ಮಾಡಿದ್ದಾರೆ. ಆಗ ಕೆಲವು ಯುವಕರು ಒಳಗಡೆ ಬಂದು ಎಣ್ಣೆ ಕೇಳಿದ್ದಾರೆ. ಎಣ್ಣೆ ಇಲ್ಲ ಎಂದಿದ್ದಕ್ಕೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅಲ್ಲದೆ ರೋಡಿನಲ್ಲಿ ಅಟ್ಟಾಡಿಸಿ ಹಲ್ಲೆ ಮಾಡಿದ್ದಾರೆ. ಈ ವೇಳೆ ಒರ್ವ ಯುವಕನಿಗೆ ತೀವ್ರ ಪೆಟ್ಟಾಗಿದೆ.

 

ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸದ್ಯ ವಾಟ್ಸ್ಯಾಪ್​ಗಳಲ್ಲಿ ಹರಿದಾಡುತ್ತಿದೆ. ಈ ದೊಡ್ಡಪೇಟೆ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಘಟನೆ ಸಂಬಂಧ ಕಂಪ್ಲೆಂಟ್ ದಾಖಲಾಗಿಲ್ಲ. ಆದಾಗ್ಯು ಹಲ್ಲೆ ಮಾಡಿದ ಯುವಕರು ಯಾರು ಏನು ಎಂಬುದರ ವಿಚಾರಣೆ ನಡೆಯುತ್ತಿದೆ. ಪೊಲೀಸ್ ಮೂಲಗಳ ಪ್ರಕಾರ ಹಲ್ಲೆ ಮಾಡಿದವರ ಗುರುತು ಸಹ ಪತ್ತೆಯಾಗಿದ್ದು, ಹೆಚ್ಚಿನ ವಿಚಾರಣೆ ಇನ್ನಷ್ಟೆ ನಡೆಯಬೇಕಿದೆ. 

ಇನ್ನಷ್ಟು ಸುದ್ದಿಗಳು