ಅಂಗಿಯ ತೋಳು ಕತ್ತರಿಸಿದರೇ ಮನೆಗೆ ಹೋಗುವುದು ಹೇಗೆ!? ಹಳ್ಳಿ ಹೆಣ್ಣುಮಕ್ಕಳಿಗೆ ಕಣ್ಣೀರು ಹಾಕಿಸಿತಾ KEA ಪರೀಕ್ಷೆ ರೂಲ್ಸ್​

The examinees are struggling with the rules of the KEA examination centres, Shivamogga News, Malnad News,

ಅಂಗಿಯ ತೋಳು ಕತ್ತರಿಸಿದರೇ ಮನೆಗೆ ಹೋಗುವುದು ಹೇಗೆ!?  ಹಳ್ಳಿ ಹೆಣ್ಣುಮಕ್ಕಳಿಗೆ ಕಣ್ಣೀರು ಹಾಕಿಸಿತಾ  KEA ಪರೀಕ್ಷೆ ರೂಲ್ಸ್​

KARNATAKA NEWS / ONLINE / Malenadu today/ Nov 18, 2023 SHIVAMOGGA NEWS

 

Shivamogga |  Malnenadutoday.com |  ಚೂಡಿದಾರ ಹಾಕಿಕೊಂಡು ಬಂದ ವಿದ್ಯಾರ್ಥಿನಯರ ಕೈ ತೋಳಬಟ್ಟೆ ಹರಿದರು..ಬಂಗಾರ ಒಡವೆ ಕಿತ್ತುಕೊಂಡರು. ಮಾನಮುಚ್ಚುವ ವೇಲ್ ತೆಗೆದುಹಾಕಿದರು..ಸರ್ಕಾರ ನಡೆಸುವ ಪರೀಕ್ಷೆಯಲ್ಲಿ ವಿದ್ಯಾರ್ಥಿನಿಯರು ಮಾನ ಕಳೆದುಕೊಂಡು ಪರೀಕ್ಷೆ ಬರೆಯಬೇಕಾ? ಇವತ್ತು ಶಿವಮೊಗ್ಗದಲ್ಲಿ ವಿವಿಧ ನಿಗಮ ಮಂಡಳಿಗೆ ನಡೆದ ನೇಮಕಾತಿ ಪರೀಕ್ಷೆ ವೇಳೆ ಕೇಳಿ ಬಂದ ಪ್ರಶ್ನೆಗಳಿವು! 

 

ರಾಜ್ಯದಲ್ಲಿ ಇತ್ತಿಚ್ಚಿನ ವರ್ಷಗಳಲ್ಲಿ ಆದ ಪರೀಕ್ಷಾ ಅಕ್ರಮಗಳನ್ನು ತಡೆಗಟ್ಟಲು ಸರ್ಕಾರ ಕಟ್ಟುನಿಟ್ಟಿನ ಕ್ರಮವೇನೋ ಕೈಗೊಂಡಿದೆ. ಆದರೆ ಅದಕ್ಕೆ ಬೇಕಾದ ಪೂರಕ ಸಿದ್ದತೆಗಳನ್ನು ಮಾಡಿಕೊಂಡಿಲ್ಲ. ಮುಖ್ಯವಾಗಿ ಸರ್ಕಾರಿ ಉದ್ಯೋಗದ ಭರವಸೆಯಲ್ಲಿರುವ ಹೆಣ್ಣು ಮಕ್ಕಳು ಪರಿಕ್ಷಾ ಕೊಠಡಿಗೆ ಬರುವಷ್ಟರಲ್ಲಿ ನರಕ ಯಾತನೆ ಅನುಭವಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಶಿವಮೊಗ್ಗದಲ್ಲಿ ಇಂದು ನಡೆದ ಕೆ.ಇ. ಎ ಪರೀಕ್ಷೆಯಲ್ಲಿ ಹೆಣ್ಣು ಮಕ್ಕಳು ಪಡಬಾರದ ಅವಮಾನ ಎದುರಿಸಿದ್ದಾರೆ.  

READ : ಬಾನುಮತಿ ಬಾಲ ಕಡಿದವರು ಯಾರು!? ಅಮಾಯಕರಿಗೆ ಶಿಕ್ಷೆ ಆಗ್ತಿದ್ಯಾ? ಸಕ್ರೆಬೈಲ್ ಬಿಡಾರದ ಅಂದರ್ ಕೀ ಬಾತ್!

 

ಶಿವಮೊಗ್ಗದ ಕೆಲವು ಶಾಲೆಗಳಲ್ಲಿ ಕೆ.ಇ.ಎ ನಡೆಸಿದ ಪರೀಕ್ಷೆಯಲ್ಲಿ ಗ್ರಾಮೀಣ ಭಾಗದ ಸಾಕಷ್ಟು ಮಂದಿ ಪರೀಕ್ಷೆ ಬರೆಯಲು ಉತ್ಸಾಹದಿಂದ ಆಗಮಿಸಿದ್ದರು. ಪರೀಕ್ಷಾ ಪ್ರಾಥಿಕಾರ ಪರಿಕ್ಷಾ ಕೊಠಡಿ ತೆಗೆದುಕೊಳ್ಳಬೇಕಾದ ಕಠಿಣ ನಿಯಮಗಳನ್ನು ಮುಂಚಿತವಾಗಿ ಸೂಚಿಸಿದ್ದರೂ, ಕೆಲವು ಹೆಣ್ಣು ಮಕ್ಕಳು ಮೈತುಂಬಾ ಬಟ್ಟೆ ಧರಿಸಿಕೊಂಡು ಬಂದಿದ್ದರು. ಬಸವೇಶ್ವರ ಪ್ರೌಡಶಾಲೆಯ ಪರೀಕ್ಷಾ ಕೊಠಡಿಯಲ್ಲಿ  ಹೆಣ್ಣು ಮಕ್ಕಳನ್ನು ನಡೆಸಿಕೊಂಡ ರೀತಿ ಪರೀಕ್ಷೆ  ಬರೆಯಲು ಬಂದ ಹೆಣ್ಣುಮಕ್ಕಳಲ್ಲಿ ಕಣ್ಣೀರು ಹಾಕಿಸಿದೆ 

 

ಓರ್ವ ವಿದ್ಯಾರ್ಥಿನಿ ಚೂಡಿದಾರ ಹಾಕಿಕೊಂಡು ಉದ್ದ ಕೈತೋಳಿನ ಬಟ್ಟೆ ತೊಟ್ಟು ಬಂದಿದ್ದರು. ಅವರ ಕೈತೋಳಿನ ಬಟ್ಟೆಯನ್ನು ಕತ್ತರಿಯಿಂದ ಸಿಬ್ಬಂದಿಗಳು ಕತ್ತರಿಸಿದರು. ಇನ್ನು ಕೆಲವು ಯುವತಿಯರ ಓಲೆ ಬಂಗಾರ, ಮಾಂಗಲ್ಯ ಸರ ಎಲ್ಲವನ್ನು ಬಿಚ್ಚಿಸಿಡಲಾಯಿತು. ರೂಲ್ಸ್​ನ ಅಡಿಯಲ್ಲಿ ಸಿಬ್ಬಂದಿ ಕೆಲಸ ಮಾಡಿದ್ದಾರೆ ಎಂದುಕೊಂಡರು ಸಹ,  ಹಾಕಿಕೊಂಡು ಬಂದ ಚಿನ್ನವನ್ನು ಎಲ್ಲಿ ಇಡಬೇಕು ಎಂಬುದಕ್ಕೆ ಯಾರ ಬಳಿಯು ಉತ್ತರವಿಲ್ಲ. ಎಲ್ಲಿಬೇಕಾದರೂ ಇಟ್ಟು ಬನ್ನಿ ಎನ್ನುವ ಉತ್ತರಗಳು ಪರೀಕ್ಷಾರ್ಥಿಗಳ ವಿಶ್ವಾಸವನ್ನೆ ಕುಂದಿಸಿದೆಯಂತೆ.

READ :ಕೆರಳಿದ ರಾಘವೇಂದ್ರ | ಲಂಚ ಕೊಟ್ಟರೇ ಹಟ್ಟಿಹಬ್ಬ ಮಾಡೋಕೆ ಬಿಡ್ತೀರಿ! ಪೊಲೀಸ್ ಇಲಾಖೆಗೆ ಸಂಸದನ ವಾರ್ನಿಂಗ್​! VIDEO 

 

ಪರೀಕ್ಷೆ ಬರೆಯಲು ಬರುವವರೆಲ್ಲಾ ಸಿರಿವಂತರಾಗಿರಲ್ಲ. ಭವಿಷ್ಯದ ಕನಸ್ಸು ಹೊತ್ತು ಬರುವವರು ಇರುವುದರಲ್ಲೇ ಒಳ್ಳೆಯ ಡ್ರೆಸ್ ಹಾಕಿಕೊಂಡು ಬರುತ್ತಾರೆ. ಅದನ್ನೆ ಕಟ್ ಮಾಡಿ ಕಳುಹಿಸಿದರೇ ವಾಪಸ್ ಹೇಗೆ ಹೋಗುವುದು ಎಂಬುದು ಲೇಡಿಸ್​ ಪ್ರಶ್ನೆ.. ಪರೀಕ್ಷೆಗೆ ಏಕಾಂಗಿಯಾಗಿ ಬರುವ ಹೆಣ್ಣುಮಕ್ಕಳು ತಮ್ಮ ಆಭರಣಗಳನ್ನ ಎಲ್ಲಿ ಇಡಬೇಕು ಎಂಬುದರ ಬಗ್ಗೆಯು ಯಾರು ಯೋಚಿಸುತ್ತಿಲ್ಲ. ಬಿಚ್ಚಿಡಿ ಇಲ್ಲ ಎಕ್ಸಾಮ್​ನಿಂದ ದೂರವಿರಿ ಎಂಬ ಉತ್ತರಗಳು ಪರೀಕ್ಷಾರ್ಥಿಗಳಲ್ಲಿ ಆತಂಕ ಮೂಡಿಸಿತ್ತು. 

 

ಬಂಗಾರ ಒಡವೆ ಮಾಂಗಲ್ಯ ಸರ ಬಿಚ್ಚಿಸಿದ ನಂತರ ಅದನ್ನು ರಕ್ಷಣಾತ್ಮಕವಾಗಿ ಇಡುವಂತ ಯಾವುದೇ ವ್ಯವಸ್ಥೆಗಳು ಶಾಲೆಗಳಲ್ಲಿ ಇಲ್ಲ.. ಬಂಗಾರ ಹೆಚ್ಚು ಕಮ್ಮಿಯಾದ್ರೆ ಅದಕ್ಕೆ ಹೊಣೆಯಾರು ಎಂಬುದಕ್ಕೆ ಉತ್ತರವಿಲ್ಲ. ಇನ್ನು ಯುವತಿಯೊಬ್ಬರು  ವೇಲ್ ತೆಗೆಸಿದ ಪರೀಕ್ಷಾ ವೀಕ್ಷಕರ ಕ್ರಮದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಹಳ್ಳಿಗಳಿಂದ  ಬಂದಿದ್ದ  ಕೆಲವು ಹೆಣ್ಣು ಮಕ್ಕಳು ಪರೀಕ್ಷಾ ನೀತಿಯಿಂದ ತಮಗಾಗುವ ಅವಮಾನ ಎದುರಿಸಲಾಗದೆ. ಪರೀಕ್ಷಾ ಕೊಠಡಿ ಪ್ರವೇಶಿಸದೆ ಮನೆಯತ್ತ ಹೆಜ್ಜೆ ಹಾಕಿದ್ದಾರೆ 

 

ಇನ್ ಸ್ಟ್ರಕ್ಟರ್ ಮತ್ತು ಇನ್ ವಿಜಿಲೇಟರ್ ಗಳಿಗೆ ಏಕಿಲ್ಲ ಮಾನದಂಡ?

 

‘ಹಾಗೆ ನೋಡಿದರೆ ಈ ಹಿಂದೆಲ್ಲಾ ನಡದಿರುವ ಪರೀಕ್ಷಾ ಆಕ್ರಮಗಳೆಲ್ಲಾ ಪರೀಕ್ಷೆ ನಡೆಸಿದ ಕೆಲವು  ಇನ್ ವಿಜಿಲೇಟರ್ ಗಳೇ ನೇರವಾಗಿ ಭಾಗಿಯಾದ ಸಾಕಷ್ಟು ಉದಾಹರಣೆಗಳಿವೆ. ಅವರ ಸಹಕಾರವಿಲ್ಲದೆ ಕೊಠಡಿಯಲ್ಲಿ ಪರೀಕ್ಷಾ ಅಕ್ರಮ ನಡೆಯಲು ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ಪರಿಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಇರುವ ಮಾನದಂಡ ಇನ್ ವಿಜಿಲೇಟರ್ ಗಳಿಗೆ ಏಕಿಲ್ಲ ಎಂಬ ಪ್ರಶ್ನೆ ಮೂಡುತ್ತದೆ. ಸಿಬ್ಬಂದಿ ಸೀರೆ ಉಟ್ಟು ಬರಬಹುದು ಒಡವೇ ಹಾಕಬಹುದು, ಫುಲ್ ತೋಳಿನ ಶರ್ಟ್ ತೊಡಬಹುದು ! ಹೇಗೆ ಬೇಕಾದ್ರೂ ಬರಬಹುದು ಎನ್ನುವುದಾದರೆ,  ಸರ್ಕಾರದ ಮಾನದಂಡಗಳು ಇವರಿಗೂ ಅನ್ವಯಿಸಬೇಕಲ್ಲವೆ.

READ :ಭದ್ರಾವತಿ ಓಲ್ಡ್​ ಟೌನ್​ ಪೊಲೀಸ್ ಸ್ಟೇಷನ್​ ವ್ಯಾಪ್ತಿಯಲ್ಲಿ ಐವರು ಮಕ್ಕಳು ಓರ್ವ ಮಹಿಳೆ ನಾಪತ್ತೆ!

ಇವೆಲ್ಲಾ ಒಂದು ಕಡೆಯಾದರೆ, ಪರೀಕ್ಷಾ ಶುಲ್ಕ ಪಾವತಿಸಿದ ವಿದ್ಯಾರ್ಥಿಗಳಿಗೆ ಕನಿಷ್ಠ ಪರೀಕ್ಷೆ ಬರೆಯುವ ಸ್ಥಳದಲ್ಲಿ ಮೂಲಸೌಕರ್ಯ ಕಲ್ಪಿಸಬೇಕಲ್ಲವೆ ಎಂಬ ಪ್ರಶ್ನೆಗಳು ಸಹಜವಾಗಿಯೇ ಮೂಡುತ್ತದೆ. ಇಂದಿನ ಪರೀಕ್ಷೆಯಲ್ಲಿ ಮುರಿದ ಡೆಸ್ಕ್​ಗಳಲ್ಲಿ ಪರೀಕ್ಷೆ ಬರೆಸಿದ ಬಗ್ಗೆ ಹೆಸರು ಹೇಳಲು ಇಚ್ಚಿಸಿದ ಪರೀಕ್ಷಾರ್ಥಿ ಪ್ರತಿಕ್ರಿಯಿಸಿದ್ದಾರೆ