ಕೆರಳಿದ ರಾಘವೇಂದ್ರ | ಲಂಚ ಕೊಟ್ಟರೇ ಹಟ್ಟಿಹಬ್ಬ ಮಾಡೋಕೆ ಬಿಡ್ತೀರಿ! ಪೊಲೀಸ್ ಇಲಾಖೆಗೆ ಸಂಸದನ ವಾರ್ನಿಂಗ್​! VIDEO

Mp B.Y. Raghavendra staged a protest in front of Shikaripura Rural Police Station after he reprimanded the police officer for obstructing the hatti habba celebrations. Shikaripura News, Shivamogga Politics, Malnad News,

ಕೆರಳಿದ ರಾಘವೇಂದ್ರ | ಲಂಚ ಕೊಟ್ಟರೇ ಹಟ್ಟಿಹಬ್ಬ ಮಾಡೋಕೆ ಬಿಡ್ತೀರಿ! ಪೊಲೀಸ್ ಇಲಾಖೆಗೆ ಸಂಸದನ ವಾರ್ನಿಂಗ್​! VIDEO

KARNATAKA NEWS / ONLINE / Malenadu today/ Nov 18, 2023 SHIVAMOGGA NEWS

Shikaripura |  Malnenadutoday.com |  ಅವನ್ಯಾರೋ ಪೊಲೀಸ್ ಫೋನ್​ ತೆಗೆಯಲ್ಲ, ರೈತರು ಫೋನ್​ ಮಾಡಿದ್ರೆ ನಿಮ್ಮ ಸಬ್​ ಇನ್​ಸ್ಪೆಕ್ಟರ್​ ಫೋನ್ ಮಾಡಿದ್ರೆ ತೆಗೆಯೋಲ್ಲ.. ನೀವು ರೈತರ ಮಕ್ಕಳು ತಾನೆ… ನಿಮ್ಮ ಅಪ್ಪಂದಿರು ರೈತರು ಮಕ್ಕಳು ತಾನೆ. ಎಷ್ಟು ಕಡೆ ಲಂಚ ತೆಗೆದುಕೊಂಡು ಹಟ್ಟಿಹಬ್ಬ ಮಾಡಿದ್ದು.. ನಮ್ಮ ಹತ್ರ ಪಟ್ಟಿಯಿಲ್ವಾ… 

ಹೀಗೆ ಸಂಸದ ಬಿ.ವೈ.ರಾಘವೇಂದ್ರರವರು ಪೊಲೀಸ್ ಅಧಿಕಾರಿಯನ್ನು ತರಾಟೆ ತೆಗೆದುಕೊಂಡಿದ್ದಾರೆ. ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ  ನಿನ್ನೆ ಸಂಸದ ರಾಘವೇಂದ್ರರವರು ಅಕ್ಷರಶಃ ವ್ಯಾಘ್ರರಾಗಿದ್ದರು.. ಹಟ್ಟಿಹಬ್ಬ ಮಾಡೋದಕ್ಕೆ ಬಿಡಲಿಲ್ಲ ಎಂಬ ಕಾರಣಕ್ಕೆ ಠಾಣೆಯ ಮುಂದೆ ಜಮಾಯಿಸಿದ್ದ ಜನರ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಂಸದರು, ನೇರವಾಗಿ ಪೊಲೀಸ್ ಅಧಿಕಾರಿಯನ್ನು ತರಾಟೆ ತೆಗೆದುಕೊಂಡಿದ್ದಾರೆ. 

ಜನರ ಮುಂದೆ ಕೈ ಕಟ್ಟಿ ನಿಂತಿದ್ದ ಪೊಲೀಸ್ ಅಧಿಕಾರಿಯನ್ನು ನೇರವಾಗಿಯೇ ತರಾಟೆ ತೆಗೆದುಕೊಂಡ ಸಂಸದ ಫೋನ್​ ಏಕೆ ತೆಗೆಯೋದಿಲ್ಲ ರೈತರದ್ದು ಎಂದು ಪ್ರಶ್ನಿಸಿದರು. ಅಲ್ಲದೆ ಹಟ್ಟಿಹಬ್ಬಕ್ಕೆ ಎಷ್ಟು ಕಡೆ ಲಂಚ ತೆಗೆದುಕೊಂಡಿದ್ದೀರಿ ನಮ್ಮ ಬಳಿ ಪಟ್ಟಿ ಇಲ್ವಾ .. ಒಳಗಡೆ ನಾನು ತೋರಿಸುತ್ತೇನೆ ಎಂದರು. ರೈತರನ್ನು ಸಹ ನೀವು ಬಿಟ್ಟಿಲ್ಲ ನೀವು ಎಂದು ಪ್ರಶ್ನಿಸಿದ್ದಾರೆ.. 

READ :ಶಿವಮೊಗ್ಗದಲ್ಲಿ ಸಾವಿರಾರು ಜನರು ಒಟ್ಟಾಗಿ World Cup Final ಮ್ಯಾಚ್​ ನೋಡಬಹುದು ! ಇಲ್ಲಿದೆ ಅವಕಾಶ!

ಪೊಲೀಸ್ ಇಲಾಖೆಗೆ ಗೌರವ ಕೊಟ್ಟು ರಾಜಕಾರಣ ಮಾಡಿದ ಬಿಎಸ್​ವೈ ಕುಟುಂಬವಿದು. ಹಿಂದಿನ ಗೃಹಸಚಿವರು ಶಿಕಾರಿಪುರಕ್ಕೆ ಕ್ವಾಟ್ರಸ್​ ಕೊಡುವುದಿಲ್ಲ ಎಂದಿದ್ದರು. ಅವರ ಕೈ ಹಿಡಿದು ಪೊಲೀಸ್ ಇಲಾಖೆ ಕಷ್ಟಪಟ್ಟು ಕೆಲಸ ಮಾಡುತ್ತದೆ. ಅವರಿಗಾಗಿ ಕ್ವಾಟ್ರಸ್​ ಬೇಕು ಎಂದು ಸ್ಯಾಕ್ಷನ್ ಮಾಡಿಸಿಕೊಂಡು ಬಂದಿದ್ದೇವೆ. ಇದೀಗ ಕಟ್ಟಡ ನಿರ್ಮಾಣವಾಗುತ್ತಿದೆ. ಇನ್ಯಾರೋ ಗೃಹಸಚಿವರು ಬಂದು ಅದನ್ನ ಉದ್ಘಾಟನೆ ಮಾಡುತ್ತಾರೆ. ಹೀಗಿದ್ದಾಗ ನಿಮಗೆ ಅನಿಸಬೇಕಿತ್ತು. ರೈತರ ಮಕ್ಕಳ ಹಬ್ಬಕ್ಕೆ ಅವಕಾಶ ನೀಡಬೇಕು ಎಂದು ಅಂತಾ ತಿಳಿಸಿದರು. 

READ :18 ಅಕೌಂಟ್​ನಲ್ಲಿ 80 ಲಕ್ಷ ನಕಲಿ ಚಿನ್ನದ ಸಾಲ! ಒಂದುವರೆ ಕೋಟಿ ಲೋನ್ ಕೇಳಿದಾಗ ಸಿಕ್ಕಿಬಿದ್ದಿದ್ದೇಗೆ ಗೊತ್ತಾ?

ಗುರುಮೂರ್ತಿಯುವರು ಒಂಬತ್ತು ಗಂಟೆ ಫೋನ್ ಮಾಡಿದ್ದರು. 10 ಗಂಟೆಯವರೆಗೂ ಪ್ರಕ್ರಿಯೆ ಮುಗಿಸಬಹುದಿತ್ತು. ಎಸ್​ಪಿ ಮಿಥುನ್​ ಕುಮಾರ್​ರವರಿಗೂ ಗುರುಮೂರ್ತಿಯವರು ಫೋನ್ ಮಾಡಿ ಮಾತುಕತೆ ನಡೆಸಿದ್ದರು. ಹೀಗಿದ್ದರೂ ಒಂದು ಗಂಟೆ ಸುಮಾರಿಗೆ ಬಂದು ರೈತರ ಮೇಲೆ ಲಾಠಿಚಾರ್ಜ್​ ಮಾಡುತ್ತೀರಾ ಎಂದು ರಾಘವೇಂದ್ರರವರು ಆಕ್ರೋಶಗೊಂಡರು.

ಇಷ್ಟೆ ಅಲ್ಲದೆ ಸ್ಥಳದಲ್ಲಿ ಹಿಂದೂ ಭಾವನೆಗಳಿಗೆ ದಕ್ಕೆ ತಂದ ಆರೋಪ ಹೊರಿಸಿ ಪೊಲೀಸರ ವಿರುದ್ಧ ದಿಕ್ಕಾರ ಕೂಗಲಾಯ್ತು. ಸಂಸದ ರಾಘವೇಂದ್ರರವರು ಸಹ ಪೊಲೀಸ್ ಇಲಾಖೆ ವಿರುದ್ಧ ದಿಕ್ಕಾರ ಕೂಗಿದರು.